• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

4 ಮಕ್ಕಳ ಹಡೆದರೆ ಮಾತ್ರ ಹಿಂದೂ ಸಮಾಜ ಉದ್ಧಾರ!

|

ಬೆಂಗಳೂರು, ಜ.2 : ಹಿಂದೂ ಹೆಣ್ಣು ಮಕ್ಕಳು ಕನಿಷ್ಠ 4 ಮಕ್ಕಳನ್ನು ಪಡೆಯಬೇಕು ಎಂದು ಹೇಳುವ ಮೂಲಕ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ.

ನಾಲ್ಕು ಜನ ಹೆಂಡಿತಿಯರಿಗೆ 40 ಮಕ್ಕಳು ಎಂಬ ಪರಿಕಲ್ಪನೆಯನ್ನು ಭಾರತದಲ್ಲಿ ಅಳವಡಿಸಲು ಸಾಧ್ಯವಿಲ್ಲ. ಹಿಂದೂ ಸಮಾಜ ರಕ್ಷಣೆಗೆ ಇರುವುದು ಒಂದೇ ದಾರಿ. ಸಮಾಜದ ಪ್ರತಿಯೊಬ್ಬ ಮಹಿಳೆಯು ನಾಲ್ಕು ಮಕ್ಕಳನ್ನು ಪಡೆಯಬೇಕು ಎಂದು ಸಾಕ್ಷಿ ಮಹಾರಾಜ್ ಮೀರತ್ ನಲ್ಲಿ ನಡೆದ ಸಂತ ಸಮಾಗಮ ಮಹೋತ್ಸವದಲ್ಲಿ ಹೇಳಿರುವುದು ಚರ್ಚೆಗೆ ಕಾರಣವಾಗಿದೆ.[ಮತಾಂತರ ಸರಿಯಾದರೇ, ಮರುಮತಾಂತರವೇಕೆ ತಪ್ಪು?]

ಅಯೊಧ್ಯಯಲ್ಲಿ ರಾಮಮಂದಿರ ನಿರ್ಮಾಣವನ್ನು ತಡೆಯಲು ಯಾವ ಶಕ್ತಿಗಳಿಂದಲೂ ಸಾಧ್ಯವಿಲ್ಲ. ದೆಹಲಿಯಲ್ಲಿಯೂ ಬಿಜೆಪಿ ಅಧಿಕಾರ ಹಿಡಿಯಲಿದೆ. ಆಗ್ರಾ ಮತಾಂತರ ಪ್ರಕರಣವನ್ನು ಉದಾಹರಿಸಿದ ಸಾಕ್ಷಿ ಭಾರತ ಹಿಂದೂಗಳ ದೇಶ, ಇಲ್ಲಿ ಹಿಂದೂ ಧರ್ಮಕ್ಕೆ ಮತಾಂತರ ಆಗುವುದರಲ್ಲಿ ಯಾವ ತಪ್ಪಿದೆ? ಎಂದು ಪ್ರಶ್ನಿಸಿದ್ದಾರೆ.[ವಿವಾದದಲ್ಲೇ ಮುಳುಗೆದ್ದ ಟಾಪ್ 10 'ದೇವಮಾನವರು']

ಮದರಸಾಗಳು ಭಯೋತ್ಪಾದನೆ ಪಾಠ ಬೋಧಿಸುವ ಕೇಂದ್ರಗಳಾಗಿವೆ. ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದು ಹೇಳಿಕೆ ನೀಢಿ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಸಾಕ್ಷಿ ಕ್ಷಮೆಯಾಚಿಸಿದ ನಂತರ ವಿವಾದ ತಣ್ಣಗಾಗಿತ್ತು. ಒಟ್ಟಿನಲ್ಲಿ ಸಾಕ್ಷಿ ಮಹಾರಾಜ್ ರ ಹಿಡಿತ ತಪ್ಪಿದ ನಾಲಿಗೆ ಆರ್ ಎಸ್ ಎಸ್ ಮತ್ತು ಬಿಜೆಪಿ ಮುಖಂಡರಿಗೆ ಮುಜುಗರ ತರುತ್ತಿರುವುದು ಸುಳ್ಳಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sangh hotheads just won't be reined it. Despite reservations from the BJP leadership at the centre, which had to recently face considerable flak in both houses of Parliament in the aftermath of the Agra conversion controversy, Unnao MP Sakshi Maharaj has once again stirred a hornet's nest by saying all Hindu women must produce at least four children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more