ಐಎಸ್‌ಐಗೆ ಸಹಾಯ, ವಾಯಪಡೆ ನಿವೃತ್ತ ಅಧಿಕಾರಿ ಬಂಧನ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಡಿಸೆಂಬರ್ 29 : ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಆರೋಪದ ಮೇಲೆ ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ನವೆಂಬರ್‌ನಲ್ಲಿ ಉತ್ತರ ಪ್ರದೇಶದಲ್ಲಿ ಐಎಸ್‌ಐ ಏಜೆಂಟ್‌ನನ್ನು ಪೊಲೀಸರು ಬಂಧಿಸಿದ್ದರು.

ಮಂಗಳವಾರ ವಾಯುಪಡೆಯ ನಿವೃತ್ತ ಅಧಿಕಾರಿಯನ್ನು ದೆಹಲಿ ಪೊಲೀಸರು ಪಂಜಾಬ್‌ನಲ್ಲಿ ಬಂಧಿಸಿದ್ದಾರೆ. ಬಂಧಿತ ನಿವೃತ್ತ ಅಧಿಕಾರಿ ಐಎಸ್ಐಗೆ ಹಲವು ಮಾಹಿತಿಗಳನ್ನು ಕಳಿಸುತ್ತಿದ್ದ ಎಂದು ಆರೋಪಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. [ಉತ್ತರ ಪ್ರದೇಶ : ISI ಏಜೆಂಟ್ ಸೆರೆ]

isi

ಕಳೆದ ಎರಡು ತಿಂಗಳಿನಿಂದ ಐಎಸ್‌ಐ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಆರೋಪದ ಮೇಲೆ ಹಲವು ನಿವೃತ್ತ ಸೇನಾಧಿಕಾರಿಗಳನ್ನು ಬಂಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ ನಿವೃತ್ತ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. [ಒಡಿಶಾದಲ್ಲಿ ಶಂಕಿತ ಐಎಸ್ಐ ಏಜೆಂಟ್ ಬಂಧನ]

ಹಣಕ್ಕಾಗಿ ಭಾರತೀಯ ಸೇನೆಯ ಹಲವು ಮಾಹಿತಿಗಳನ್ನು ಬಂಧಿತ ಅಧಿಕಾರಿಗಳು ಐಎಸ್‌ಐ ಜೊತೆ ಹಂಚಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸೇನೆಯ ಬಲ, ಪಹರೆ ಕಾಯುವ ಸಮಯ ಮುಂತಾದ ಮಾಹಿತಿಗಳು ಹಂಚಿಕೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ನೆಲೆಸಿರುವ ಕೆಲವು ನಿವೃತ್ತ ಅಧಿಕಾರಿಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಇದವರೆಗೂ ಬಂಧಿಸಿದವರ ವಿಚಾರಣೆ ನಡೆಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In furtherance of their probe into the espionage cases a former personnel of the Indian Air Force has been arrested by the Delhi police from Punjab. Delhi police picked up the former IAF personnel on the suspicion that he was passing on information to the ISI.
Please Wait while comments are loading...