ಇಪಿಎಫ್‌ಒ ಸಭೆ: ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿ ಮೇಲೆ 8.15% ಬಡ್ಡಿ ದರ ನಿಗದಿ
ನವದೆಹಲಿ, ಮಾರ್ಚ್. 28: ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಯ ಬಡ್ಡಿ ದರವನ್ನು ನಿಗದಿಪಡಿಸುವ ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ (ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) 2022-23ರ ಇಪಿಎಫ್ ಠೇವಣಿಗಳ ಮೇಲೆ ಶೇಕಡಾ 8.15 ಬಡ್ಡಿ ದರವನ್ನು ನಿಗದಿಪಡಿಸಿದೆ.
ಮಾರ್ಚ್ 2022 ರಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ತನ್ನ ಸುಮಾರು ಆರು ಕೋಟಿ ಸಕ್ರಿಯ ಚಂದಾದಾರರಿಗೆ 2020-21 ರಲ್ಲಿ ಶೇಕಡಾ 8.5 ರಷ್ಟಿದ್ದ ಬಡ್ಡಿ ದರವನ್ನು 2021-22 ರ ರಲ್ಲಿ ನಾಲ್ಕು ದಶಕಗಳ ಕಡಿಮೆ ಅಂದರೆ ಶೇಕಡಾ 8.1 ಕ್ಕೆ ಇಳಿಸಿತ್ತು. ಆದರೆ, ಈ ವರ್ಷದ ಸಭೆಯ ಬಳಿಕ ಹಣಕಾಸು ವರ್ಷ 2022-23ಕ್ಕೆ ಪಿಎಫ್ ಬಡ್ಡಿದರವನ್ನು ಶೇಕಡಾ 8.15 ಕ್ಕೆ ನಿಗದಿಪಡಿಸಲಾಗಿದೆ.

1977 - 78ರಲ್ಲಿ ಇಪಿಎಫ್ ಬಡ್ಡಿ ದರ ಶೇ 8ರಷ್ಟಿದ್ದ ನಂತರ 2021 - 22 ರ ಬಡ್ಡಿ ದರ ಪರಿಷ್ಕರಣೆ ಅತ್ಯಂತ ಕಡಿಮೆ ಎಂದು ಹೇಳಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಬೋರ್ಡ್ ಸಭೆ ಮಾರ್ಚ್ 27 ಮತ್ತು 28ರಂದು ನಡೆದಿದ್ದು ಸಭೆಯಲ್ಲಿ ಬಡ್ಡಿದರವನ್ನು ಪರಿಷ್ಕರಣೆ ಮಾಡಲಾಗಿದೆ.
"ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಅಪೆಕ್ಸ್ ನಿರ್ಧಾರ - ನಿರ್ಮಾಣ ಸಂಸ್ಥೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (CBT) ಮಂಗಳವಾರ ನಡೆದ ತನ್ನ ಸಭೆಯಲ್ಲಿ 2022-23 ಕ್ಕೆ ಇಪಿಎಫ್‌ನಲ್ಲಿ ಶೇಕಡಾ 8.15 ಬಡ್ಡಿದರವನ್ನು ಒದಗಿಸಲು ನಿರ್ಧರಿಸಿದೆ" ಎಂದು ಮೂಲವೊಂದು ತಿಳಿಸಿದೆ.
2020 - 21ರ ಪಿಎಫ್ ಠೇವಣಿಗಳ ಮೇಲಿನ 8.5 ಶೇಕಡಾ ಬಡ್ಡಿ ದರವನ್ನು ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟ್ ಮಾರ್ಚ್ 2021 ರಲ್ಲಿ ನಿರ್ಧರಿಸಿದೆ. ಸಿಬಿಟಿಯ ನಿರ್ಧಾರದ ನಂತರ, 2022-23 ರ ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಸರ್ಕಾರದ ಅನುಮೋದನೆಯ ನಂತರ, 2022-23 ರ ಮೇಲಿನ ಬಡ್ಡಿ ದರವನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಆರು ಕೋಟಿಗೂ ಅಧಿಕ ಸಕ್ರಿಯ ಚಂದಾದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

ಹಣಕಾಸು ಸಚಿವಾಲಯದ ಮೂಲಕ ಸರ್ಕಾರವು ಅನುಮೋದಿಸಿದ ನಂತರವೇ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಬಡ್ಡಿದರವನ್ನು ಒದಗಿಸುತ್ತದೆ. ಮಾರ್ಚ್ 2020 ರಲ್ಲಿ, ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2018 - 19ಕ್ಕೆ ಒದಗಿಸಿದ 8.65 ಪ್ರತಿಶತದಿಂದ 2019 - 20ಕ್ಕೆ ಏಳು ವರ್ಷಗಳ ಕನಿಷ್ಠ 8.5 ಪ್ರತಿಶತಕ್ಕೆ ಇಳಿಸಿದೆ.
ಇಪಿಎಫ್‌ಒ ತನ್ನ ಚಂದಾದಾರರಿಗೆ 2016 - 17ರಲ್ಲಿ ಶೇ 8.65 ಮತ್ತು 2017 - 18ರಲ್ಲಿ ಶೇ 8.55 ಬಡ್ಡಿ ದರವನ್ನು ಒದಗಿಸಿದೆ. 2015 - 16ರಲ್ಲಿ ಬಡ್ಡಿ ದರವು ಶೇಕಡ 8.8 ರಷ್ಟಿತ್ತು. ನಿವೃತ್ತಿ ನಿಧಿ ಸಂಸ್ಥೆಯು 2013 - 14 ಮತ್ತು 2014 - 15 ರಲ್ಲಿ 8.75 ಪರ್ಸೆಂಟ್ ಬಡ್ಡಿದರವನ್ನು ನೀಡಿದೆ. ಇದು 2012-13 ರ 8.5 ಶೇಕಡಾಕ್ಕಿಂತ ಹೆಚ್ಚಾಗಿದೆ. 2011 - 12ರಲ್ಲಿ ಬಡ್ಡಿ ದರ ಶೇ.8.25ರಷ್ಟಿತ್ತು.












Click it and Unblock the Notifications