ಛತ್ತೀಸ್ ಗಢದಲ್ಲಿ ಮತ್ತೊಮ್ಮೆ ನಕ್ಸಲರಿಂದ ಬಾಂಬ್ ಸ್ಫೋಟ
ರಾಯ್ ಪುರ್, ನವೆಂಬರ್ 11: ವಿಧಾನಸಭೆ ಚುನಾವಣೆ ಮತದಾನಕ್ಕೂ ಒಂದು ದಿನ ಮುನ್ನ ನಕ್ಸಲರು, ಸರಿ ಸುಮಾರು 7 ಕಡೆ ಬಾಂಬ್ ಸ್ಫೋಟ ಮಾಡಿದ್ದಾರೆ. ಗಡಿ ಭದ್ರತಾ ಪಡೆ ಹಾಗೂ ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಆತಂಕದ ವಾತಾವರಣ ಉಂಟಾಗಿದೆ.
ರಾಯ್ ಪುರ್ ನಿಂದ 175 ಕಿ.ಮೀ ದೂರದಲ್ಲಿರ್ವ ಕಾಂಕೇರ್ ಜಿಲ್ಲೆಯ ಅಂತಾಗರ್ ಗ್ರಾಮದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಸುಧಾರಿತ ಎಲ್ ಇಡಿ ಬಾಂಬ್ ಸ್ಫೋಟದಿಂದ ಓರ್ವ ಗಡಿ ಭದ್ರತಾ ಪಡೆ(ಬಿಎಸ್ ಎಫ್) ಯೋಧರಿಗೆ ಗಾಯವಾಗಿರುವ ವರದಿ ಬಂದಿದೆ.

ಸೋಮವಾರದಂದು(ನವೆಂಬರ್ 12) ರಾಜ್ ನಂದಗಾಂವ್ ಜಿಲ್ಲೆಯಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆಯಲು ಸಿದ್ಧತೆ ನಡೆಸಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಭದ್ರತಾ ಪಡೆ ಸಿಬ್ಬಂದಿಯನ್ನು ಚುನಾವಣೆ ನಿರ್ವಹಣೆಗಾಗಿ ನಿಯೋಜಿಸಲಾಗಿದೆ.
#UPDATE A set of 6 IEDs were planted in a series and were set off in one go between village Gome and Gattakal in Koyali beda #Chhattisgarh https://t.co/p8NvgTogDA
— ANI (@ANI) November 11, 2018
ಚುನಾವಣೆಯನ್ನು ಬಹಿಷ್ಕರಿಸುವಂತೆ ಕರೆ ನೀಡಿರುವ ಮಾವೋವಾದಿಗಳನ್ನು ಹುಡುಕಿಕೊಂಡು ನಕ್ಸಲ್ ನಿಗ್ರಹ ಪಡೆ ಬಸ್ತಾರ್ ವಿಭಾಗದ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಗುಂಡಿನ ದಾಳಿ ನಡೆಸಲಾಗಿದೆ.












Click it and Unblock the Notifications