ಹಿಂದೂ ಆಹಾರ ಪೂರೈಸದಿರುವ ನಿರ್ಧಾರದಿಂದ ಹಿಂದೆ ಸರಿದ ಎಮರೈಟ್ಸ್‌

ನವದೆಹಲಿ, ಜುಲೈ 04: ಎಮರೈಟ್ಸ್ ವಿಮಾನ ಸೇವಾ ಸಂಸ್ಥೆಯು ಹಿಂದೂ ಆಹಾರ ಕೊಡದಿರುವ ತನ್ನ ನಿರ್ಣಯದಿಂದ ಹಿಂದೆ ಸರಿದು ಹಿಂದೂ ಆಹಾರವನ್ನು ಪ್ರಯಾಣಿಕರಿಗೆ ಒದಗಿಸುವ ನಿರ್ಣಯ ಮಾಡಿದೆ.

ಎರಡು ದಿನಗಳ ಹಿಂದೆಯಷ್ಟೆ ಎಮರೈಟ್ಸ್ ವಿಮಾನ ಸೇವಾ ಸಂಸ್ಥೆಯು ಹಿಂದೂ ಆಹಾರವನ್ನು ತನ್ನ ಪ್ರಯಾಣಿಕರಿಗೆ ಒದಗಿಸದಿರಲು ನಿರ್ಣಯಿಸಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ತೀವ್ರ ಒತ್ತಡ ಬಂದ ಕಾರಣ ಸಂಸ್ಥೆಯು ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

Emirates to continue Hindu meals to his costumers

ಪ್ರಯಾಣಿಕರ ಒತ್ತಾಯದ ಮೇರೆಗೆ ಎಮರೈಟ್ಸ್‌ ವಿಮಾನಗಳಲ್ಲಿ ಹಿಂದೂ ರೀತಿಯ ಸಸ್ಯಾಹಾರ ಹಾಗೂ ಮಾಂಸಾಹಾರಗಳನ್ನು ಪೂರೈಸಲು ಸಂಸ್ಥೆ ನಿರ್ಧರಿಸಿದ್ದು, ಭಾರತೀಯರ ಸಂಪ್ರದಾಯಕ್ಕೆ ಅನುಗುಣವಾಗಿ ಹಿಂದೂ ಆಹಾರವನ್ನು ಪೂರೈಸಲಾಗುವುದು ಎಂದಿದೆ ಎಮರೈಟ್ಸ್.

ವಿಮಾನ ಟಿಕೆಟ್ ಕಾಯ್ದಿರಿಸಬೇಕಾದರೆ ಹಿಂದೂ ಸಸ್ಯಹಾರ ಹಾಗೂ ಮಾಂಸಹಾರ ಎಂಬ ಆಯ್ಕೆಗಳನ್ನು ಪ್ರಯಾಣಿಕರು ಈ ಮುಂಚಿನಂತೆಯೇ ಆಯ್ದುಕೊಳ್ಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+