ಚುಟುಕು ಸುದ್ದಿ: ರಾಹುಲ್ ವಿರುದ್ಧ ತನಿಖೆ ಆರಂಭ
ಬೆಂಗಳೂರು, ಮೇ.9: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
11.30: ಅಮೇಥಿ ಬೂತಿನಲ್ಲಿ ಕಾಣಿಸಿಕೊಂಡಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ತನಿಖೆಗೆ ಮುಂದಾದ ಚುನಾವಣಾ ಆಯೋಗ. ಮತದಾನದ ವೇಳೆ ಅವಧಿ ಮೀರಿ ಮತಗಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪ ರಾಹುಲ್ ಮೇಲಿದೆ
11.15: ನರೇಂದ್ರ ಮೋದಿ ಅವರನ್ನು 'ಕತ್ತೆ' ಎಂದು ಕರೆದಿದ್ದ ಮಮತಾ ಬ್ಯಾನರ್ಜಿ ಈಗ 'ದಂಗಾ ಬಾಬು' ಎಂದಿದ್ದಾರೆ. ಗಲಭೆ, ದಂಗೆಗಳಿಗೆ ಮೋದಿ ಕಾರಣ ಕರ್ತ ಎಂಬರ್ಥದಲ್ಲಿ ಕಿಡಿಕಾರಿದ್ದಾರೆ.
11.00: ಮೋದಿ ತಾನು ಹಿಂದುಳಿದ ವರ್ಗಕ್ಕೆ ಸೇರಿದವನು ಎಂದು ಹೇಳಿರುವುದು ಹಸಿ ಸುಳ್ಳು ಎಂದು ಕಾಂಗ್ರೆಸ್ ಟೀಕಿಸಿದೆ. [ವಿವರ ಇಲ್ಲಿದೆ]
10.45: ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

10.30: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜನಾರ್ದನ ರೆಡ್ಡಿ ಅವರು ಶುಕ್ರವಾರ ನಿಧನರಾಗಿದ್ದಾರೆ.
10.15: ವಾರಣಾಸಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಪ್ರಚಾರ ಮೆರವಣಿಗೆಗೆ ಗುಲ್ ಪನಾಗ್ ಹಾಗೂ ಭಗವಂತ್ ಮನ್ ಸೇರ್ಪಡೆಗೊಳ್ಳಲಿದ್ದಾರೆ.
10.00: ಬೆಂಗಾಳದಲ್ಲಿ ಮುಂದುವರೆದ ಹಿಂಸಾಚಾರ ಮತ್ತೊಮ್ಮೆ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ.
9.20: ನರೇಂದ್ರ ಮೋದಿ ಅವರು BHU ಕ್ಯಾಂಪಿಸಿನಲ್ಲಿ ಸಭೆ ಉದ್ದೇಶಿಸಿ ಭಾಷಣ ಮಾಡಿದ್ದಾರೆ.












Click it and Unblock the Notifications