ಚುಟುಕು ಸುದ್ದಿ: ಗುಜರಾತಿನಲ್ಲಿ ರಾಹುಲ್-ಮೋದಿ ಮುಖಾಮುಖಿ
ಬೆಂಗಳೂರು, ಏ.26: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
11.00: ಗುಜರಾತಿನ ಜನತೆಗೆ ಇಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾಷಣ ಕೇಳುವ ಸೌಭಾಗ್ಯ ಒದಗಿ ಬಂದಿದೆ.
10.50: ಬಿಜೆಪಿ ಅಧಿಕಾರಕ್ಕೆ ಬಂದರೆ ಸೀಮಾಂಧ್ರ ಭಾಗಕ್ಕೆ ವಿಶೇಷ ಸ್ಥಾನಮಾನ ಅವಧಿ 5 ರಿಂದ 10ವರ್ಷಕ್ಕೇರಿಸಲಾಗುವುದು: ವೆಂಕಯ್ಯ ನಾಯ್ಡು
10.45: ಅಮೇಥಿಯಲ್ಲಿ ಮತ್ತೊಮ್ಮೆ ಪ್ರಿಯಾಂಕಾ ವಾಧ್ರಾರಿಂದ ಮತಯಾಚನೆ.

10.30: ಎನ್ ಡಿಎ ಅಧಿಕಾರಕ್ಕೆ ಬಂದರೆ ಅಮೃತಸರದ ಅಭ್ಯರ್ಥಿ ಅರುಣ್ ಜೇಟ್ಲಿ ಉಪ ಪ್ರಧಾನಿ ಪಟ್ಟಕ್ಕೇರುತ್ತಾರಂತೆ.
10.15: ದಲಿತ ಮಹಿಳೆಯರ ಮನೆಗೆ ಮಜಾ ಮಾಡಲು ರಾಹುಲ್ ಹೋಗುತ್ತಾರೆ ಎಂಬ ಹೇಳಿಕೆಯನ್ನು ಬಾಬಾ ರಾಮದೇವ್ ಹಿಂಪಡೆದಿದ್ದಾರೆ.












Click it and Unblock the Notifications