'ಮೋದಿ ವಿರುದ್ಧ ಭೂ ಹಂಚಿಕೆ ಆಕ್ರಮ ಆರೋಪ'
ಬೆಂಗಳೂರು, ಏ.25: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
2.30: ಮೋದಿ ಅವರು ಶಾಲೆಯಲ್ಲಿ ಪಾಠ ಮಾಡುವಂತೆ ಭಾಷಣ ಮಾಡುತ್ತಾರೆ. ಆದರೆ, ಅವರು ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲಿ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
2.00: ನರೇಂದ್ರ ಮೋದಿ ಅವರು ಪಂಜಾಬಿನಲ್ಲಿ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

11.15: ಸೋನಿಯಾ ಗಾಂಧಿ ಪರ ರಾಯ್ ಬರೇಲಿಯಲ್ಲಿ ಪುತ್ರಿ ಪ್ರಿಯಾಂಕಾ ಗಾಂಧಿ ಅವರಿಂದ ಪ್ರಚಾರ.
11.00: ಆಯೋಗದಿಂದ ನೋಟಿಸ್ ಪಡೆದರೂ ಮೋದಿ ವಿರುದ್ಧ ಕಿಡಿಕಾರಿದ ಬೇನಿಪ್ರಸಾದ್ ವರ್ಮಾ.
10.45: ಜವಾಹರಲಾಲ್ ನೆಹರೂ ವಿವಿಯ ವಿದ್ಯಾರ್ಥಿ ಸಂಘವು ವಾರಣಾಸಿಗೆ ಭೇಟಿ ನೀಡಿ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ವಿರುದ್ಧ ಅಭಿಯಾನವೊಂದನ್ನು ನಡೆಸಲು ಯೋಜನೆ ರೂಪಿಸಿದೆ .ಚುನಾಯಿತ ಸಂಘಟನೆಯಾಗಿ ಅದು ತಮ್ಮ ಕರ್ತವ್ಯವಾಗಿದೆ ಎಂದು ಜೆಎನ್ ಯುಎಸ್ ಯು ಅಧ್ಯಕ್ಷ ಅಕ್ಬರ್ ಚೌಧರಿ ತಿಳಿಸಿದ್ದಾರೆ.

10.30: ಚುನಾವಣಾ ಪ್ರಚಾರ ಸಭೆಗಳಲ್ಲಿ ಕೇಂದ್ರ ಸಚಿವ ಬೇನಿಪ್ರಸಾದ್ ವರ್ಮಾ(ಮೋದಿ ವಿರುದ್ಧ) ಹಾಗೂ ಬಿಜೆಪಿ ನಾಯಕ ವಿನಯ್ ಕತಿಯಾರ್(ಅಜಂ ಖಾನ್ ವಿರುದ್ಧ ಹೇಳಿಕೆ) ನೀಡಿರುವ ಆಕ್ಷೇಪಕಾರಿ ಹೇಳಿಕೆಗಳನ್ನು ಸ್ವಯಂಪ್ರೇರಿತರಾಗಿ ಪರಿಗಣನೆಗೆ ತೆಗೆದುಕೊಂಡಿರುವ ಚುನಾವಣಾ ಆಯೋಗದಿಂದ ನೋಟಿಸ್ ಜಾರಿ.
10.15: ಬಿಹಾರದ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಗೆ ಜಾಮೀನು ಮಂಜೂರು. ದ್ವೇಷ ಭಾಷಣ ಹಿನ್ನೆಲೆಯಲ್ಲಿ ಅವರ ವಿರುದ್ಧ ವಾರೆಂಟ್ ಜಾರಿಗೊಳಿಸಲಾಗಿತ್ತು.
9.45: 6ನೇ ಹಂತದ ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಜಾರ್ಖಂಡ್ ನಲ್ಲಿ 8 ಜನ ಚುನಾವಣಾ ಸಿಬ್ಬಂದಿ ಗಲಭೆಗೆ ಬಲಿಯಾಗಿದ್ದಾರೆ.
9.05: 6ನೇ ಹಂತದ ಮತದಾನದಲ್ಲಿ ಪಶ್ಚಿಮ ಬಂಗಾಳ ಹಾಗೂ ಪಾಂಡಿಚೇರಿ ತಲಾ 82%, ತಮಿಳುನಾಡು 72% ಮತದಾನ ಕಂಡಿದೆ. ಉಳಿದಂತೆ ಬಿಹಾರ,ರಾಜಸ್ಥಾನ, ಉತ್ತರಪ್ರದೇಶ ತಲಾ 60 %. ಜಾರ್ಖಂಡ್ 63%.












Click it and Unblock the Notifications