ಚುಟುಕು: ಬುಖಾರಿ ಭೇಟಿ ಮಾಡಿದ ಸೋನಿಯಾ

ಬೆಂಗಳೂರು, ಏ.3: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

13.45: ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಮಾಮ್ ಬುಖಾರಿ ಅವರನ್ನು ಭೇಟಿ ಮಾಡಿದ್ದನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ಧಾರ್ಮಿಕ ಮುಖಂಡರ ಭೇಟಿಯಲ್ಲಿ ತಪ್ಪೇನಿಲ್ಲ ಎಂದಿದೆ. ಕಾಂಗ್ರೆಸ್ ಗೆ ಮತ ನೀಡಿ ಎಂದು ಮುಸ್ಲಿಮರಿಗೆ ಬುಖಾರಿ ಕರೆ ನೀಡುತ್ತಾರೆ ಎಂದು ತಿಳಿದು ಬಂದಿದೆ.
13.30: ವಡೋದರಾದಲ್ಲಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ ಮಧುಸೂದನ್ ಮಿಸ್ತ್ರಿ ಅವರನ್ನು ಗಲಭೆ, ದೊಂಬಿ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
13.15: ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಎಪಿ ಅಭ್ಯರ್ಥಿಯಾಗಿ ಮಾಜಿ ಜಡ್ಜ್ ಫಕ್ರುದ್ದೀನ್ ಸೆಣಸಲಿದ್ದಾರೆ. ಅಲಹಾಬಾದಿನಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಮೊಮ್ಮಗ ಆದರ್ಶ್ ಶಾಸ್ತ್ರಿ ಎಎಪಿ ಅಭ್ಯರ್ಥಿಯಾಗಿದ್ದಾರೆ.

Elections 2014 : News in Brief on April 03

12.50: ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ಅಜಂ ಖಾನ್ ಹಾಗೂ ಕಾಂಗ್ರೆಸ್ಸಿನ ಬೇನಿ ಪ್ರಸಾದ್ ವರ್ಮಾ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.
12.40: ಬಿಜೆಪಿಯಿಂದ ಹೊರಬಿದ್ದಿರುವ ಬಂಡಾಯ ಅಭ್ಯರ್ಥಿ ಜಸ್ವಂತ್ ಸಿಂಗ್ ಅವರ ಪರ ರಾಜಸ್ಥಾನದ ಬಾರ್ಮಾರ್ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರೆ ಅವರ ಪುತ್ರ ಮನ್ವೇಂದ್ರ ಸಿಂಗ್ ಅವರ ಮೇಲೆ ಕ್ರಮ ಜರುಗಿಸಲು ಬಿಜೆಪಿ ಯೋಜಿಸಿದೆ.

12.30: ಆಂಧ್ರಪ್ರದೇಶ ವಿಭಜನೆ ಖಂಡಿಸಿಸ್ ಕೇಂದ್ರ ಜವಳಿ ಖಾತೆ ಸಚಿವ ಕೆಎಸ್ ರಾವ್ ಅವರು ರಾಜೀನಾಮೆ ನೀಡಿದ್ದಾರೆ.

12.15: ಗುರುವಾರದಂದು ರಾಮ್ ವಿಲಾಸ್ ಪಾಸ್ವಾನ್, ಸುಶೀಲ್ ಕುಮಾರ್ ಮೋದಿ ಜತೆ ರಾಜನಾಥ್ ಅವರು ಔರಂಗಬಾದ್, ಜಮೈ, ಕರಾಕತ್ ನಲ್ಲಿ ಚುನವಣಾ ಪ್ರಚಾರ ನಡೆಸಲಿದ್ದಾರೆ.

12.00: ಮಗನ ಹೇಳಿಕೆ ಬಗ್ಗೆ ವರುಣ್ ತಾಯಿ ಮೇನಕಾ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ. ಅಂಕಿ ಅಂಶಗಳನ್ನು ತಿಳಿಯದೆ ರಾಹುಲ್ ಹೊಗಳಿದ್ದು ಸರಿಯಲ್ಲ ಎಂದಿದ್ದಾರೆ.

11.45: ಬಿಜೆಪಿ ಹಿರಿಯ ನಾಯಕರಲ್ಲಿ ಉಂಟಾದ ಗೊಂದಲದಿಂದ ಬಿಜೆಪಿ ಪ್ರಣಾಳಿಕೆ ಬಿಡುಗಡೆ ವಿಳಂಬ. ಏ.7ರ ನಂತರ ಬಿಡುಗಡೆ ಸಾಧ್ಯತೆ.

Rahul Gandhi

11.00: ಅಮೇಥಿಯ ಚುನಾವಣಾಧಿಕಾರಿಗಳು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮನೆ ವಿಳಾಸದ ಅಧಿಕೃತ ದಾಖಲೆ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
10.45: ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರು ಆರೆಸ್ಸೆಸ್ ಬಗ್ಗೆ ನೀಡಿದ ಹೇಳಿಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಕೃಷ್ಣ ಅವರ ಮಾತುಗಳು ಇತರೆ ಕಾಂಗ್ರೆಸ್ ನಾಯಕರಿಗೂ ಮನವರಿಕೆಯಾಗಲಿ ಎಂದು ಬಿಜೆಪಿ ಹೇಳಿದೆ.

10.15: ರಾಹುಲ್ ಹಾಡಿ ಹೊಗಳಿದ್ದ ವರುಣ್ ಗಾಂಧಿಯನ್ನು ರಾಹುಲ್ ಗಾಂಧಿ ಪ್ರತಿಸ್ಪರ್ಧಿ ಕುಮಾರ್ ವಿಶ್ವಾಸ್ ಖಂಡಿಸಿದ್ದಾರೆ.
10.00: ಬೇನಿ ಪ್ರಸಾದ್ ವರ್ಮ ಅವರು ನರೇಂದ್ರ ಮೋದಿಯನ್ನು ಆರೆಸ್ಸೆಸ್ ನ ಗೂಂಡಾ, ರಾಜನಾಥ್ ಸಿಂಗ್ ಅವರನ್ನು ಗುಲಾಮ ಎಂದು ಜರೆದಿದ್ದಾರೆ.
9.45: ಎನ್ ಸಿಪಿ ಮುಖಂಡ ಶರದ್ ಪವಾರ್ ಅವರು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆಯನ್ನು ಹೊಗಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+