ಎಚ್ಚರ! ಮತಗಟ್ಟೆಯಲ್ಲಿ ಫೋಟೋ ತೆಗೆಯಬೇಡಿ

Posted By:
Subscribe to Oneindia Kannada

ಬೆಂಗಳೂರು, ಎ.15: ಈ ಬಾರಿ ಚುನಾವಣೆ ಆಯೋಗ ಮತಗಟ್ಟೆಗಳಿಗೆ ಮತದಾರರು ಮೊಬೈಲ್ ಗಳನ್ನು ತರಬಾರದೆಂಬ ಆದೇಶ ಹೊರಡಿಸಿದೆ. ಮತಗಟ್ಟೆಯಲ್ಲಿ ಮತ ಹಾಕುವ ಚಿತ್ರವನ್ನು ತೆಗೆದರೆ ನೇರ ಜೈಲು ಪಾಲಾಗುವ ಭೀತಿ ಎದುರಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಎಚ್ಚರಿಸಿದೆ. ಈ ನಿಯಮ ಚುನಾವಣಾ ಸಿಬ್ಬಂದಿಗೂ ಅನ್ವಯವಾಗಲಿದೆ

ಆದರೆ, ಚುನಾವಣಾ ಸಿಬ್ಬಂದಿಗಳು ಮತದಾನ ಶೇಕಡಾವಾರು ವಿವರವನ್ನು ತಮ್ಮ ಉನ್ನತ ಅಧಿಕಾರಿಗಳಿಗೆ ತಲುಪಿಸಲು ಮೊಬೈಲ್ ಫೋನ್ ಬಳಸಬಹುದಾಗಿದೆ. ಆದರೆ, ಎಸ್ ಎಂಎಸ್ ಮಾತ್ರ ಕಳಿಸಬಹುದು. ಮತಗಟ್ಟೆಯೊಳಗೆ ಫೋಟೋ ತೆಗೆಯುವಂತಿಲ್ಲ. ಆಯೋಗ ನೇಮಿಸಿರುವ ಅಧಿಕೃತ ಛಾಯಾಗ್ರಹಕರು ಮಾತ್ರ ಮತದಾನ ಪ್ರಕ್ರಿಯೆಯ ಚಿತ್ರಗಳನ್ನು ತೆಗೆಯುವ ಅವಕಾಶ ಹೊಂದಿರುತ್ತಾರೆ.

ಸುಪ್ರೀಂಕೋರ್ಟಿನ ಆದೇಶದಂತೆ ವಿಡಿಯೋಗ್ರಾಫಿ ಮಾಡುವ ಮುನ್ನ ರಿಟರ್ನಿಂಗ್ ಆಫೀಸರ್ ಹಾಗೂ ಅಬ್ಸರ್ವರ್ ಅವರ ಅನುಮತಿ ಪಡೆಯಬೇಕಾಗುತ್ತದೆ. ಮತದಾನದ ಗೌಪ್ಯತೆಗೆ ಭಂಗ ಬರದಂತೆ ವಿಡಿಯೋಗ್ರಾಫಿಗೆ ಅನುಮತಿ ನೀಡಬಹುದು. ಇನ್ನೂ ಮತಗಟ್ಟೆಯಲ್ಲಿ ಮತಯಂತ್ರಗಳಿಗೆ ಅಭ್ಯರ್ಥಿಗಳು ಪೂಜೆ ಸಲ್ಲಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

India Election 2014, EC bans use of mobiles inside polling stations

ಕರ್ನಾಟಕದ ವಿಶೇಷಗಳು: ರಾಜ್ಯದಲ್ಲಿ ಏಪ್ರಿಲ್ 17ರಂದು, ಗುರುವಾರ ಹದಿನಾರನೇ ಲೋಕಸಭೆಗೆ ನಡೆಯಲಿರುವ ಚುನಾವಣೆ ಮತದಾನದ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿಯ ಗುರುತು ಹಚ್ಚಲಾಗುತ್ತಿದೆ.

ಕರ್ನಾಟಕದಲ್ಲಿ ಮೊದಲ ಬಾರಿಗೆ 'ವೋಟರ್ ವೆರಿಫೈಯೇಬಲ್ ಪೇಪರ್ ಟ್ರಯಲ್' ವ್ಯವಸ್ಥೆಯನ್ನು ಲೋಕಸಭೆ ಚುನಾವಣೆಯಲ್ಲಿ ಪರಿಚಯಿಸಲಾಗಿದೆ. ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ನೀವು ಈ ವ್ಯವಸ್ಥೆಯನ್ನು ಕಾಣಬಹುದಾಗಿದೆ.

ಮತದಾರರಿಗೆ ಮತಗಟ್ಟೆಯ ಬಗ್ಗೆ ಆಗುವ ಗೊಂದಲ ತಪ್ಪಿಸಲು ಎಸ್ಎಸ್ಎಂ ಮೂಲಕ ಮತಗಟ್ಟೆಯ ವಿಳಾಸ ತಿಳಿಸುವ ನೂತನ ವ್ಯವಸ್ಥೆಗೆ ರಾಜ್ಯ ಚುನಾವಣಾ ಆಯೋಗ ಚಾಲನೆ ನೀಡಿದೆ. ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಎಸ್ಎಂಎಸ್ ಮಾಡಿದರೆ, ನೀವು ಯಾವ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕು ಎಂಬ ಮಾಹಿತಿಯು ಮೊಬೈಲ್ ಬರುತ್ತದೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Election Commission has banned use of mobile phones inside polling stations in the Lok Sabha elections but has allowed use of SMSes by polling staff for sending reports to the election authorities.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ