ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಅ.21 ರಂದು ವಿಧಾನಸಭೆ ಚುನಾವಣೆ

ನವದೆಹಲಿ, ಸೆಪ್ಟೆಂಬರ್ 21: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಈ ವರ್ಷ ನಡೆಯಬೇಕಿರುವ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ಇಂದು(ಸೆ.21) ದಿನಾಂಕ ಘೋಷಣೆ ಮಾಡಿದೆ.

ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಅಕ್ಟೋಬರ್ 21 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ನವದೆಹಲಿಯಲ್ಲಿಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರ ಎರಡು ರಾಜ್ಯಗಳ ಚುನಾವಣಾ ದಿನಾಂಕವನ್ನು ಘೋಷಿಸಿದರು.

Election commission announces Dates for Maharashtra and Haryana Assembly elections

ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶ ಅಕ್ಟೋಬರ್ 24 ರಂದು ಬಿಡುಗಡೆಯಾಗಲಿವೆ.

ಮಹತ್ವದ ದಿನಾಂಕಗಳು

ಅಧಿಸೂಚನೆ ದಿನಾಂಕ: ಸೆಪ್ಟೆಂಬರ್ 27
ನಾಮಪತ್ರ ಸಲ್ಲಿಕೆಗೆ ಕೊನೇ ದಿನಾಂಕ: ಅಕ್ಟೋಬರ್ 4
ನಾಮಪತ್ರ ವಾಪಸ್ ಪಡೆಯಲು ಕೊನೇ ದಿನಾಂಕ: ಅಕ್ಟೋಬರ್ 7
ಮತದಾನದ ದಿನಾಂಕ: ಅಕ್ಟೋಬರ್ 21
ಫಲಿತಾಂಶದ ದಿನಾಂಕ: ಅಕ್ಟೋಬರ್ 24

ಮಹಾರಾಷ್ಟ್ರ ವಿಧಾನಸಭೆ ಒಟ್ಟು 288 ಕ್ಷೇತ್ರಗಳನ್ನು ಹೊಂದಿದ್ದು, ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ನಂಬ್ 145. ಹರ್ಯಾಣ ಒಟ್ಟು 90 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು 46 ಮ್ಯಾಜಿಕ್ ನಂಬರ್.

ಮಹಾರಾಷ್ಟ್ರ ವಿಧಾನಸಭೆಯ ಕಾಲಾವಧಿ ಈ ವರ್ಷ ನವೆಂಬರ್ 9 ರಂದು ಮತ್ತು ಹರ್ಯಾಣಾ ವಿಧಾನಸಭೆಯ ಕಾಲಾವಧಿ ನವೆಂಬರ್ 2 ರಂದು ಮುಕ್ತಾಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+