ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ಲೋಕಸಭೆ, 5 ವಿಧಾನಸಭೆ ಉಪಚುನಾವಣೆ ದಿನಾಂಕ ಪ್ರಕಟ: ವೇಳಾಪಟ್ಟಿ ತಿಳಿಯಿರಿ

|
Google Oneindia Kannada News

ನವದೆಹಲಿ, ನವೆಂಬರ್ 5: ಒಂದು ಲೋಕಸಭೆ ಮತ್ತು 5 ವಿಧಾನಸಭೆ ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ಪ್ರಕಟವಾಗಿದೆ. ಒಡಿಶಾ, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢದ 5 ವಿಧಾನಸಭೆ ಸ್ಥಾನಗಳಿಗೆ ಮತ್ತು ಉತ್ತರ ಪ್ರದೇಶದ ಒಂದು ಸಂಸದೀಯ ಸ್ಥಾನಕ್ಕೆ ಚುನಾವಣಾ ಆಯೋಗ ಶನಿವಾರ ಉಪಚುನಾವಣೆ ಘೋಷಿಸಿದೆ.

ಒಡಿಶಾ, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢದ ಈ ರಾಜ್ಯದ 5 ವಿಧಾನಸಭೆ ಕ್ಷೇತ್ರದ ಸ್ಥಾನಗಳಿಗೆ ಮತ್ತು ಉತ್ತರ ಪ್ರದೇಶದ ಒಂದು ಎಂಪಿ ಸ್ಥಾನಕ್ಕೆ ಚುನಾವಣಾ ಆಯೋಗ ಶನಿವಾರ ಉಪಚುನಾವಣೆ ಘೋಷಿಸಿದೆ. ಆಯೋಗದ ವೇಳಾಪಟ್ಟಿಯಂತೆ ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿದ್ದು, ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ. ಪಾದಂಪುರ (ಒಡಿಶಾ), ಸರ್ದಾರ್‌ಶಹರ್ (ರಾಜಸ್ಥಾನ), ಕುರ್ಹಾನಿ (ಬಿಹಾರ), ಭಾನುಪ್ರತಾಪುರ್ (ಛತ್ತೀಸ್‌ಗಢ) ಮತ್ತು ರಾಮ್‌ಪುರ (ಉತ್ತರ ಪ್ರದೇಶ) ವಿಧಾನಸಭಾ ಸ್ಥಾನಗಳು ಉಪಚುನಾವಣೆ ನಡೆಯಲಿವೆ.

Election commission announces dates for bypolls odisha rajasthan bihar uttar pradesh and chhattisgarh

ಮುಲಾಯಂ ಸಿಂಗ್ ಯಾದವ್ ಅವರ ನಿಧನದ ನಂತರ ತೆರವಾದ ಲೋಕಸಭೆಯ ರಾಮ್‌ಪುರದ ಮೈನ್‌ಪುರಿ (ಉತ್ತರ ಪ್ರದೇಶ) ಕ್ಷೇತ್ರವಾಗಿದೆ. ಚುನಾವಣಾ ಸಮಿತಿಯ ಪ್ರಕಾರ, ಈ ಉಪಚುನಾವಣೆಗಳಿಗೆ ನಾಮಪತ್ರ ಸಲ್ಲಿಸಲು ನವೆಂಬರ್ 17 ಕೊನೆಯ ದಿನಾಂಕ ದಿನ. ನವೆಂಬರ್ 18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನವೆಂಬರ್ 21 ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.

English summary
Election commission announces 1 Lok Sabha by-election date for 5 assembly seats of odisha rajasthan bihar uttar pradesh and chhattisgarh announced: Know the schedule Here details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X