ನರೇಂದ್ರ ಮೋದಿಯ ಕೋಟಿ ಆಫರ್ ಬೇಡ ಎಂದ ಈಧಿ
ಇಸ್ಲಾಮಾಬಾದ್, ಅಕ್ಟೋಬರ್. 27: ದಶಕದ ನಂತರ ಭಾರತಕ್ಕೆ ಮರಳಿದ ಗೀತಾ ಅವರನ್ನು ಪೋಷಿಸಿದ ಪಾಕಿಸ್ತಾನದ ಈಧಿ ಎನ್ ಜಿಒ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಒಂದು ಕೋಟಿ ರೂಪಾಯಿ ಕೊಡುಗೆ ಸ್ವೀಕರಿಸಲು ನಿರಾಕರಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಸಂಸ್ಥೆಯ ಚೆರ್ ಮನ್ ಮೆನ್ ಅಬ್ದುಲ್ ಸತ್ತಾರ್, ಈಧಿ ಸಂಸ್ಥೆಯು ಮಾನವೀಯ ನೆಲೆಯಲ್ಲಿ ಕಾರ್ಯಚರಿಸುತ್ತಿದ್ದು, ಅದು ಯಾವುದೇ ಸರ್ಕಾರ ಅಥವಾ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ನೆರವು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.[ತಾಯಿ ನಾಡಿಗೆ ದಶಕದ ನಂತರ ಮರಳಿದ ಗೀತಾ]

ಯಾವುದೇ ಸರಕಾರ ಅಥವಾ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ನೆರವನ್ನು ಪಡೆಯದೆಯೇ ಮಾನವೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕೆಂಬುದು ಅವರು ಪಾಲಿಸುತ್ತಿರುವ ತತ್ವವಾಗಿದೆ. ಆದಾಗ್ಯೂ, ತಮ್ಮ ಸೇವೆಗೆ ನಗಂಡು ಒಂದು ಕೋಟಿ ರೂ.ಕೊಡುಗೆ ಘೋಷಿಸಿದ ನರೇಂದ್ರ ಮೋದಿಯವರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ. ಆದರೆ, ಕೊಡುಗೆಯನ್ನು ಅಷ್ಟೇ ಸರಳವಾgi ನಿರಾಕರಿಸಿದ್ದಾರೆ ಎಂದು ಈಧಿ ಸಂಸ್ಥೆಯ ವಕ್ತಾರ ಅನ್ವರ್ ಖಾಝ್ಮಿ ಭಾರತದ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ಪಾಕಿಸ್ತಾನದಲ್ಲಿ ಈಧಿ ಸಂಸ್ಥೆಯ ಆಶ್ರಯದಲ್ಲಿದ್ದ ಮಾತು ಮತ್ತು ಶ್ರವಣ ದೋಷದಿಂದ ಬಳಲುತ್ತಿರುವ ಗೀತಾ ಸೋಮವಾರ ಸಂಸ್ಥೆಯ ಸದಸ್ಯರ ಜೊತೆ ಭಾರತಕ್ಕೆ ಆಗಮಿಸಿದ್ದರು. ಗೀತಾಳನ್ನು ಪೋಷಿಸಿದ ಈಧಿ ಸಂಸ್ಥೆಗೆ ಕೊಡುಗೆಯಾಗಿ ಪ್ರಧಾನಿ ನರೇಂದ್ರ ಮೋದಿಯವರು ಗೀತಾಳನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಘೋಷಣೆ ಮಾಡಿದ್ದರು.[ಕುಟುಂಬದವರನ್ನು ಗುರುತಿಸದ ಗೀತಾ]
ಈಧಿ ಕುಟುಂಬ ಮಾಡಿದ ಕೆಲಸ ಬೆಲೆ ಕಟ್ಟಲಾಗದಂತಹದ್ದು. ಸಂಸ್ಥೆಗೆ ಕೊಡುಗೆಯಾಗಿ 1 ಕೋಟಿ ರೂ.ನೀಡುವುದಾಗಿ ಘೋಷಿಸುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು.
ಖಾಝ್ಮಿ ಪ್ರಕಾರ, ಕರಾಚಿಯ ಮದರ್ ಥೆರೇಸಾ ಎಂದು ಕರೆಯಲ್ಪಡುವ ಸತ್ತಾರ್ ಈಧಿ ಈ ಹಿಂದೆಯೂ ಕೆಲವು ಕೊಡುಗೆಗಳನ್ನು ನಿರಾಕರಿಸಿದ್ದರು. ಪಾಕಿಸ್ತಾನದ ಮಾಜಿ ಪ್ರಧಾನಿ ಝಿಯಾ-ಉಲ್-ಹಕ್ ಮತ್ತು ಪಾಕಿಸ್ತಾನದ ಪ್ರಮುಖ ರಾಜಕೀಯ ಕುಟುಂಬವಾದ ಭುಟ್ಟೋ ಕುಟುಂಬದ ಕೊಡುಗೆಯನ್ನು ಸಹ ಈಧಿ ನಿರಾಕರಿಸಿದ್ದರು. ಅಲ್ಲದೆ, ವಿಶ್ವಬ್ಯಾಂಕ್ ನೀಡಿದ ಕೊಡುಗೆಯನ್ನೂ ಸಹ ಅವರು ನಿರಾಕರಿಸಿದ್ದರು.












Click it and Unblock the Notifications