Edappadi Palaniswami: ಎಡಪ್ಪಾಡಿ ಕೆ. ಪಳನಿಸ್ವಾಮಿ ತಮಿಳುನಾಡು ಎನ್ಡಿಎ ಒಕ್ಕೂಟದ ಸಿಎಂ ಅಭ್ಯರ್ಥಿ
ದಕ್ಷಿಣ ಭಾರತದ ಪ್ರಮುಖ ರಾಜ್ಯ, ಅದರಲ್ಲೂ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟಕ್ಕೆ ಸವಾಲಾಗಿ ಪರಿಣಮಿಸಿರುವ ತಮಿಳುನಾಡು ರಾಜ್ಯದಲ್ಲಿ ಈ ಬಾರಿ ಹೈವೋಲ್ಟೇಜ್ ಎಲೆಕ್ಷನ್ ನಡೆಯುತ್ತಿದೆ. ಇಲ್ಲಿ ಗೆದ್ದು ದಕ್ಷಿಣ ಭಾರತದಲ್ಲಿ ಕೂಡ ತನ್ನ ಹವಾ ಎಬ್ಬಿಸಲು ಸಜ್ಜಾಗಿದ್ದಾರೆ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟದ ನಾಯಕರು. ಇದೇ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾದ ಅಭ್ಯರ್ಥಿ ಆಯ್ಕೆಗೂ ಸಾಕಷ್ಟು ಚಿಂತನೆ ನಡೆಸಲಾಗಿತ್ತು. ಎಲ್ಲಾ ಚರ್ಚೆಗಳ ನಂತರ ಇದೀಗ ಅಧಿಕೃತವಾಗಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನ ತಮಿಳುನಾಡು ವಿಧಾನಸಭೆ ಚುನಾವಣೆಗೆ ಎನ್ಡಿಎ ಒಕ್ಕೂಟದ ಸಿಎಂ ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ತಮಿಳುನಾಡು ರಾಜ್ಯ ಇಡೀ ದೇಶದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳ ಪೈಕಿ ಒಂದಾಗಿದೆ. ಅಲ್ಲದೆ ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಭಾವಿ ರಾಜ್ಯ ಕೂಡ ತಮಿಳುನಾಡು ಎಂದು ಹೇಳಬಹುದು. ಆದರೆ ಇಡೀ ದೇಶದಲ್ಲಿ ತಮ್ಮ ಸಾಮರ್ಥ್ಯ ತೋರಿಸಿರುವ ಬಿಜೆಪಿ ನಾಯಕರಿಗೆ ಈ ರಾಜ್ಯ ಸಾಕಷ್ಟು ಸವಾಲು ಹಾಕಿತ್ತು. ಹೇಗಾದರೂ ಮಾಡಿ ತಮಿಳುನಾಡು ರಾಜ್ಯ ಗೆಲ್ಲಬೇಕು ಎಂಬುದೇ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ನಾಯಕರ ಒನ್ಲೈನ್ ಅಜೆಂಡಾ ಆಗಿದ್ದು, ಎಐಎಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡು ಎಲೆಕ್ಷನ್ ಎದುರಿಸಲು ಸಜ್ಜಾಗಿದ್ದಾರೆ.

ಡಿಎಂಕೆ ಸೋಲಿಸಲು ಬಿಜೆಪಿ ಅಸ್ತ್ರ
ತಮಿಳುನಾಡು ಚುನಾವಣೆ ಗೆಲುವಿಗೆ ಈಗ ಪೂರಕವಾಗಿ ಎಡಪ್ಪಾಡಿ ಕೆ. ಪಳನಿಸ್ವಾಮಿಗೆ ಇದೀಗ ಸಿಎಂ ಅಭ್ಯರ್ಥಿ ಪಟ್ಟ ಕಟ್ಟಲಾಗಿದೆ. ಇದರ ಹಿಂದೆ ಎನ್ಡಿಎ ನಾಯಕರ ಭಾರಿ ದೊಡ್ಡ ರಣತಂತ್ರವು ಕೂಡ ಅಡಗಿದೆ. ಈಗ ಭಾರತೀಯ ಜನತಾ ಪಕ್ಷದ ತಮಿಳುನಾಡು ಘಟಕ ಅಧ್ಯಕ್ಷರಾದ ನೈನಾರ್ ನಾಗೇಂದ್ರನ್ ಅವರು ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಆಯ್ಕೆ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದು, ಈ ಮೂಲಕ ಕೆಲವರಿಗೆ ನಿರಾಸೆಯಾಗಿದ್ದರೆ ಹೈಕಮಾಂಡ್ ನಾಯಕರಿಗೆ ಇದು ಹೊಸ ಅಸ್ತ್ರವನ್ನೇ ನೀಡಿದಂತೆ ಆಗಿದೆ. ಡಿಎಂಕೆ ಸೋಲಿಸಲು ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ ಹೊಸ ಅಸ್ತ್ರ ಪ್ರಯೋಗಿಸಿದೆ.
ಪಳನಿಸ್ವಾಮಿಗೆ ಪಟ್ಟ ಕಟ್ಟಿದ್ದು ಏಕೆ?
ತಮಿಳುನಾಡು ರಾಜಕೀಯದಲ್ಲಿ ಎಡಪ್ಪಾಡಿ ಕೆ. ಪಳನಿಸ್ವಾಮಿಗೆ ಹೆಚ್ಚು ಹಿಡಿತ ಇದೆ, ಅದರಲ್ಲೂ ಈ ಸಮಯದಲ್ಲಿ ಪಳನಿಸ್ವಾಮಿಗೆ ಠಕ್ಕರ್ ಕೊಡುವಂತಹ ನಾಯಕರು ತಮಿಳುನಾಡು ಬಿಜೆಪಿ ಪಕ್ಷದಲ್ಲೂ ಇಲ್ಲ. ಇದರ ಜೊತೆಗೆ ಸ್ವತಃ ಪಳನಿಸ್ವಾಮಿ ಅವರ ಎಐಎಡಿಎಂಕೆ ಪಕ್ಷದಲ್ಲಿ ಕೂಡ ಇವರನ್ನು ಮೀರಿಸಿ ಸಿಎಂ ಅಭ್ಯರ್ಥಿ ಆಗುವ ಮತ್ತೊಬ್ಬ ನಾಯಕ ಕಂಡಿಲ್ಲ. ಹೀಗಾಗಿ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವಕ್ಕೇ ಜೈ ಎನ್ನಲಾಗಿದ್ದು, ತಮಿಳುನಾಡು ಚುನಾವಣೆಗೆ ಮತ್ತಷ್ಟು ರಂಗು ಬಂದಿದೆ.
-
Thalapathy Vijay Assets: ನಾಮಪತ್ರ ಸಲ್ಲಿಸಿದ ವಿಜಯ್, ಇವರ ಒಟ್ಟು ಆಸ್ತಿ ಎಷ್ಟು? ಇಲ್ಲಿದೆ ಮಾಹಿತಿ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications