Liquor Policy: ಕೇಸಿಲ್ಲಿ ಎಎಪಿ ಆರೋಪಿ ಆಗಲಿದೆಯೇ?: ಕಾನೂನು ಸಲಹೆಗೆ ಮುಂದಾದ ED
ನವದೆಹಲಿ, ಅಕ್ಟೋಬರ್ 05: ರಾಷ್ಟ್ರ ರಾಜಧಾನಿಯಲ್ಲಿ ಸದ್ಯ ರದ್ದಾಗಿರುವ ಮದ್ಯ ನೀತಿಗೆ (Delhi Liquor Policy) ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ಆಮ್ ಆದ್ಮಿ ಪಕ್ಷವನ್ನು (AAP) ಆರೋಪಿ ಎಂದು ಹೆಸರಿಸಬಹುದೇ?. ಈ ಬಗ್ಗೆ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (ED) ಕಾನೂನು ಸಲಹೆ ಪಡೆಯಲು ಮುಂದಾಗಿದೆ.
ಹೌದು, ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಹಾಗೂ ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಂಧಿತರು ಜಾಮೀನು ಅರ್ಜಿ ಸಲ್ಲಿಸಿದ್ದರ. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಮದ್ಯ ನೀತಿಯಿಂದ ಪಕ್ಷಕ್ಕೆ ಲಾಭವಾಗಿದೆ ಎಂದು ಇಡಿ ಪ್ರಕರಣದಲ್ಲಿ ಎಎಪಿಯನ್ನು ಏಕೆ ಆರೋಪಿ ಎಂದು ಹೆಸರಿಸಲಾಗಿಲ್ಲ? ಎಂದು ಪ್ರಶ್ನೆ ಮಾಡಿತು.

PMLA ಕಾಯ್ದೆ ಪ್ರಕಾರ, ಈ ಪ್ರಕರಣ ಸಂಪೂರ್ಣ ಲಾಭವು ರಾಜಕೀಯ ಪಕ್ಷ ಎಎಪಿಗೆ ಹೋಗಿದೆ. ಆ ರಾಜಕೀಯ ಪಕ್ಷವನ್ನು ಇನ್ನೂ ಆರೋಪಿಯನ್ನಾಗಿ ಮಾಡಲಾಗಿಲ್ಲ. ಅದಕ್ಕೆ ನೀಮ್ಮ ಉತ್ತರವೇನು?. ರಾಜಕೀಯ ಪಕ್ಷವು ನಿಮ್ಮ ಪ್ರಕಾರ ಫಲಾನುಭವಿಯೇ ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಎಸ್‌ವಿ ಭಟ್ಟಿ ಅವರು ಬುಧವಾರ ಕೇಳಿತು.
ಸಂಪುಟದ ಟಿಪ್ಪಣಿಯನ್ನು ನ್ಯಾಯಾಲಯವು ಪರಿಶೀಲಿಸಬಹುದೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಕ್ಯಾಬಿನೆಟ್ ಟಿಪ್ಪಣಿಗಳನ್ನು ಪರಿಶೀಲಿಸುವುದನ್ನು ತಡೆಯುವ ನಿರ್ದಿಷ್ಟ ಸಂವಿಧಾನ ಪೀಠದ ತೀರ್ಪುಗಳಿವೆ ಎಂದು ನಂಬುತ್ತೇನೆ. ಆದರೆ ಇದು ದೆಹಲಿಗೆ ಅನ್ವಯಿಸುತ್ತದೆಯೇ ಎಂಬುದು ತಿಳಿದಿಲ್ಲ. ಏಕೆಂದರೆ ದೆಹಲಿಯ ಕೇಂದ್ರಾಡಳಿತ ಪ್ರದೇಶವಾಗಿದೆ ಎಂದು ನ್ಯಾಯಮೂರ್ತಿ ಖನ್ನಾ ತಿಳಿಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ತೀವ್ರಗೊಂಡ ಇಡಿ ತನಿಖೆ
ಇದೇ ಪ್ರಕರಣ ಸಂಬಂಧ ತನಿಖೆ ಮುಂದವರಿಸಿರುವ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬುಧವಾರ ಎಎಪಿ ಹಿರಿಯ ನಾಯಕ ಸಂಜಯ್ ಸಿಂಗ್ ಅವರ ದೆಹಲಿ ನಿವಾಸದ ಮೇಲೆ ದಾಳಿ ನಡೆಸಿತ್ತು. ನಂತರ ಸಂಜೆ ಅವರನ್ನು ಬಂಧಿಸಿತು. ಈ ಮೂಲಕ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ.
ಬುಧವಾರವೇ ಈ ಮೊದಲು ಇದೇ ಪ್ರಕರಣದಲ್ಲಿ ಬಂಧನವಾಗಿದ್ದ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಿತು.












Click it and Unblock the Notifications