ಇಂದಿನಿಂದ ಬಜೆಟ್ ಅಧಿವೇಶನ: ಈ ಬಾರಿಯ ಆರ್ಥಿಕ ಸಮೀಕ್ಷೆಯಲ್ಲಿ ಏನಿರಲಿದೆ?

ನವದೆಹಲಿ, ಜನವರಿ 29: ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಮೂರನೇ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗಲಿದ್ದು, ಅದಕ್ಕೂ ಮೊದಲು ಇಂದಿನಿಂದ ಮಹತ್ವದ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ಭಾರತದ ಆರ್ಥಿಕ ಸಮೀಕ್ಷೆಯ ಪ್ರಸ್ತುತಿಯೊಂದಿಗೆ ಬಜೆಟ್ ಅಧಿವೇಶ ಪ್ರಾರಂಭವಾಗಲಿದ್ದು, ಅದಕ್ಕೂ ಮೊದಲು ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದಾರೆ.

ಕೇಂದ್ರ ಬಜೆಟ್‌ ದಿನಕ್ಕೂ ಮೊದಲು ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ. ಆರ್ಥಿಕ ಸಮೀಕ್ಷೆಯನ್ನು ಪ್ರತಿ ಬಾರಿಯು ಕೇಂದ್ರ ಬಜೆಟ್‌ ಮಂಡನೆಯ ಒಂದು ದಿನ ಮೊದಲು ಮಂಡಿಸಲಾಗುತ್ತದೆ. ಆದರೆ ಈ ವರ್ಷ ಇದನ್ನು ಸಾಮಾನ್ಯಕ್ಕಿಂತ ಮೊದಲೇ ತರಲಾಗುತ್ತಿದೆ. ಏಕೆಂದರೆ ಬಜೆಟ್‌ಗೆ ಮುಂಚಿನ ದಿನವು ಭಾನುವಾರವಾಗಿದೆ.

ಬಜೆಟ್ ಅಧಿವೇಶನದ ಮೊದಲ ಭಾಗ ಜನವರಿ 29 ರಿಂದ ಫೆಬ್ರವರಿ 15 ರವರೆಗೆ ಮತ್ತು ಎರಡನೇ ಭಾಗವು ಮಾರ್ಚ್ 8 ರಿಂದ ಏಪ್ರಿಲ್ 8 ರವರೆಗೆ ಇರುತ್ತದೆ.

 Economic Survey: What To Expect From This Year Union Budget

ಪ್ರತಿ ವರ್ಷದಂತೆ, 2020-21ರ ಸಮೀಕ್ಷೆಯು ಹಿಂದಿನ 12 ತಿಂಗಳ ಅವಧಿಯಲ್ಲಿ ಭಾರತೀಯ ಆರ್ಥಿಕತೆಯ ಪ್ರಗತಿಯ ಅಂದಾಜನ್ನು ಪ್ರಸ್ತುತಪಡಿಸುತ್ತದೆ. ಸಮೀಕ್ಷೆಯಿಂದ ಹೊರಡಿಸಲಾದ ಮುನ್ಸೂಚನೆಗಳು, ಅವುಗಳಿಗೆ ಉಲ್ಲೇಖಿಸಲಾದ ಕಾರಣಗಳು ಆರ್ಥಿಕ ವಿಶ್ಲೇಷಕರಲ್ಲಿ ಚರ್ಚೆಗೆ ಕಾರಣವಾಗುತ್ತದೆ.

ಆರ್ಥಿಕ ಸಮೀಕ್ಷೆಯ ಪರಿಶೀಲನೆಯಲ್ಲಿ ಸರ್ಕಾರವು ಜಾರಿಗೆ ತಂದ ಯೋಜನೆಗಳು ಮತ್ತು ನೀತಿಗಳ ವಿವರಗಳು ಮತ್ತು ಫಲಿತಾಂಶಗಳನ್ನು ಸಮೀಕ್ಷೆಯು ಒಳಗೊಂಡಿರುತ್ತದೆ. ಇದಲ್ಲದೆ, ಸಮೀಕ್ಷೆಯು ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಯ ಕುರಿತು ಸುಳಿವು ನೀಡುತ್ತದೆ.

ಈ ವರ್ಷದ ಸಮೀಕ್ಷೆಯು 2020ರ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿರುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರವು ತೀರಾ ಕುಸಿದ ನಂತರ, ಜೊತೆಗೆ ಕಳೆದ ತ್ರೈಮಾಸಿಕದಲ್ಲಿ ಚೇತರಿಕೆ ಕಂಡು ಬಂದಿರುವ ಕುರಿತು ಒಳಗೊಂಡಿರುತ್ತದೆ.

ಆರ್ಥಿಕತೆಯ ಮೇಲೆ ಸಾಂಕ್ರಾಮಿಕ ರೋಗದ ಪರಿಣಾಮಗಳನ್ನು ತೀಕ್ಷ್ಣವಾಗಿ ಕೇಂದ್ರೀಕೃತವಾಗಿದೆ. ಈ ಸೂಚಕಗಳಲ್ಲಿ ಕೃಷಿ ಉತ್ಪಾದನೆ, ಕಾರ್ಖಾನೆ ಉತ್ಪಾದನೆ, ವಿದೇಶಿ ವ್ಯಾಪಾರ, ಹಣದುಬ್ಬರ, ಉದ್ಯೋಗಗಳು ಇತ್ಯಾದಿಗಳು ಸೇರಿವೆ.

ಕೊರೊನಾವೈರಸ್‌ನಿಂದಾಗಿ ಆರ್ಥಿಕತೆಯ ಮೇಲೆ ಆಗಿರುವ ಹಾನಿ ಕುರಿತಾಗಿ ಅಧಿಕೃತವಾಗಿ ಅಂಕಿ-ಅಂಶಗಳು ಹೊರಬರಲು ಸದ್ಯಕ್ಕೆ ಸಾಧ್ಯವಿಲ್ಲ. ಹೀಗಾಗಿ ಈ ವರ್ಷದ ಆರ್ಥಿಕ ಸಮೀಕ್ಷೆಯಲ್ಲಿ ಏನಿರಲಿದೆ ಎಂಬುದು ಹೆಚ್ಚು ಆಸಕ್ತಿಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+