ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ವಾರದ ಆರಂಭದಲ್ಲಿ ಚುನಾವಣೆ ದಿನಾಂಕ ಘೋಷಣೆ

|
Google Oneindia Kannada News

ನವದೆಹಲಿ, ಮಾರ್ಚ್ 08: 2019ರ ಲೋಕಸಭಾ ಚುನಾವಣೆಗಾಗಿ ಮತದಾನ, ಫಲಿತಾಂಶ ಪ್ರಕಟವಾಗುವ ದಿನಾಂಕಗಳ ಘೋಷಣೆ ಶೀಘ್ರದಲ್ಲೇ ಆಗಲಿದೆ. ಮುಂದಿನ ವಾರದೊಳಗೆ ಚುನಾವಣಾ ಆಯೋಗ ಚುನಾವಣೆ ದಿನಾಂಕಗಳನ್ನು ಘೋಷಿಸುವ ನಿರೀಕ್ಷೆಯಿದೆ.

2014ರ ಲೋಕಸಭಾ ಚುನಾವಣೆ ಮಾರ್ಚ್ 5ರಂದು ಘೋಷಣೆಯಾಗಿತ್ತು. 17ನೇ ಲೋಕಸಭೆಗಾಗಿ ಸುಮಾರು 7 ರಿಂದ 8 ಹಂತದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ.

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ವಿಳಂಬ ಯಾಕೆ? ಇಲ್ಲಿದೆ ಕಾರಣಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ವಿಳಂಬ ಯಾಕೆ? ಇಲ್ಲಿದೆ ಕಾರಣ

ಈ ವಾರಾಂತ್ಯ ಅಥವಾ ಮುಂದಿನ ವಾರದ ಆರಂಭದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇವಿಎಂ, ವಿವಿಪ್ಯಾಟ್ ಹಾಗೂ ಚುನಾವಣಾ ಪ್ರಕ್ರಿಯೆಗೆ ಬೇಕಾದ ಸಾಧನಗಳು ಸಿದ್ಧವಾಗಿದ್ದು, ಸಂಚಾರ ಕಾರ್ಯ ಅಂತಿಮ ಹಂತದಲ್ಲಿದೆ.

EC to announce Lok Sabha election dates soon

ಲೋಕಸಭಾ ಚುನಾವಣೆ ಜೊತೆಗೆ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳು ನಡೆಯುವ ಸಾಧ್ಯತೆಯಿದೆ. ಒಟ್ಟು 543 ಲೋಕಸಭಾ ಕ್ಷೇತ್ರಗಳಲ್ಲಿ 10 ಲಕ್ಷ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಪ್ರಧಾನಿ ಮೋದಿ ಅವರ ಕಾರ್ಯಕ್ರಮ, ಸಮಾವೇಶಕ್ಕೆ ಅನುಗುಣವಾಗಿ ಆಯೋಗ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಪ್ರಧಾನಿ ಮೋದಿ ಸಮಾವೇಶ, ಕ್ಯಾಬಿನೆಟ್ ಸಭೆಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಚುನಾವಣಾ ಆಯೋಗವು ಚುನಾವಣೆ ಘೋಷಣೆಯನ್ನು ವಿಳಂಬ ಮಾಡುತ್ತಿದೆ ಎಂದು ವಿಪಕ್ಷಗಳು ಟೀಕಿಸಿವೆ. ಹಾಲಿ ಲೋಕಸಭೆ ಅವಧಿ ಜೂನ್ 3ಕ್ಕೆ ಮುಗಿಯಲಿದ್ದು, ಅಷ್ಟರೊಳಗೆ ಚುನಾವಣಾ ಫಲಿತಾಂಶ ಪ್ರಕಟವಾಗಬೇಕಿದೆ.

ಎನ್ನಾರೈಗಳಿಗೆ ಆನ್ಲೈನ್ ಮತದಾನ ಸುಳ್ಸುದ್ದಿ ವಿರುದ್ಧ ಆಯೋಗದಿಂದ ದೂರುಎನ್ನಾರೈಗಳಿಗೆ ಆನ್ಲೈನ್ ಮತದಾನ ಸುಳ್ಸುದ್ದಿ ವಿರುದ್ಧ ಆಯೋಗದಿಂದ ದೂರು

ಜಮ್ಮು ಮತ್ತು ಕಾಶ್ಮೀರದ 6 ವರ್ಷದ ಅವಧಿ ಮಾರ್ಚ್ 16, 2021ಕ್ಕೆ ಮುಕ್ತಾಯಗೊಳ್ಳಲಿದೆ.ಪಿಡಿಪಿ ಹಾಗೂ ಬಿಜೆಪಿ ನಡುವಿನ ಸಖ್ಯ ಅಂತ್ಯಗೊಂಡಿದ್ದರಿಂದ ಸರ್ಕಾರ ಮುರಿದು ಬಿದ್ದಿದೆ.

ಮಾರ್ಚ್ 27, 2019ರಂದು ಸಿಕ್ಕಿಂ ವಿಧಾನಸಭೆ ಅವಧಿ ಮುಕ್ತಾಯವಾಗುತ್ತದೆ. ಆಂಧ್ರಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶದ ಅಸೆಂಬ್ಲಿ ಅವಧಿ ಕ್ರಮವಾಗಿ ಜೂನ್ 18, ಜೂನ್ 11, ಜೂನ್ 1ರಂದು ಮುಕ್ತಾಯಗೊಳ್ಳಲಿದೆ.

English summary
The Election Commission will soon announce its schedule for the high-voltage Lok Sabha election, which is likely to be spread over 7-8 phases in April-May, sources said on Thursday. Sources said the poll panel is in final stages of completing its logistical preparations to hold elections for the 17th Lok Sabha and a detailed polling schedule could be announced as early as this weekend or by early next week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X