ಭಾರತದಲ್ಲಿ ಉದ್ಯಮವೀಗ ಹಿಂದೆಂದಿಗಿಂತಲೂ ಸುಲಭ : ಮೋದಿ

ನವದೆಹಲಿ, ನವೆಂಬರ್ 3: ಭಾರತದಲ್ಲಿ ಈಗ ಉದ್ಯಮ ನಡೆಸುವುದು ಹಿಂದೆಂದಿಗಿಂತಲೂ ಸುಲಭ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಶ್ವಬ್ಯಾಂಕ್ ಪ್ರಕಟಿಸಿದ್ದ ಉದ್ಯಮ ಸ್ನೇಹಿ ವಾತಾವರಣ ಇರುವ ದೇಶಗಳಲ್ಲಿ ಭಾರತ 30 ಸ್ಥಾನ ಮೇಲಕ್ಕೇರಿ ಇದೇ ಮೊದಲ ಬಾರಿಗೆ 100ನೇ ಸ್ಥಾನ ತಲುಪಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ಈ ಮಾತು ಹೇಳಿದ್ದಾರೆ.

Easier to do business in India than ever before, says PM

ಭಾರತದ ಆರ್ಥಿಕತೆ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಜಿಎಸ್ಇ ಜಾರಿಯಿಂದ ಪದೇ ಪದೇ ತೆರಿಗೆ ಪಾವತಿಸುವ ಪದ್ಧತಿ ಇಲ್ಲವಾಗಿದೆ ಎಂದು ಹೇಳಿದರು.

ವರ್ಲ್ಡ್ ಫುಡ್ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ವಿದೇಶಿ ಕಂಪೆನಿಗಳನ್ನು ಆಹ್ವಾನಿಸಿದರು. ಭಾರತದಲ್ಲಿ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಕಟಾವಿನ ನಂತರದ ಸಂಸ್ಕರಣೆ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಸಾವಯವ ಆಹಾರಗಳ ಮೌಲ್ಯವರ್ಧನೆಗೂ ಅವಕಾಶಗಳಿವೆ ಎಂದು ಪ್ರಧಾನಿ ಒತ್ತಿ ಹೇಳಿದರು.

ಸರಕಾರ ಮುಂದಿನ ಐದು ವರ್ಷದಲ್ಲಿ ರೈತರ ಆದಾಯವನ್ನು ಎರಡು ಪಟ್ಟು ವೃದ್ಧಿಗೊಳಿಸುವ ಗುರಿ ಹೊಂದಿದೆ ಎಂದು ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+