ಜಮ್ಮು ಕಾಶ್ಮೀರದಲ್ಲಿ 5.4 ತೀವ್ರತೆಯ ಭೂಕಂಪ, ದೆಹಲಿಗೂ ಎಫೆಕ್ಟ್
ನವದೆಹಲಿ, ಜೂನ್ 13: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಇಂದು ಮಧ್ಯಾಹ್ನ 1.33ಕ್ಕೆ ಭೂಕಂಪ ಸಂಭವಿಸಿದೆ. ರಾಷ್ಟ್ರ ರಾಜಧಾನಿ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿಯೂ ಭೂಕಂಪನದ ಅನುಭವವಾಗಿದೆ.

ಈ ಬಗ್ಗೆ ಶ್ರೀನಗರದ ಸ್ಥಳೀಯರೊಬ್ಬರು, ಭೂಕಂಪದಿಂದಾಗಿ ಶಾಲಾ ಮಕ್ಕಳು ಭಯಭೀತರಾಗಿದ್ದರು, ಅಂಗಡಿಗಳಲ್ಲಿದ್ದ ಜನರು ಹೊರಗೆ ಧಾವಿಸಿದರು, ಇದು ಭಯಭೀತವಾಗಿತ್ತು. ಇದು ಕಳೆದ ವಾರದ ಕಂಪನಗಳಿಗಿಂತ ಹೆಚ್ಚು ತೀವ್ರವಾಗಿತ್ತು ಎಂದು ಹೇಳಿದ್ದಾರೆ.
ಎನ್‌ಸಿಎಸ್ ಪ್ರಕಾರ ಜೂನ್ 9 ರಂದು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದೇ ದಿನ, ಅಸ್ಸಾಂನ ತೇಜ್‌ಪುರದಲ್ಲಿ ಬೆಳಿಗ್ಗೆ 10:05 ಕ್ಕೆ 3.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪನದ ರಾಷ್ಟ್ರೀಯ ಕೇಂದ್ರವು (NCS), ಭೂಕಂಪದ ಕೇಂದ್ರಬಿಂದು ತೇಜ್‌ಪುರದಿಂದ 39 ಕಿಮೀ ಪಶ್ಚಿಮಕ್ಕೆ ಮತ್ತು 10 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಹೇಳಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ದೇಶದಲ್ಲಿ ಭೂಕಂಪದ ಚಟುವಟಿಕೆಗಳ ಮೇಲ್ವಿಚಾರಣೆಗಾಗಿ ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾಗಿದೆ. NCS 150 ಕ್ಕೂ ಹೆಚ್ಚು ಕೇಂದ್ರಗಳ ರಾಷ್ಟ್ರೀಯ ಭೂಕಂಪಗಳ ಜಾಲವನ್ನು ನಿರ್ವಹಿಸುತ್ತದೆ, ಪ್ರತಿಯೊಂದೂ ಅತ್ಯಾಧುನಿಕ ಉಪಕರಣಗಳನ್ನು ಹೊಂದಿದೆ ಮತ್ತು ದೇಶಾದ್ಯಂತ ಹಲವೆಡೆ ಕಚೇರಿ ಹೊಂದಿದೆ.












Click it and Unblock the Notifications