ಇಂಡೋನೇಶಿಯಾ ಸಮುದ್ರದಲ್ಲಿ ಭೂಕಂಪ: ಸುನಾಮಿ ಭೀತಿ
ಇಂಡೋನೇಶಿಯಾ, ನ. 15: ಇಲ್ಲಿಯ ಸಮುದ್ರದಲ್ಲಿ ಶನಿವಾರ ಬೆಳಗ್ಗೆ 7.3 ಮ್ಯಾಗ್ನಿಟ್ಯೂಡ್ ಸಾಮರ್ಥ್ಯದ ಭೂಕಂಪ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸಮುದ್ರದ ಸುತ್ತಲಿನ ತೀರ ಪ್ರದೇಶಗಳಲ್ಲಿ ಸುನಾಮಿ ಅಪ್ಪಳಿಸುವ ಸಂಭವನೀಯತೆ ಕುರಿತು ಎಚ್ಚರಿಕೆ ನೀಡಲಾಗಿದೆ.
ಅಮೆರಿಕದ ಭೂ ವೈಜ್ಞಾನಿಕ ಸಮೀಕ್ಷೆ ವರದಿ ಪ್ರಕಾರ ಭೂಕಂಪನವು ಕೋಟಾ ಟರ್ನೇಟ್ ಪ್ರದೇಶದಿಂದ ವಾಯವ್ಯ ದಿಕ್ಕಿನಲ್ಲಿರುವ 154 ಕಿ.ಮೀ. ನಷ್ಟು ದೂರದ ಸಮುದ್ರದಲ್ಲಿ ಸಂಭವಿಸಿದೆ. ಆದರೆ, ಈವರೆಗೆ ಯಾವುದೇ ಅಪಾಯ ಸಂಭವಿಸಿಲ್ಲ.

ಪೆಸಿಫಿಕ್ ಸುನಾಮಿ ವಾರ್ನಿಂಗ್ ಸೆಂಟರ್ ಸುನಾಮಿ ಅಲೆ ಏಳುವ ಕುರಿತು ಮುನ್ನೆಚ್ಚರಿಕೆ ನೀಡಿದೆ. ಈ ಭೂಕಂಪನ ಸಂಭವಿಸಿದ ಸ್ಥಳದಿಂದ 300 ಕಿ.ಮೀ. ಸುತ್ತಮುತ್ತಲಿನ ಪ್ರದೇಶದಲ್ಲಿ ಸುನಾಮಿ ಏಳುವ ಆತಂಕವಿದೆ. ಒಂದು ವೇಳೆ ಸುನಾಮಿ ಎದ್ದರೆ ಸುಮಾರು 3.28 ಅಡಿ ಎತ್ತರದ ಅಲೆಯು ಇಂಡೋನೇಶಿಯಾ ಹಾಗೂ ದಕ್ಷಿಣ ಫಿಲಿಪೈನ್ಸ್ ದೇಶದ ತೀರ ಪ್ರದೇಶಕ್ಕೆ ಅಲೆ ಅಪ್ಪಳಿಸಬಹುದು.
ಒಂದು ವೇಳೆ ಸುನಾಮಿ ಎದ್ದರೆ ಒಂದು ಗಂಟೆಯೊಳಗೆ ಉತ್ತರ ಸುಲವೇಸಿ ದ್ವೀಪದಲ್ಲಿರುವ ತಬುಕಾನ್ ಟೆನ್‌ಗಾಹ್ ಸಮೀಪದ ಪ್ರದೇಶಗಳಲ್ಲಿ ಅಪ್ಪಳಿಸಲಿದೆ. ಈ ಅಲೆಯು ಮುಂದಿನ ಆರು ಗಂಟೆಯೊಳಗೆ ದಕ್ಷಿಣ ಜಪಾನ್‌ನ ತೈವಾನ್, ಓಕಿನಾವಾ, ಅಮೆರಿಕದ ಪ್ರಾಂತ್ಯಗಳಾದ ಗುವಾಮ್, ಪಪುವಾ ನ್ಯೂ ಗೈನಿಯಾ, ಸೊಲೊಮನ್ ದ್ವೀಪಗಳು ಮತ್ತು ಮಾರ್ಶಲ್ ದ್ವೀಪಗಳಿಗೆ ಅಪ್ಪಳಿಸಲಿದೆ.
ಜಗತ್ತಿನ ಅತಿದೊಡ್ಡ ದ್ವೀಪವಾದ ಇಂಡೋನೇಶಿಯಾ ಪ್ರದೇಶದ ಮೇಲೆ ಸುನಾಮಿ ಪರಿಣಾಮ ಭೀಕರವಾಗುವ ಸಾಧ್ಯತೆಗಳಿವೆ. 2004ರಲ್ಲಿ ಎದ್ದಿದ್ದ ಭಾರೀ ಅಲೆಯ ಸುನಾಮಿಯು 12 ದೇಶಗಳ 2,30,000 ಜನರ ಸಾವಿಗೆ ಕಾರಣವಾಗಿತ್ತು. ಅಕೇಹ್ ಪ್ರದೇಶದಲ್ಲಿ ಹೆಚ್ಚಿನ ಸಾವು ಸಂಭವಿಸಿತ್ತು.












Click it and Unblock the Notifications