ನೀಟ್‌ ಪರೀಕ್ಷೆಗೆ ವಸ್ತ್ರ ಸಂಹಿತೆ: ವಿದ್ಯಾರ್ಥಿಗಳಿಂದ ಭಾರಿ ಟೀಕೆ ವ್ಯಕ್ತ!

ಕೇರಳ, ಮೇ 11: ದೇಶಾದ್ಯಂತ ಮೇ 8ರಂದು ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿಷಯಗಳಿಗೆ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ಪರೀಕ್ಷೆ ಯಶಸ್ವಿಯಾಗಿದೆ. ಆದರೆ ಈ ಸಂದರ್ಭದಲ್ಲಿ ವಸ್ತ್ರ ಸಂಹಿತೆ ಕುರಿತು ನಡೆದ ಕೆಲವು ಅಹಿತಕರ ಘಟನೆಗಳು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಈ ಬಾರಿಯ ನೀಟ್ ನ ಕೆಲವು ನಿಯಮಗಳು ಟೀಕೆಗೆ ಗುರಿಯಾಗಿದ್ದು ಈ ಸಂಬಂಧ ದೂರು ನೀಡುವುದಾಗಿ ಹಲವರು ಗುಡುಗಿದ್ದಾರೆ. ಪರೀಕ್ಷಾ ಅಕ್ರಮ ತಡೆಗಟ್ಟಲು ಕೈಗೊಂಡ ಈ ನಿಯಮಗಳು ಹಲವು ಮುಜುಗರದ ಸನ್ನಿವೇಶವನ್ನೂ ತಂದೊಡ್ಡಿದ್ದು ವರದಿಯಾಗಿದೆ. ಡ್ರೆಸ್ ಕೋಡ್ (ವಸ್ತ್ರ ಸಂಹಿತೆ) ಹಾಗೂ ಸಮಯದ ವಿಚಾರದಲ್ಲಿ ಈ ಬಾರಿ ಕಠಿಣ ನಿಲುವು ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಹಲವು ಗೊಂದಲಗಳು ನಿರ್ಮಾಣವಾದ ವರದಿಗಳು ದೇಶಾದ್ಯಂತ ಕೇಳಿ ಬಂದಿವೆ.

ಮುಜುಗರದ ಕೇರಳ ಘಟನೆ: ಕೇರಳದ ಕೊಪ್ಪಂನಲ್ಲಿ ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಯೋರ್ವಳ ಬ್ರಾ ತೆಗೆಯುವಂತೆ ಸೂಚಿಸಲಾಯಿತು. ಆಕೆಯ ಬ್ರಾ ಹುಕ್ ಲೋಹದ್ದಾದ್ದರಿಂದ ಅನಿವಾರ್ಯವಾಗಿ ಬ್ರಾ ಕಳಚಬೇಕಾಯಿತು.

Dress code for NEET exams criticized

ಪರೀಕ್ಷಾ ಕೇಂದ್ರದೊಳಕ್ಕೆ ಹೋದ ನನ್ನ ಮಗಳು ಸ್ವಲ್ಪ ಸಮಯದಲ್ಲೇ ಹಿಂದಕ್ಕೆ ಬಂದಳು. ಆಕೆಯ ಬ್ರಾವನ್ನು ನನ್ನ ಕೈಗಿಡಲು ಆಕೆ ಬಂದಿದ್ದಳು. ಆಕೆಗೆ ತುಂಬಾ ಮುಜುಗರವಾಗಿದೆ. ಎಂಬುದಾಗಿ ವಿದ್ಯಾರ್ಥಿನಿಯ ತಾಯಿ ಖಾಸಗಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

ಇನ್ನೊಬ್ಬಾಕೆ ಯುವತಿಗೆ ಪ್ಯಾಂಟಿನ ಕಿಸೆ ಹರಿಯುವಂತೆ, ಪ್ಯಾಂಟಿನ ಬಟನ್ ತೆಗೆಯುವಂತೆ ಸೂಚಿಸಿದ್ದು ವರದಿಯಾಗಿದೆ. ಕೊನೆಗೆ ಅನಿವಾರ್ಯವಾಗಿ ಬ್ಲೇಡಿನಿಂದ ಪ್ಯಾಂಟಿನ ಕಿಸೆ ಕತ್ತರಿಸಿ, ಪ್ಯಾಂಟಿನ ಬಟನ್ ತೆಗೆಯಲಾಗಿತ್ತು. ನಂತರ ಆಕೆ ಪರೀಕ್ಷೆ ಮುಗಿಸಿ ಬರುವ ವೇಳೆಗೆ ಪೋಷಕರು ಮೂರು ಕಿಲೋಮೀಟರ್ ದೂರ ಹೋಗಿ ಆಕೆಗೆ ಹೊಸ ಬಟ್ಟೆ ಖರೀದಿಸಿ ತರಬೇಕಾಯಿತು ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಯ ನಂತರ ಯುವತಿಯರು ಧೈರ್ಯವಾಗಿ ಪರೀಕ್ಷೆ ಬರೆಯುವುದಾದರೂ ಹೇಗೆ ಎಂದು ಪ್ರಶ್ನಿಸಿರುವ ವಿದ್ಯಾರ್ಥಿ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+