DRDO ಔಷಧಿ: ಕೊರೊನಾವೈರಸ್ ಎಲ್ಲಾ ರೂಪಾಂತರ ವೈರಸ್ ವಿರುದ್ಧ ಒಂದೇ ಮದ್ದು!
ನವದೆಹಲಿ, ಜೂನ್ 61: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಹೈದ್ರಾಬಾದಿನ ರೆಡ್ಡೀಸ್ ಪ್ರಯೋಗಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಡಿಯಾಕ್ಸಿ-ಡಿ-ಗ್ಲುಕೋಸ್(2ಡಿಜಿ) ಔಷಧಿಯು ಎಲ್ಲ ಕೊರೊನಾವೈರಸ್ ರೂಪಾಂತರ ತಳಿಗಳ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನವೊಂದು ಸ್ಪಷ್ಟಪಡಿಸಿದೆ.
ಅದ್ಯಯನದ ಪ್ರಕಾರ, 2 ಡಿಜಿ ಔಷಧಿಯು SARS-CoV-2 ಸೋಂಕಿನ ಇಬ್ಭಾಗವಾಗಿ ಹರಡುವುದರ ಪ್ರಮಾಣವನ್ನು ತಗ್ಗಿಸುತ್ತದೆ. ಇದರ ಜೊತೆ ಸೋಂಕು-ಪ್ರೇರಿತ ಸೈಟೊಪಾಥಿಕ್ ಪರಿಣಾಮ (ಸಿಪಿಇ) ಮತ್ತು ಜೀವಕೋಶದಲ್ಲಿ ಸಾವಿನ ಅಪಾಯವನ್ನು ತಪ್ಪಿಸುತ್ತದೆ. ಚಿಕಿತ್ಸೆಯ ಕಟ್ಟುಪಾಡುಗಳಲ್ಲಿ ವ್ಯಾಪ್ತಿಯಲ್ಲಿ ಔಷಧಿಯನ್ನು ಬಳಸಬಹುದು ಎಂದು ಅಧ್ಯಯನವು ಸೂಚಿಸಿದೆ.
ಇದನ್ನು ಅನಂತ್ ನಾರಾಯಣ್ ಭಟ್, ಅಭಿಷೇಕ್ ಕುಮಾರ್, ಯೋಗೇಶ್ ರೈ, ದಿವಿಯಾ ವೇದಗಿರಿ ಮತ್ತು ಇತರರು ಬರೆದಿರುವ ಈ ಅಧ್ಯಯನದ ವರದಿಯನ್ನು ಕಳೆದ ಜೂನ್ 15ರಂದು ಪ್ರಕಟಿಸಲಾಗಿದೆ. ಈ ಪ್ರಾಥಮಿಕ ಸಂಶೋಧನೆಗಳ ಆಧಾರದ ಮೇಲೆ ಕೊವಿಡ್-19 ರೋಗಿಗಳ ಮೇಲೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಬೇಕಾಗಿದೆ.

ಡಿಸಿಜಿಐ ಅನುಮೋದಿತ 2ಡಿಜಿ ಔಷಧಿ ಬಳಕೆಗೆ ನಿರ್ದೇಶನ:
* 2ಡಿಜಿ ಔಷಧಿಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾವೈರಸ್ ಸೋಂಕಿತರ ತುರ್ತು ಚಿಕಿತ್ಸೆಗೆ ಬಳಸುವುದಕ್ಕೆ ಅನುಮೋದನೆ ನೀಡಲಾಗಿದೆ
* ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಆರಂಭಿಕ ಹಂತದಲ್ಲಿ ವೈದ್ಯರ ಸಲಹೆ ಮೇರೆಗೆ ಗರಿಷ್ಠ 10 ದಿನಗಳವರೆಗೆ ಮಾತ್ರ 2 ಡಿಜಿ ಔಷಧಿಯನ್ನು ಬಳಸಬೇಕು
* ಅನಿಯಮಿತ ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ, ಎಆರ್ ಡಿಎಸ್, ಪಿತ್ತ ಜನನಾಂಗ ಮತ್ತು ಮೂತ್ರಪಿಂಡ ಸಮಸ್ಯೆಯನ್ನು ಎದುರಿಸುತ್ತಿರುವವರ ಮೇಲೆ ಈ ಔಷಧಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಇನ್ನೂ ಅಧ್ಯಯನ ನಡೆಸಲಾಗುತ್ತಿದೆ.
* 2 ಡಿಜಿ ಔಷಧಿಯನ್ನು ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರು ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ನೀಡುವಂತಿಲ್ಲ
* 2ಡಿಜಿ ಔಷಧಿ ಖರೀದಿಸಲು ರೋಗಿಗಳು ಮತ್ತು ವೈದ್ಯರು ಹಾಗೂ ಔಷಧಿ ಮಾರಾಟ ಸಂಸ್ಥೆಗಳು ಹೈದ್ರಾಬಾದಿನಲ್ಲಿ ಇರುವ ಡಾಕ್ಟರ್. ರೆಡ್ಡೀಸ್ ಪ್ರಯೋಗಾಲಯದ ಈ-ಮೇಲ್ ಖಾತೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
2ಡಿಜಿ ಔಷಧಿ ಹೇಗೆ ಕೆಲಸ ಮಾಡುತ್ತೆ?:
ಕೊವಿಡ್-19 ವಿರೋಧಿ ಔಷಧಿ ಆಗಿರುವ 2ಡಿಜಿ ಪುಡಿ ರೂಪದಲ್ಲಿ ಇರಲಿದ್ದು, ನೀರಿನಲ್ಲಿ ಬೆರೆಸಿ ಕುಡಿಯುವ ಮೂಲಕ ಸೇವಿಸಬಹುದಾಗಿದೆ. 2ಡಿಜಿ ಔಷಧಿಯು ಕೊರೊನಾವೈರಸ್ ರೋಗಾಣುವನ್ನು ಒಂದು ಕಡೆ ಸಂಗ್ರಹಿಸಿ ದೇಹವನ್ನೆಲ್ಲಾ ಹರಡುವ ಅಪಾಯವನ್ನು ತಪ್ಪಿಸುವುದರ ಜೊತೆಗೆ ವೈರಸ್ ವಿರುದ್ಧ ಹೋರಾಡಲಿದೆ. ಈ ಔಷಧಿಯಿಂದ ರೋಗಿಗಳಲ್ಲಿ ತೀವ್ರ ಉಸಿರಾಟ ಸಮಸ್ಯೆ ನಿಯಂತ್ರಣಕ್ಕೆ ಬರಲಿದ್ದು, ವೈದ್ಯಕೀಯ ಆಮ್ಲಜನಕ ಬಳಕೆ ಪ್ರಮಾಣ ತಗ್ಗಲಿದೆ. ಅಲ್ಲದೇ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಶೀಘ್ರ ಗುಣಮುಖ ಆಗುತ್ತಾರೆ ಎಂದು ಸರ್ಕಾರ ತಿಳಿಸಿದೆ.












Click it and Unblock the Notifications