ಬೀಟಾ ಟೈಟಾನಿಯಂ ಮಿಶ್ರ ಲೋಹವನ್ನು ಅಭಿವೃದ್ಧಿಪಡಿಸಿದ ಡಿಆರ್‌ಡಿಒ
ನವದೆಹಲಿ, ಜುಲೈ 20: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ದೇಶೀಯವಾಗಿ ಬೀಟಾ ಟೈಟಾನಿಯಂ ಮಿಶ್ರಲೋಹವನ್ನು ಅಭಿವೃದ್ಧಿಪಡಿಸಿದೆ.
ಈ ಲೋಹವನ್ನು ಏರೋಸ್ಪೇಸ್ ಅಪ್ಲಿಕೇಷನ್‌ಗಳಿಗೆ ಬಳಕೆ ಮಾಡಲಾಗುತ್ತದೆ.
ಸಚಿವಾಲಯದ ಏರೋನಾಟಿಕ್ ಡೆವಲಪ್‌ಮೆಂಟ್ ಏಜೆನ್ಸಿ 15ಕ್ಕೂ ಹೆಚ್ಚು ಉಕ್ಕಿನ ಘಟಕಗಳನ್ನು ಗುರುತಿಸಿದೆ. ಇವುಗಳನ್ನು ಮುಂದಿನ ದಿನಗಳಲ್ಲಿ ಬೀಟಾ ಟೈಟಾನಿಯಂ ಮಿಶ್ರಲೋಹ ತಯಾರಿಕೆಗೆ ಬದಲಾಯಿಸಬಹುದು ಎಂದು ಅದು ತಿಳಿಸಿದೆ.
ಬೀಟಾ ಟೈಟಾನಿಯಂ ಮಿಶ್ರಲೋಹವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಡಿಆರ್‌ಡಿಒಮತ್ತು ಉದ್ಯಮವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಅಭಿನಂದಿಸಿದ್ದಾರೆ.

ಟೈಟಾನಿಯಂ ಜತೆಗೆ ವೆನಾಡಿಯಂ,ಕಬ್ಬಿಣ ಮತ್ತು ಅಲ್ಯೂಮಿನಿಯಂ ಅನ್ನು ಒಳಗೊಂಡಿರುವ ಬೀಟಾ ಟೈಟಾನಿಯಂ ಮಿಶ್ರಲೋಹವನ್ನು ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರವಾದ ಸಾಂಪ್ರದಾಯಿಕ ಎನ್‌ಐ-ಸಿಆರ್-ಎಂಒ ರಚನೆಯ ಉಕ್ಕುಗಳಿಗೆ ಪರ್ಯಾಯವಾಗಿ ಬಳಸುತ್ತಿವೆ ಎಂದು ಹೇಳಿದೆ.
ಉಕ್ಕುಗಳಿಗೆ ಹೋಲಿಸಿದರೆ ಬೀಟಾ ಟೈಟಾನಿಯಂ ಮಿಶ್ರಲೋಹ ಅತ್ಯುತ್ತಮ ತುಕ್ಕು ನಿರೋಧಕ ಗುಣ ಮತ್ತು ದೀರ್ಘ ಬಾಳಿಕೆಯ ಸಾಮರ್ಥ್ಯ ಹೊಂದಿದೆ. ದುಬಾರಿ ಬೆಲೆಯ ಲೋಹಗಳ ಬಳಕೆ ತಗ್ಗಿಸಲು ಇದು ಪರಿಣಾಮಕಾರಿಯಾಗಲಿದೆ.












Click it and Unblock the Notifications