LPG Price : ಹೊಸ ವರ್ಷದಂದೇ ಜೇಬಿಗೆ ಕತ್ತರಿ, ಸಿಲಿಂಡರ್ ಬೆಲೆ ಏರಿಕೆ
ನವದೆಹಲಿ, ಜನವರಿ 01; ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಎಸ್) ಹೊಸ ವರ್ಷದ ಮೊದಲ ದಿನವೇ ಜನರ ಜೇಬಿಗೆ ಕತ್ತರಿ ಹಾಕಿವೆ. ಸಿಲಿಂಡರ್‌ಗಳ ಬೆಲೆಯಲ್ಲಿ 25 ರೂ. ಏರಿಕೆ ಮಾಡಿವೆ.
ಜನವರಿ 1ರಿಂದಲೇ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು 25 ರೂ. ಏರಿಕೆ ಮಾಡಲಾಗಿದೆ. ಆದರೆ ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಏರಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕಳೆದ ವರ್ಷ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಒಟ್ಟು 153.5 ರೂ. ಏರಿಕೆಯಾಗಿತ್ತು. ಈ ವರ್ಷದ ಮೊದಲ ದಿನವೇ 25 ರೂ. ದರ ಹೆಚ್ಚಳ ಮಾಡಲಾಗಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಗಳು ಏರಿಕೆಯಾದ ಹಿನ್ನಲೆಯಲ್ಲಿ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಅಹಾರ ಪದಾರ್ಥಗಳ ಬೆಲೆಗಳು ಏರಿಕೆಯಾಗುವ ನಿರೀಕ್ಷೆ ಇದೆ.
ವಿವಿಧ ನಗರಗಳಲ್ಲಿ ಸಿಲಿಂಡರ್ ದರಗಳು
ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್ ದರಗಳನ್ನು ಏರಿಕೆ ಮಾಡಿದ ಬಳಿಕ ವಿವಿಧ ನಗರಗಳಲ್ಲಿ ಸಿಲಿಂಡರ್‌ಗಳ ದರಗಳು ಈ ಕೆಳಗಿನಂತಿವೆ.
* ದೆಹಲಿ 1768 ರೂ.
* ಮುಂಬೈ 1721 ರೂ.
* ಕೋಲ್ಕತ್ತಾ 1870 ರೂ.
* ಚೆನ್ನೈ 1917 ರೂ.
ಜುಲೈ 6, 2022ರಲ್ಲಿ ಕೊನೆಯ ಬಾರಿಗೆ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್ ದರಗಳನ್ನು ಏರಿಕೆ ಮಾಡಿದ್ದವು. ವರ್ಷದಲ್ಲಿ ಒಟ್ಟು 4 ಬಾರಿ ದರಗಳು ಏರಿಕೆಯಾಗಿತ್ತು. ಒಟ್ಟು 153.5 ರೂ. ಏರಿಕೆ ಮಾಡಲಾಗಿತ್ತು.
ಕಳೆದ ವರ್ಷ ಮಾರ್ಚ್‌ನಲ್ಲಿ ಎರಡು ಬಾರಿ 50 ರೂ. ಏರಿಕೆಯಾಗಿತ್ತು. ಮೇ ತಿಂಗಳಿನಲ್ಲಿ 3.50 ರೂ. ಏರಿಕೆ ಮಾಡಲಾಗಿತ್ತು. ಮತ್ತೆ ಜುಲೈ ತಿಂಗಳಿನಲ್ಲಿ 50 ರೂ. ಏರಿಕೆ ಮಾಡಿ ಆದೇಶ ಹೊರಡಿಸಲಾಗಿತ್ತು.
ಸಾಮಾನ್ಯವಾಗಿ ಪ್ರತಿ ತಿಂಗಳ ಆರಂಭದಲ್ಲಿ ಅಥವ 15 ರಂದು ಸಿಲಿಂಡರ್ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗುತ್ತದೆ.












Click it and Unblock the Notifications