ರಾಜಸ್ಥಾನದ ಈ ವ್ಯಕ್ತಿಯ ಮೈಯಲ್ಲಿವೆ 75 ಸೂಜಿಗಳು!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕೋಟಾ (ರಾಜಸ್ಥಾನ), ಮೇ 20: ರಾಜಸ್ಥಾನದ ಕೋಟಾ ಎಂಬ ಊರಿನ ರೈಲ್ವೇ ಉದ್ಯೋಗಿ ಬದ್ರಿಲಾಲ್ ಮೀನಾ ಎಂಬುವವರ ದೇಹದಲ್ಲಿ ಬರೋಬ್ಬರಿ 75 ಸೂಜಿಗಳಿವೆಯಂತೆ! ಅಪ್ಪಿ ತಪ್ಪಿ ಪಿನ್ನು ಚುಚ್ಚಿದರೂ, ಆಹ್, ಅಮ್ಮಾ ಎಂದು ಉದ್ಘಾರ ತೆಗೆಯುವ ನಮಗೆ ವ್ಯಕ್ತಿಯೊಬ್ಬನ ದೇಹದೊಳಗೆ 75 ಸೂಜಿಗಳಿವೆ ಅಂದ್ರೆ ನಂಬಲಿಕ್ಕೆ ಕಷ್ಣವಾಗಬಹುದು. ಆದರೂ ನಂಬಲೇಬೇಕು.

ಡಯಾಬಿಟಿಸ್ ಮತ್ತು ಬಲಗಾಲಿನ ನೋವಿನ ಸಮಸ್ಯೆಯಿಂದ ರಾಜಸ್ಥಾನದ ಆಸ್ಪತ್ರೆಯೊಂದಕ್ಕೆ ತೆರಳಿದ್ದ ಈತನ ದೇಹವನ್ನು ಸ್ಕ್ಯಾನ್ ಮಾಡಿ ಪರೀಕ್ಷಿಸಿದ್ದ ವೈದ್ಯರಿಗೆ ಅಚ್ಚರಿ ಕಾದಿತ್ತು. ಒಂದಲ್ಲ, ಎರಡಲ್ಲ 75 ಸೂಜಿಗಳು ಈತನ ದೇಹದ ತುಂಬೆಲ್ಲ ತುಂಬಿಕೊಂಡಿದ್ದು, ಈ ಬಗ್ಗೆ ವೈದ್ಯರು ಆತನ ಬಳಿ ವಿಚಾರಿಸಿದರೆ ಆತನಿಗೆ ಏನೇನೂ ಗೊತ್ತಿಲ್ಲ![ಮಗಳಿಗೆ ಜನ್ಮವನ್ನಷ್ಟೇ ಅಲ್ಲ, ತನ್ನ ಗರ್ಭವನ್ನೂ ನೀಡಿದ ಪುಣೆಯ ತಾಯಿ!]

Doctors in Rajasthan find 75 needle in a patients body!

ನಾನಂತೂ ಸೂಜಿಯನ್ನು ನುಂಗಿಲ್ಲ, ನನ್ನ ದೇಹದಲ್ಲಿ ಇಷ್ಟೊಂದು ಸೂಜಿ ಹೇಗೆ ಬಂತು ಅನ್ನೋದು ನಂಗೆ ಗೊತ್ತೇ ಇಲ್ಲ ಅನ್ನುತ್ತಾರೆ ಬದ್ರಿಲಾಲ್. 56 ವರ್ಷದ ಬದ್ರಿಲಾಲ್ ಆರೋಗ್ಯಕ್ಕೆ ಯಾವುದೇ ಹಾನಿಯಾಗದಂತೆ, ಈತನ ದೇಹದಲ್ಲಿರುವ ಸೂಜಿಗಳನ್ನೆಲ್ಲ ತೆಗೆಯುವುದು ವೈದ್ಯರಿಗೆ ಸವಾಲೇ ಸರಿ!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Doctors in Rajasthan find 75 needle in a patients body! The strange incident is a challenge to medical field.
Please Wait while comments are loading...