• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊವಿಡ್ 19 ಜತೆ ಮಹಿಳಾ ವೈದ್ಯರನ್ನು ಕಾಡುತ್ತಿದೆ ಮತ್ತೊಂದು ಸಮಸ್ಯೆ

|

ನವದೆಹಲಿ, ಜುಲೈ 1: ಮಹಿಳಾ ವೈದ್ಯರಿಗೆ ಕೊವಿಡ್ 19 ಮಾತ್ರವಲ್ಲ ಮತ್ತೊಂದು ಗಂಭೀರ ಸಮಸ್ಯೆಯೂ ಅವರನ್ನು ಕಾಡುತ್ತಿದೆ.

   Zameer Ahmed Khan : ವಿವಾದಕ್ಕೆ ಕಾರಣವಾಯ್ತು ಶಾಸಕ ಜಮೀರ್ ಅಹಮ್ಮದ್ ಖಾನ್ 'ಪಾದಪೂಜೆ'! | Oneindia Kannada

   ಸತತ ಆರೇಳು ಗಂಟೆಗಳ ಕಾಲ ಪಿಪಿಇ ಕಿಟ್ ಧರಿಸಿ ಕೊವಿಡ್ 19 ವಾರ್ಡ್‌ಗಳಲ್ಲಿ ಕೆಲಸ ಮಾಡುವುದು ಕಷ್ಟ ಆದರೆ ಈ ಕೊವಿಡ್ 19 ಜೊತೆಗೆ ಮತ್ತೊಂದು ಸಮಸ್ಯೆಯೂ ಮಹಿಳಾ ವೈದ್ಯರನ್ನು ಕಾಡುತ್ತಿದೆ.

   ರೋಗಿಗಳನ್ನು ನೋಡಿಕೊಳ್ಳುವುದರ ಜೊತೆಗೆ ಮುಟ್ಟಿನ ಬೇನೆ, ಆಯಾಸವನ್ನೂ ತಡೆದುಕೊಳ್ಳಬೇಕಿದೆ ಎಂದು ವೈದ್ಯರು ಹೇಳಿದ್ದಾರೆ.

   ಭಾರತದಲ್ಲಿ ಮತ್ತೆ 507 ಮಂದಿ ಸಾವು: 18,653 ಮಂದಿಗೆ ಕೊರೊನಾ ಸೋಂಕು

   ಪಿಪಿಇ ಕಿಟ್ ಧರಿಸುವುದರಿಂದ ಮುಟ್ಟಿನ ಸಂದರ್ಭದಲ್ಲಿ ದೇಹವು ಡಿ ಹೈಡ್ರೇಟ್ ಆಗುತ್ತದೆ, ನೀರಿನ ಪ್ರಮಾಣ ಕಡಿಮೆಯಾಗಿ ಆಯಾಸ ಹೆಚ್ಚಾಗುತ್ತದೆ. ಬಾತ್‌ ರೂಂಗೆ ತೆರಳಿ ಸ್ಯಾನಿಟರಿ ಪ್ಯಾಡ್ ಗಳನ್ನು ಬದಲಾಯಿಸಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ ಎನ್ನುವ ಸತ್ಯವನ್ನು ವೈದ್ಯರು ಹೇಳಿಕೊಂಡಿದ್ದಾರೆ.

   'ಹಿಂದೂಸ್ತಾನ್ ಟೈಮ್ಸ್' ವಿಶ್ವ ವೈದ್ಯರ ದಿನದ ಅಂಗವಾಗಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಕೆಇಎಂ ಆಸ್ಪತ್ರೆಯ ವೈದ್ಯೆ ರೇಷ್ಮಾ ಶಿಂದೆ ಮಾಹಿತಿ ನೀಡಿದ್ದಾರೆ.

   ಮದುವೆ ಮುರಿದುಬಿತ್ತು

   ಮದುವೆ ಮುರಿದುಬಿತ್ತು

   ಕೊವಿಡ್ 19 ನಿಂದಾಗಿ ಮದುವೆ ಮುರಿದುಬಿದ್ದಿದೆ, ವೈದ್ಯೆ ಎಂದು ತಿಳಿದು ಎಲ್ಲ ಹಿಂದಿರುಗುತ್ತಿದ್ದಾರೆ. ಇದೆಲ್ಲವೂ ಕೊರೊನಾ ವೈರಸ್‌ನಿಂದಲೇ ಆಗಿದೆ. ಕನಸಿನ ಮದುವೆ ಮುರಿದುಬಿದ್ದಾಗ ಮನಸ್ಸು ಕೂಡ ಮೂಲೆಗುಂಪಾಗಿತ್ತು ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.

   ನಾವು ರೋಗಿಗಳನ್ನು ಬದುಕಿಸಲು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿರುತ್ತೇವೆ ಆದರೆ ಸಮಾಜ ನಮ್ಮನ್ನು ಕಾಣುವ ರೀತಿ ಇದು.

   ರೋಗಿಗಳಿಗೆ ಚಿಕಿತ್ಸೆ ನೀಡುವುದು ತಪ್ಪೇ?

   ರೋಗಿಗಳಿಗೆ ಚಿಕಿತ್ಸೆ ನೀಡುವುದು ತಪ್ಪೇ?

   ಮತ್ತೊಬ್ಬ ವೈದ್ಯರು ತಮ್ಮ ನೋವನ್ನು ಹಂಚಿಕೊಂಡಿದ್ದು, ತಮಗೂ ಇದೇ ರೀತಿ ಅನುಭವವಾಗಿದೆ ಎಂದಿದ್ದಾರೆ , ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಫೋಟೊ ನೋಡಿ ಇಷ್ಟಪಟ್ಟಿದ್ದ ಹುಡುಗನ ಕುಟುಂಬದವರು ಫೆಬ್ರವರಿಯಲ್ಲಿ ನೆಂಟಸ್ಥನ ಬೆಳೆಸಿದ್ದರು. ಏಪ್ರಿಲ್ ವರೆಗೂ ಎಲ್ಲವೂ ಸರಿಯಾಗಿಯೇ ಇತ್ತು, ಯಾವಾಗ ಕೊವಿಡ್ ಡ್ಯೂಟಿಗೆ ಹೋಗಲು ಆರಂಭಿಸಿದೆ, ಆಗ ವರ ಹಾಗೂ ಆತನ ಕಡೆಯವರು ಆಸ್ಪತ್ರೆಗೆ ಹೋಗುವುದನ್ನು ನಿಲ್ಲಿಸುವಂತ ಒತ್ತಾಯಿಸಿದರು. ಆದರೆ ನಾನು ಕರ್ತವ್ಯ ಮರೆಯಲಿಲ್ಲ, ಕರ್ತವ್ಯಕ್ಕೆ ಹಾಜರಾದೆ, ಬಳಿಕ ಸಂಬಂಧವನ್ನು ಕಳೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.

   ಪೀರಿಯಡ್ಸ್ ಡೇಟ್ ಮರೆತುಹೋಗಿತ್ತು

   ಪೀರಿಯಡ್ಸ್ ಡೇಟ್ ಮರೆತುಹೋಗಿತ್ತು

   'ಒಮ್ಮೆ ಮುಟ್ಟಿನ ದಿನಾಂಕ ಮರೆತು ಹೋಗಿತ್ತು, ಪಿಪಿಇ ಕಿಟ್ ಧರಿಸಿದ್ದೆ, ಕಿಟ್ ಒಳಗೆ ರಕ್ತಸ್ರಾವವಾಗಿತ್ತು. ಅಂದು ಕರ್ತವ್ಯದಲ್ಲಿದ್ದ ಕಾರಣ ಪಿಪಿಇ ಕಿಟ್ ತೆರೆದರೆ ಅದರಿಂದ ತೊಂದರೆಯಾಗುತ್ತಿತ್ತು, ಹೀಗಾಗಿ ಆರು ಗಂಟೆಗಳ ಕಾಲ ಪಿಪಿಇ ಕಿಟ್ ಧರಿಸಿಯೇ ರೋಗಿಗೆ ಚಿಕಿತ್ಸೆ ನೀಡಿದ್ದೆ ಎಂದು ಡಾ. ಸುದೇಶ್ನಾ ಸಾಲ್ವಿ ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

   ಮಹಿಳಾ ವೈದ್ಯರಿಗೆ ಸಂಪೂರ್ಣ ಸಹಕಾರ

   ಮಹಿಳಾ ವೈದ್ಯರಿಗೆ ಸಂಪೂರ್ಣ ಸಹಕಾರ

   ಕೊವಿಡ್ 19 ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಗೌತಮ್ ಮಾತನಾಡಿದ್ದು, ಮಹಿಳಾ ವೈದ್ಯರು ಧೈರ್ಯದಿಂದ ಕೆಲಸ ಮಾಡುತ್ತಿದ್ದಾರೆ. ಒಂದೊಮ್ಮೆ ಇಂತಹ ಸಮಸ್ಯೆಗಳು ಇದ್ದರೆ ನೇರವಾಗಿ ನಮ್ಮ ಬಳಿ ಹೇಳಿ, ನಾವು ಡ್ಯೂಟಿಯ ದಿನಾಂಕವನ್ನು ಬದಲಿಸಿಕೊಡುತ್ತೇವೆ ಎಂದು ಹೇಳಿದ್ದಾರೆ.

   English summary
   Working for six hours straight donning personal protective equipment (PPE) inside a Covid-19 ward is tough, especially for women doctors during their monthly menstrual cycle. The social discrimination that they face makes it worse, said most doctors HT spoke to ahead of the World Doctor’s Day (July 1).
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more