ಗ್ರಾಮೀಣ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ವೈದ್ಯ ತೆಗೆದುಕೊಂಡ ಮಾನವೀಯ ನಡೆಗೆ ಮೆಚ್ಚುಗೆ, ಮಕ್ಕಳಿಗಾಗಿ ಮಾಡಿದ್ದೇನು

ಭಾರತದ ವಿವಿಧ ಭಾಗಗಳಲ್ಲಿ ಹೆಣ್ಣು ಮಕ್ಕಳು ಶಾಲಾ - ಕಾಲೇಜಿಗೆ ಹೋಗುವುದಕ್ಕೆ ಇಂದಿಗೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದಿಂದ ಶಾಲಾ - ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳು ಸಾರಿಗೆ ಹಾಗೂ ಸುರಕ್ಷತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಈ ಸಮಸ್ಯೆಯನ್ನು ತಪ್ಪಿಸಲು ವೈದ್ಯರೊಬ್ಬರು ಕಂಡುಕೊಂಡ ಮಾರ್ಗವು ಇದೀಗ ದೇಶದಾದ್ಯಂತ ಜನರ ಗಮನ ಸೆಳೆದಿದೆ. ಹೆಣ್ಣು ಮಕ್ಕಳ ಶಿಕ್ಷಣದ ವಿಚಾರದಲ್ಲಿ ವೈದ್ಯರು ತೆಗೆದುಕೊಂಡ ನಿರ್ಧಾರವೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಶಾಲೆ ತಲುಪಲು ಪ್ರತಿದಿನ ಕಿಲೋಮೀಟರ್‌ಗಟ್ಟಲೆ ನಡೆದುಕೊಂಡು ಹೋಗುತ್ತಿದ್ದ ಗ್ರಾಮೀಣ ಹೆಣ್ಣು ಮಕ್ಕಳ ಕಷ್ಟಕ್ಕೆ ಸ್ಪಂದಿಸಿದ ವೈದ್ಯರೊಬ್ಬರು, ತಮ್ಮ ಭವಿಷ್ಯ ನಿಧಿಯಲ್ಲಿ ಕೂಡಿಟ್ಟಿದ್ದ ಬರೋಬ್ಬರಿ 19 ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಿ ಬಸ್ ಖರೀದಿಸಿದ್ದಾರೆ. ರಾಜಸ್ಥಾನದ ಡಾ. ಆರ್.ಪಿ. ಯಾದವ್ ಅವರ ಈ ಮಾನವೀಯ ನಿರ್ಧಾರ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದು, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಅವರು ತೋರಿದ ಕಾಳಜಿ ಮೆಚ್ಚುಗೆಗೆ ಪಾತ್ರವಾಗಿದೆ.

Doctor Heartwarming Gesture for Rural Girls Education Wins Praise What Did He Do for Them

ಭಾರತದ ವಿವಿಧ ಭಾಗಗಳಲ್ಲಿ ಹೆಣ್ಣು ಮಕ್ಕಳು ಶಾಲಾ - ಕಾಲೇಜಿಗೆ ಹೋಗುವುದಕ್ಕೆ ಇಂದಿಗೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಹುಡುಗಿಯರು ಶಾಲಾ - ಕಾಲೇಜಿಗೆ ಹೋಗುವುದಕ್ಕೆ ಸಾಧ್ಯವಾಗದೆಯೇ ಉನ್ನತ ವಿದ್ಯಾಭ್ಯಾಸ ಮಾಡದೆ ಇರುವುದು ಸಹ ಇದೆ. ಆದರೆ, ಹುಡುಗಿಯರು ಶಾಲೆ ಮತ್ತು ಕಾಲೇಜು ತಲುಪಲು ಸಹಾಯ ಮಾಡಲು ವೈದ್ಯರೊಬ್ಬರು ತಮ್ಮ ಸ್ವಂತ ಪಿಎಫ್ ಉಳಿತಾಯದಿಂದ 19 ಲಕ್ಷವನ್ನು ಹಿಂಪಡೆದಿದ್ದಾರೆ.

ಗ್ರಾಮೀಣ ಭಾರತದ ಅನೇಕ ಹುಡುಗಿಯರಿಗೆ, ಶಿಕ್ಷಣದ ಪ್ರಯಾಣವು ಕೇವಲ ಅಧ್ಯಯನ ಭಾಗ ಮಾತ್ರವಲ್ಲ. ಕೆಲವೊಮ್ಮೆ, ಇದು ಪ್ರತಿದಿನ ಹಲವಾರು ಕಿಲೋಮೀಟರ್ ನಡೆದುಕೊಂಡು ಹೋಗುವುದರೊಂದಿಗೆ ಪ್ರಾರಂಭವಾಗುತ್ತದೆ. ರಾಜಸ್ಥಾನದ ಕೋಟ್‌ಪುಟ್ಲಿಯಲ್ಲಿ, ಆರ್.ಪಿ. ಯಾದವ್ ಎಂಬ ವೈದ್ಯರು ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಸಮಸ್ಯೆಯನ್ನು ನೋಡಿ ಅದಕ್ಕೊಂದು ಪರಿಹಾರ ಕಂಡುಕೊಂಡಿದ್ದಾರೆ.

ಸೂಕ್ತ ಹಾಗೂ ಸುರಕ್ಷಿತ ಸಾರ್ವಜನಿಕ ಸಾರಿಗೆ ಸಂಪರ್ಕ ಇಲ್ಲದೆ ಇರುವುದರಿಂದ ಹತ್ತಿರದ ಹಳ್ಳಿಗಳ ಹುಡುಗಿಯರು ಶಾಲೆ ಮತ್ತು ಕಾಲೇಜಿಗೆ ತಲುಪಲು ಕಷ್ಟಪಡುತ್ತಿದ್ದರು. ಇದನ್ನು ನೋಡಿದ ವೈದ್ಯರು ತಮ್ಮ ಭವಿಷ್ಯ ನಿಧಿ ಉಳಿತಾಯದಿಂದ 19 ಲಕ್ಷ ರೂಪಾಯಿಯನ್ನು ಹಿಂತೆಗೆದುಕೊಂಡಿದ್ದರು ಮತ್ತು ಬಸ್ ಖರೀದಿಸಲು ಆ ಹಣವನ್ನು ಬಳಸಿದ್ದಾರೆ. ಹುಡುಗಿಯರು ಪ್ರತಿದಿನ ಹೆಚ್ಚು ದೂರ ನಡೆಯದೆ ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಪ್ರಯಾಣಿಸಲು ಸಹಾಯ ಮಾಡುವುದು ಅವರ ಉದ್ದೇಶವಾಗಿತ್ತು.

ಭವಿಷ್ಯ ನಿಧಿಯ ಹಣವು ವರ್ಷಗಳ ಕೆಲಸ ಮತ್ತು ಉಳಿತಾಯದ ಮೂಲಕ ಕೂಡಿಟ್ಟ ಹಣವಾಗಿತ್ತು. ಇದು ಆರ್ಥಿಕ ಭದ್ರತೆ ಮತ್ತು ಭವಿಷ್ಯದ ಯೋಜನೆಗಳನ್ನು ಪ್ರತಿನಿಧಿಸುತ್ತದೆ. ಆದರೂ ಈ ವೈದ್ಯರು ತಮ್ಮ ಉಳಿತಾಯದ ದೊಡ್ಡ ಮೊತ್ತವನ್ನು ಇತರ ಕುಟುಂಬಗಳಿಗೆ ಒಳ್ಳೆಯದು ಮಾಡಲು ಹಾಗೂ ಅವರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ಮಕ್ಕಳು ಶಾಲೆಗೆ ಸುರಕ್ಷಿತವಾಗಿ ಹೋಗಲು ಬಸ್‌ನಂತಹ ಸಾರಿಗೆ ವ್ಯವಸ್ಥೆಯೂ ಅಗತ್ಯವಾಗಿರುತ್ತದೆ. ಬಸ್ ಒಂದು ಸಾಮಾನ್ಯ ವಾಹನವಾಗಿರಬಹುದು. ಆದರೆ ಪ್ರತಿದಿನ ಹಲವು ಕಿಲೋಮೀಟರ್ ನಡೆದು ಶಾಲೆಗೆ ಹೋಗುವ ಹೆಣ್ಣುಮಕ್ಕಳಿಗೆ ಅದು ದೊಡ್ಡ ಸಹಾಯವಾಗಿದೆ. ಸಮಾಜದಲ್ಲಿ ಬದಲಾವಣೆ ತರಲು ದೊಡ್ಡ ಯೋಜನೆಗಳೇ ಬೇಕಿಲ್ಲ. ಒಬ್ಬ ವ್ಯಕ್ತಿ ಸಮಸ್ಯೆಯನ್ನು ಅರಿತು, ಅದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾದರೂ ಸಾಕು ಅದನ್ನು ಡಾ. ಆರ್.ಪಿ. ಯಾದವ್ ಅವರು ಈ ಕೆಲಸವನ್ನು ಮಾಡಿದ್ದಾರೆ. ಅಲ್ಲದೆ ಬದಲಾವಣೆ ತರಲು ದೊಡ್ಡ ಹುದ್ದೆ ಅಥವಾ ಅಧಿಕಾರ ಬೇಕಿಲ್ಲ. ಒಳ್ಳೆಯ ಮನಸ್ಸು ಮತ್ತು ಏನಾದರೂ ಮಾಡಬೇಕೆಂಬ ಆಸಕ್ತಿ ಇದ್ದರೆ ಸಾಕು.

ಇನ್ನು ಈ ವಿಷಯವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗ್ರಾಮೀಣ ಭಾರತದಲ್ಲಿ ಉತ್ತಮ ಶಾಲೆಗಳನ್ನು ನಿರ್ಮಿಸುವುದಕ್ಕೆ ಹಾಗೂ ಮಕ್ಕಳು ಈಗಿರುವ ಶಾಲೆಗಳಿಗೆ ಸುಲಭವಾಗಿ ಹೋಗಲು ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಅತ್ಯವಶ್ಯಕ ಎಂದು ಹಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+