2025ರ ಹೊಸ ವರ್ಷದ ಮೊದಲ ರಾತ್ರಿ ಹೆಚ್ಚು ಸೇಲಾಗಿದ್ದು ಯಾವ ಫ್ಲೇವರ್ ಕಾಂಡೋಮ್ ಗೊತ್ತಾ?
ಈ ಬಾರಿ 2025ರ ಹೊಸ ವರ್ಷವನ್ನು ದೇಶದೆಲ್ಲೆಡೆ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇದೇ ವೇಳೆ ಕೆಲವೊಂದು ಫ್ಲೆವರ್‌ಗಳ ಕಾಂಡೋಮ್‌ಗಳನ್ನು ಅತೀ ಹೆಚ್ಚಾಗಿ ಬಳಕೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಯಾವೆಲ್ಲ ಫ್ಲೆವರ್‌ನ ಕಾಂಡೋಮ್‌ಗಳನ್ನು ಹೆಚ್ಚಾಗಿ ಬಳಕೆ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸಾಮಾನ್ಯವಾಗಿ ಪ್ರತಿ ಬಾರಿಯೂ ಹೊಸ ವರ್ಷದ ಮುನ್ನಾದಿನ ಅತೀ ಹೆಚ್ಚು ಕಾಂಡೋಮ್‌ಗಳನ್ನು ಬುಕ್ ಮಾಡಿರುವ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲಾಗುತ್ತದೆ. ಹಾಗೆಯೇ ಈ 2025ರ ಹೊಸ ವರ್ಷದ ಮೊದಲ ರಾತ್ರಿ ಭಾರತದಲ್ಲಿ ಯಾವ ಫ್ಲೇವರ್ ಕಾಂಡೋಮ್ ಅತೀ ಹೆಚ್ಚು ಮಾರಾಟವಾಗಿದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.

ಹಲವು ಕಂಪನಿಗಳ ಕಾಂಡೋಮ್‌ಗಳನ್ನು ಕಾಣಬಹುದಾಗಿದೆ. ಅದರಲ್ಲೂ ಸುಮಾರು ಫ್ಲೇವರ್‌ಗಳು ಇರುತ್ತವೆ. 2024ರ ಹೊಸ ವರ್ಷದ ಹಿಂದಿನ ದಿನ ದಾಖಲೆ ಮಟ್ಟದಲ್ಲಿ ಕಾಂಡೋಮ್‌ಗಳು ಸೇಲ್ ಆಗಿದ್ದವು ಎಂದು ವರದಿಯಾಗಿತ್ತು. ಕೆಲವು ಫ್ಲೇವರ್ ಕಾಂಡೋಮ್ ಮಾತ್ರ ಅತೀ ಹೆಚ್ಚು ಮಾರಾಟ ಆಗಿದ್ದವು. ಇದೀಗ 2025ರ ಹೊಸ ವರ್ಷದ ಮುನ್ನಾದಿನ ಎರಡು ಫ್ಲೇವರ್‌ಗಳು ಅತೀ ಹೆಚ್ಚು ಮಾರಾಟವಾದ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ.
ಮೊದಲೆಲ್ಲ ಸ್ವಿಗ್ಗಿ, ಝೊಮೆಟೋ ಇಂತಹವುಗಳನ್ನ ಬರೀ ಫುಡ್, ಕೆಲವು ವಸ್ತುಗಳನ್ನು ಆರ್ಡರ್ ಮಾಡಲು ಮಾತ್ರ ಬಳಕೆ ಮಾಡುತ್ತಿದ್ದರು. ಆದರೆ ಇದೀಗ ಇವುಗಳಲ್ಲೇ ಅತೀ ಹೆಚ್ಚು ಕಾಂಡೋಮ್‌ಗಳನ್ನು ಆರ್ಡರ್ ಮಾಡುತ್ತಿದ್ದಾರೆ. ಪ್ರತೀ ಬಾರಿಯಂತೆ ಭಾರತವು 2025ರ ಹೊಸ ವರ್ಷದ ಮೊದಲ ರಾತ್ರಿ ಕೆಲವು ತ್ವರಿತ ಡೆಲಿವರಿ ದಾಖಲೆಗಳನ್ನು ಮುರಿಯುವ ಮೂಲಕ ಹೊಸ ದಾಖಲೆ ಬರೆದಿದೆ.
ಸ್ವಿಗ್ಗಿ ಇನ್‌ಸ್ಟಾಮಾರ್ಟ್, ಬ್ಲಿಂಕಿಟ್, ಬಿಗ್‌ಬಾಸ್ಕೆಟ್ ಮತ್ತು ಇಂತಹ ಅನೇಕ ವಿತರಣಾ ಸ್ಟಾರ್ಟ್‌ಅಪ್‌ಗಳು ತಮ್ಮ ಗ್ರಾಹಕರು ಆರ್ಡರ್ ಮಾಡಿರುವ ವಸ್ತುಗಳ ವಿವರನ್ನು ಪೋಸ್ಟ್ ಮಾಡಿಕೊಂಡಿವೆ. ಇದು ಇದೀಗ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ. ಕಾಂಡೋಮ್‌ಗಳಿಂದ ಹಿಡಿದು ಚಿಪ್ಟ್‌ಗಳ ಪ್ಯಾಕೆಟ್‌ಗಳವರೆಗೆ ಹೊಸ ವರ್ಷದ ಮುನ್ನಾದಿನದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಇವುಗಳನ್ನು ಆರ್ಡರ್ ಮಾಡಿದ್ದಾರೆ.
ಬ್ಲಿಂಕಿಟ್ ಸಹ ಸಂಸ್ಥಾಪಕ ಅಲ್ಬಿಂದರ್ ದಿಂಡ್ಸಾ ಅವರ ಪ್ರಕಾರ, ಪಾರ್ಟಿ ಸ್ಟೇಪಲ್ಸ್‌ಗಳಾದ ಚಿಪ್ಸ್, ಕೋಕ್ ಮತ್ತು ನಮ್ಕೀನ್ ಸಂಜೆಯ ಟೋಸ್ಟ್ ಆಗಿದ್ದವು. ಡಿಸೆಂಬರ್ 31ರಂದು ರಾತ್ರಿ 8 ಗಂಟೆಯ ವೇಳೆಗೆ ಅವರ ಡೆಲಿವರಿ ಎಕ್ಸಿಕ್ಯೂಟಿವ್‌ಗಳು 2.3 ಲಕ್ಷ ಪ್ಯಾಕೆಟ್ ಆಲೂ ಭುಜಿಯ ಮತ್ತು 6,834 ಪ್ಯಾಕೆಟ್ ಐಸ್ ಕ್ಯೂಬ್‌ಗಳನ್ನು ತಲುಪಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಹೆಚ್ಚು ಮಾರಾಟದವಾದ ಫ್ಲೇವರ್‌ಗಳಿವು: ಶೇಕಡ 39ರಷ್ಟು ಕಾಂಡೋಮ್ ಮಾರಾಟವಾಗಿದ್ದು, ಇದರಲ್ಲಿ ಚಾಕೊಲೇಟ್ ಫ್ಲೇವರ್, ಸ್ಟ್ರಾಬೆರಿ ಶೇಕಡಾ 31 ಮತ್ತು ಬಬಲ್ಗಮ್ ಫ್ಲೇವರ್ ಕಾಂಡೋಮ್‌ಗಳನ್ನು ಶೇಕಡಾ 19ರಷ್ಟು ಗ್ರಾಹಕರು ಆರ್ಡರ್ ಮಾಡಿದ್ದರು ಎನ್ನುವ ಮಾಹಿತಿ ಇದೀಗ ಬಹಿರಂಗಗೊಂಡಿದೆ.
* ಚಾಕೊಲೇಟ್ ಫ್ಲೇವರ್: ಚಾಕೊಲೇಟ್‌ಗಳು ಮತ್ತು ಪ್ರಣಯವು ಯಾವಾಗಲೂ ಕೈಜೋಡಿಸುತ್ತವೆ ಮತ್ತು ಹೆಚ್ಚು ಇಷ್ಟಪಡುವ ಸುವಾಸನೆಯ ಕಾಂಡೋಮ್‌ಗೆ ಬಂದಾಗ, ಚಾಕೊಲೇಟ್ ಅತ್ಯುತ್ತಮ ಆಯ್ಕೆಯಾಗಿದೆ. ಇದು ಮಹಿಳೆಯರು ಮತ್ತು ಪುರುಷರಿಬ್ಬರನ್ನೂ ಪ್ರಚೋದಿಸುತ್ತದೆ. ಲೈಂಗಿಕತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಆದ್ದರಿಂದ ಇದಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
* ಸ್ಟ್ರಾಬೆರಿ ಫ್ಲೇವರ್: ಸ್ಟ್ರಾಬೆರಿ ಅತ್ಯಂತ ಇಷ್ಟಪಡುವ ಹಣ್ಣುಗಳಲ್ಲಿ ಒಂದಾಗಿದೆ. ಮೌಖಿಕ ಸಂಭೋಗದ ಸಮಯದಲ್ಲಿ ಸ್ಟ್ರಾಬೆರಿಗಳ ವಾಸನೆಯನ್ನು ಪಡೆದಾಗ ಮಹಿಳೆಯರು ಅದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.
* ಆರೆಂಜ್ ಫ್ಲೇವರ್: ಕಿತ್ತಳೆ ಹಣ್ಣಿನ ರಿಫ್ರೆಶ್‌ಮೆಂಟ್ ಜೊತೆಗೆ ಲೈಂಗಿಕ ಆನಂದವು ದಂಪತಿಗಳು ಬಹಳಷ್ಟು ಆನಂದಿಸುವ ತಾಜಾ ಭಾವನೆಯಾಗಿದೆ. ಮೌಖಿಕ ಸಂಭೋಗಕ್ಕೆ ಬಂದಾಗ ಇದು ಮತ್ತೆ ಹೆಚ್ಚು ಇಷ್ಟಪಟ್ಟ ಕಾಂಡೋಮ್ ಸುವಾಸನೆಗಳಲ್ಲಿ ಒಂದಾಗಿದೆ.
* ಗ್ರೇಪ್ಸ್ ಫ್ಲೇವರ್: ನೀವು ಜಾಹೀರಾತುಗಳಲ್ಲಿ ಅಥವಾ ಚಲನಚಿತ್ರಗಳಲ್ಲಿ ನೋಡಿರಬೇಕು, ಹುಡುಗಿಯೊಬ್ಬಳು ತನ್ನ ಕೈಯಲ್ಲಿ ದ್ರಾಕ್ಷಿಯ ಗೊಂಚಲು ಹಿಡಿದುಕೊಳ್ಳುತ್ತಾಳೆ. ನಂತರ ಹುಡುಗ ಅದನ್ನು ತಿನ್ನಲು ಪ್ರಯತ್ನಿಸುತ್ತಾನೆ. ಲೈಂಗಿಕ ಸಂಭೋಗದ ಸಮಯದಲ್ಲಿ ಆನಂದವನ್ನು ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ. ಆದ್ದರಿಂದ ದ್ರಾಕ್ಷಿ ರುಚಿಯ ಕಾಂಡೋಮ್‌ಗಳನ್ನು ಬಳಸಲಾಗುತ್ತದೆ.
* ಮ್ಯಾಂಗೋ ಫ್ಲೇವರ್: ಈ ಸುಗಂಧವು ನಿಮ್ಮ ಮಲಗುವ ಕೋಣೆಯಲ್ಲಿ ಪರಿಮಳವನ್ನು ಸೂಸುತ್ತದೆ. ಮತ್ತು ಲೈಂಗಿಕ ಅನುಭವವನ್ನು ಹೆಚ್ಚಿಸುತ್ತದೆ.
ಕಾಂಡೋಮ್ ಎಂಬ ಹೆಸರು ಕೇಳಿದರೆ, ಇದರೆ ಬಗ್ಗೆ ಮಾತನಾಡಿದರೆ ಸಾಕು ಬಹುತೇಕ ಜನರು ಮುಜುಗರಪಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಇದು ಅಸಹ್ಯ ಎಂಬ ಅರ್ಥವನ್ನು ಕಲ್ಪಿಸಿಕೊಂಡು ಕೋಪಗೊಳ್ಳುತ್ತಾರೆ. ಆದರೆ ಕಾಂಡೋಮ್ ಅನ್ನು ಉತ್ತಮ ಉದ್ದೇಶವಾಗಿಯೂ ನಾವು ಪರಿಗಣಿಸಬೇಕಾಗುತ್ತದೆ. ಯಾಕೆಂದರೆ ಇದರಿಂದ ಲೈಂಗಿಕವಾಗಿ ಹರಡುವ ಸೋಂಕುಗಳು ಮತ್ತು ಇನ್ನಿತರ ರೋಗಗಳನ್ನು ಹರಡುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸುವಾಸನೆಬರಿತ ಕಾಂಡೋಮ್‌ಗಳ ಬಳಕೆ ಸಂಭೋಗವನ್ನು ಅತ್ಯಾಕರ್ಷಕವಾಗಿಸಲು ಮತ್ತು ಸುರಕ್ಷಿತವಾಗಿರಲು ಅದ್ಭುತವಾದ ಮಾರ್ಗವಾಗಿದೆ. ಅಲ್ಲದೆ, ಕಾಂಡೋಮ್‌ಗಳನ್ನು ಬಳಸುವುದು, ವಿಶೇಷವಾಗಿ ಲೈಂಗಿಕ ಸಂಭೋಗ ಮತ್ತು ಮೌಖಿಕ ಸಂಭೋಗದ ಸಮಯದಲ್ಲಿ, ಲೈಂಗಿಕವಾಗಿ ಹರಡುವ ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸಿಕೊಳ್ಳುವ ಏಕೈಕ ಮಾರ್ಗವಾಗಿದೆ.
ಲೈಂಗಿಕತೆಯು ಉತ್ತಮ ಭಾವನೆಯನ್ನು ಮಾತ್ರವಲ್ಲ, ಆರೋಗ್ಯದ ಪ್ರಯೋಜನಕಾರಿಯೂ ಹೌದು. ಆದರೆ ಇದೇ ಅತಿಯಾಗಬಾರದು ಅಷ್ಟೇ. ಪ್ರಪಂಚದಾದ್ಯಂತ ನಡೆಸಲಾದ ಅಧ್ಯಯನಗಳು ಆಗಾಗ್ಗೆ ಲೈಂಗಿಕತೆಯನ್ನು ಹೊಂದಿರುವ ಜನರು ಹೆಚ್ಚು ಕಾಲ ಬದುಕುತ್ತಾರೆ ಎನ್ನುವ ಉಲ್ಲೇಖವಿದೆ. ಆದರೆ ನೀವು ಯಾವುದೇ ರೀತಿಯ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗಲೆಲ್ಲಾ ಕಾಂಡೋಮ್‌ಗಳನ್ನು ಬಳಸುವುದು ಆರೋಗ್ಯಕರ ದೃಷ್ಟಿಯಿಂದ ತುಂಬಾ ಒಳ್ಳೆಯದು.












Click it and Unblock the Notifications