ವಿಚ್ಛೇದನಕ್ಕೆ 6 ತಿಂಗಳು ಕಾಯುವ ಅಗತ್ಯವಿಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ವಿಚ್ಛೇದನಕ್ಕೆ ಸಂಬಂಧ ಪಟ್ಟಂತೆ ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ. ಐವರು ನ್ಯಾಯಾಧೀಶರನ್ನು ಒಳಗೊಂಡ ಸಾಂವಿಧಾನಿಕ ಪೀಠ ತೀರ್ಪು ಪ್ರಕಟಿಸಿದ್ದು, ಇನ್ನು ಮುಂದೆ ವಿವಾಹ ವಿಚ್ಛೇದನಕ್ಕೆ ದಂಪತಿಗಳು ಆರು ತಿಂಗಳ ಕಾಯುವ ಅಗತ್ಯವಿಲ್ಲ ಎಂದು ಹೇಳಿದೆ.
ಸಂವಿಧಾನ ಪರಿಚ್ಛೇದ 32 ರ ಅಡಿಯಲ್ಲಿ ವಿಶೇಷ ಅಧಿಕಾರವನ್ನು ಅನ್ವಯಿಸುವ ಮೂಲಕ ವಿಚ್ಛೇದನವನ್ನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್, ಸಂಜೀವ್ ಖನ್ನಾ, ಎಎಸ್ ಓಕಾ, ವಿಕ್ರಮ್ ನಾಥ್ ಮತ್ತು ಜೆ ಕೆ ಮಹೇಶ್ವರಿ ಅವರನ್ನೊಳಗೊಂಡ ಸಂವಿಧಾನ ಪೀಠ, ಅಂತಹ ಅಧಿಕಾರದ ಪ್ರಯೋಗವು "ಸಾರ್ವಜನಿಕ ನೀತಿಯ ತತ್ವಗಳನ್ನು ಉಲ್ಲಂಘಿಸುವುದಿಲ್ಲ" ಎಂದು ಹೇಳಿದೆ.

ಸುಪ್ರೀಂ ಕೋರ್ಟ್ ಹೊಸ ತೀರ್ಪಿನ ಪ್ರಕಾರ ಇನ್ನು ಮುಂದೆ ದಂಪತಿಗಳು ವಿಚ್ಛೇದನಕ್ಕೆ ಆರು ತಿಂಗಳು ಕಾಯಬೇಕಾದ ಅನಿವಾರ್ಯತ ಇಲ್ಲ. ಕೌಟುಂಬಿಕ ನ್ಯಾಯಾಲವನ್ನು ಒಪ್ಪಿಸದೇ, ದಂಪತಿಗಳು ಪರಸ್ಪರ ಒಪ್ಪಿಗೆಯ ಮೂಲಕ ಆರು ತಿಂಗಳು ಕಾಯದೆ ವಿಚ್ಛೇದನ ಪಡೆಯಬುದು ಎಂದು ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಅವರನ್ನೊಳಗೊಂಡ ಪೀಠ ಹೇಳಿದೆ.
ಇದಕ್ಕೂ ಮುನ್ನ ವಿವಾಹ ವಿಚ್ಛೇದನ ಪಡೆಯಬೇಕಾದರೆ, ಕೌಟುಂಬಿಕ ನ್ಯಾಯಾಲಯ ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನ ಪಡೆಯಲು ಆರು ತಿಂಗಳ ಕಾಲಾವಕಾಶ ನೀಡಿತ್ತಿಯ್ಯಿ. ಕೆಲವು ಸಂದರ್ಭಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಪ್ರಕರಣಗಳಲ್ಲಿ ಕೂಡ ಆರು ತಿಂಗಳ ಕಾಲ ಕಾಯುವುದು ಕಡ್ಡಾಯವಾಗಿತ್ತು. ಇಂದು ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದ ತ್ವರಿತವಾಗಿ ವಿಚ್ಛೇದನ ಪಡೆಯಬಹುದಾಗಿದೆ.
ಸಂವಿಧಾನದ 142ನೇ ವಿಧಿಯು ಬಾಕಿ ಇರುವ ವಿಚ್ಛೇದನ ಪ್ರಕರಣಗಳಲ್ಲಿ ಮದುವೆಯನ್ನು ರದ್ದುಗೊಳಿಸುವ ಪರಮಾಧಿಕಾರವನ್ನು ಸುಪ್ರೀಂಕೋರ್ಟ್‌ಗೆ ನೀಡುತ್ತದೆ. ಈ ಬಗ್ಗೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು 2022ರ ಸೆಪ್ಟೆಂರ್ 29 ರಂದು ಪೂರ್ಣಗೊಳಿಸಿದ್ದ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಮಹತ್ವದ ತೀರ್ಪನ್ನು ಪ್ರಕಟಿಸಿದೆ.
1955ರ ಹಿಂದೂ ವಿವಾಹ ಕಾಯಿದೆಯಡಿಯಲ್ಲಿ ದಾಂಪತ್ಯದ ಹಿಂಪಡೆಯಲಾಗದ ವಿಘಟನೆಯನ್ನು ಕ್ರೌರ್ಯವೆಂದು ಪರಿಗಣಿಸಬಹುದು ಮತ್ತು ವಿಚ್ಛೇದನಕ್ಕೆ ಆಧಾರವಾಗಿರಬಹುದು ಎಂದು ನ್ಯಾಯಾಲಯದ ದ್ವಿಸದಸ್ಯ ಪೀಠವು ಹೇಳಿದ ಕೆಲವೇ ದಿನಗಳಲ್ಲಿ ಈ ಮಹತ್ವದ ತೀರ್ಪು ಬಂದಿದೆ.












Click it and Unblock the Notifications