Divorce: WhatsApp, Instagram ಬಳಕೆ ಹೆಚ್ಚಳ ಸೇರಿ ಭಾರತದಲ್ಲಿ ವಿಚ್ಛೇದನಕ್ಕೆ 10 ಪ್ರಮುಖ ಕಾರಣಗಳು
Divorce: ಮೊದಲೆಲ್ಲ ಅಲ್ಲೊಂದು ಇಲ್ಲೊಂದು ಎನ್ನುವಂತೆ ನಡೆಯುತ್ತಿದ್ದ ಡಿವೋರ್ಸ್‌ಗಳು ಇದೀಗ ಸರ್ವೇ ಸಾಮಾನ್ಯ ಎನ್ನುವಂತೆ ಆಗಿದೆ. ದೇಶದಲ್ಲಿ ಡಿವೋರ್ಸ್ ಪ್ರಕರಣಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲ್ಲೇ ಇದೆ. ದೇಶದಲ್ಲಿ ಡಿವೋರ್ಸ್ ಪ್ರಕರಣ ಹೆಚ್ಚಾಗುವುದಕ್ಕೆ ಸೋಷಿಯಲ್ ಮೀಡಿಯಾ ಬಳಕೆಯೂ ಒಂದು ಪ್ರಮುಖ ಕಾರಣವಾಗುತ್ತಿದೆ ಎಂದರೆ ನಂಬುವಿರಾ. ಹೌದು ದೇಶದಲ್ಲಿ ಯುವ ಜನತೆ ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಿರುವುದು ಸಹ ಡಿವೋರ್ಸ್ ಪ್ರಕರಣ ಹೆಚ್ಚಾಗುವುದಕ್ಕೆ ಕಾರಣವಾಗಿದೆ. ಭಾರತದಲ್ಲಿ ಡಿವೋರ್ಸ್ ಹೆಚ್ಚಾಗುವುದಕ್ಕೆ 10 ಪ್ರಮುಖ ಕಾರಣಗಳ ವಿವರ ಈ ಲೇಖನದಲ್ಲಿದೆ.
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ. ಒಮ್ಮೆ ಜೀವನದಲ್ಲಿ ಮದುವೆಯಾದರೆ ಗಂಡಾದರೂ ಸರಿ ಹೆಣ್ಣಾದರೂ ಸರಿ - ಅನುಸರಿಸಿಕೊಂಡು ಹೋಗಬೇಕು. ಇವೆಲ್ಲವೂ ಭಾರತೀಯರು ಶತಮಾನಗಳಿಂದ ಹೇಳಿಕೊಂಡು ಬಂದ ಮಾತು. ಕಾಲ ಬದಲಾಗಿದೆ. ಮೊದಲೆಲ್ಲ ಡಿವೋರ್ಸ್ ಎಂದರೆ ಮಹಾ ಅಪರಾಧ ಎನ್ನುವಂತೆ ನೋಡಲಾಗುತ್ತಿತ್ತು. ಆದರೆ ಇದೀಗ ಡಿವೋರ್ಸ್ ತಪ್ಪಲ್ಲ, ಜೀವಮಾನ ಪೂರ್ತಿ ಯಾಕೆ ಅಡ್ಜೆಸ್ಟ್ ಮಾಡಕೊಳ್ಳಬೇಕು ಎನ್ನುವ ಮನೋಭಾವ ಹಲವರಲ್ಲಿ ಮೂಡಿದೆ. ಇದೂ ಸಹ ಭಾರತದಲ್ಲಿ ಡಿವೋರ್ಸ್ ಹೆಚ್ಚಾಗುವುದಕ್ಕೆ ಕಾರಣವಾಗಿದೆ. ದೇಶದಲ್ಲಿ ಸೋಷಿಯಲ್ ಮೀಡಿಯಾ ಬಳಕೆ ಸೇರಿದಂತೆ ಡಿವೋರ್ಸ್‌ಗೆ 10 ಪ್ರಮುಖ ಕಾರಣಗಳ ವಿವರ ಇಲ್ಲಿದೆ.

ಭಾರತದಲ್ಲಿ ವಿಚ್ಛೇದನ ಪ್ರಮಾಣ ಇತರೆ ದೇಶಗಳಿಗಿಂತ ಇನ್ನೂ ಕಡಿಮೆಯೇ ಇದೆಯಾದರೂ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲ್ಲೇ ಇದೆ. ದೇಶದಲ್ಲಿ ಸರಾಸರಿ ಸುಮಾರು 1% ಮದುವೆಗಳು ಮಾತ್ರ ವಿಚ್ಛೇದನಕ್ಕೆ ತಲುಪುತ್ತವೆ, ಆದರೆ ನಗರ ಪ್ರದೇಶಗಳಲ್ಲಿ ಈ ಪ್ರಮಾಣ ಹೆಚ್ಚಾಗಿದೆ. ಡಿವೋರ್ಸ್ ಹೆಚ್ಚಳಕ್ಕೆ ಸಾಮಾಜಿಕ, ತಂತ್ರಜ್ಞಾನ ಮತ್ತು ವೈಯಕ್ತಿಕ ಕಾರಣಗಳು ಕಾರಣಗಳು ಸಹ ಇವೆ. ಉತ್ತರಾಖಂಡದಲ್ಲಿ ನೂರಾರು ವಿಚ್ಛೇದನ ಪ್ರಕರಣಗಳು ನೇರವಾಗಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಆಗುತ್ತಿದೆ ಎನ್ನುವ ವಿಷಯ ಇದೀಗ ಬಹಿರಂಗವಾಗಿದೆ.
1. ಮೊಬೈಲ್ ಮತ್ತು ಸೋಷಿಯಲ್ ಮೀಡಿಯಾ ಪ್ರಭಾವ: ಭಾರತದಲ್ಲಿ ಡಿವೋರ್ಸ್ ಹೆಚ್ಚಳಕ್ಕೆ ಸೋಷಿಯಲ್ ಮೀಡಿಯಾ ಹಾಗೂ ಮಿತಿ ಮೀರಿದ ಮೊಬೈಲ್ ಬಳಕೆಯೂ ಕಾರಣವಾಗುತ್ತಿದೆ. ಉತ್ತರಾಖಂಡದಲ್ಲಿ 400+ ಪ್ರಕರಣಗಳು ಮೊಬೈಲ್/ಸೋಷಿಯಲ್ ಮೀಡಿಯಾ ಕಾರಣದಿಂದ ಡಿವೋರ್ಸ್ ಪಡೆದುಕೊಂಡಿರುವುದಾಗಿ ವರದಿಯಾಗಿವೆ. ಇದರಲ್ಲಿ ಮುಖ್ಯವಾಗಿ WhatsApp, Instagram ಬಳಕೆಯಿಂದಾಗಿ ಸಂಬಂಧದಲ್ಲಿ ಅನುಮಾನ, ಜಗಳ ಸೃಷ್ಟಿಯಾಗುತ್ತಿವೆ.
2. ಸಂವಹನ ಕೊರತೆ: ಬದಲಾದ ಜೀವನ ಶೈಲಿ, ಕೆಲಸದ ಒತ್ತಡ ಹಾಗೂ ಪತಿ ಮತ್ತು ಪತ್ನಿ ಇಬ್ಬರು ಹೆಚ್ಚು ಮಾತನಾಡಿಕೊಳ್ಳದೆ ಇರುವುದು ಸಹ ವಿಚ್ಛೇದನಕ್ಕೆ ಕಾರಣವಾಗುತ್ತಿದೆ. Hindustan Times ವರದಿಯ ಪ್ರಕಾರ ವಿಚ್ಛೇದನಕ್ಕೆ ಪತಿ - ಪತ್ನಿಯ ನಡುವೆ ಜಗಳವಲ್ಲ, ಮಾತುಕತೆ ಕೊರತೆಯೇ ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೆ ಪರಸ್ಪರ ಸಮಸ್ಯೆಗಳನ್ನು ಹಂಚಿಕೊಳ್ಳದಿರುವುದು ಸಹ ಇದಕ್ಕೆ ಕಾರಣವಾಗಿದೆ.
3. ಅವಿಶ್ವಾಸ / Extra-marital Affairs: ವಿಪರೀತವಾದ ಸೋಷಿಯಲ್ ಮೀಡಿಯಾ ಬಳಕೆಯು ದಾಂಪತ್ಯ ಜೀವನದಲ್ಲಿ ನಂಬಿಕೆ ಕುಸಿತ ಕಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಹೊಸ ಪರಿಚಯ ಕೆಲವರಲ್ಲಿ ವಿವಾಹೇತರ ಸಂಬಂಧಕ್ಕೂ ಕಾರಣವಾಗುತ್ತಿದೆ.
4. ಆರ್ಥಿಕ ಒತ್ತಡ (Financial Stress): ಪತಿ - ಪತ್ನಿಯರ ನಡುವೆ ಆರ್ಥಿಕ ವಿಚಾರವು ಸಹ ಡಿವೋರ್ಸ್‌ಗೆ ಪ್ರಮುಖ ಕಾರಣವಾಗಿದೆ. EMI, ಜೀವನ ಶೈಲಿಯ ಖರ್ಚು ಹೊಂದಾಣಿಕೆಯಾಗದೆ ಜಗಳ ಹೆಚ್ಚಾಗುತ್ತಿದೆ.
5. ಉದ್ಯೋಗ ಒತ್ತಡ: ದಂಪತಿಗಳ ನಡುವೆ ಉದ್ಯೋಗದ ಒತ್ತಡ ಹೆಚ್ಚಾಗುತ್ತಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಪತಿ - ಪತ್ನಿ / ದಂಪತಿಗಳು ಕೆಲಸಕ್ಕೆ ಹೋಗುವುದರಿಂದ ಮನೆ ಹಾಗೂ ಕೆಲಸದ ಜವಾಬ್ದಾರಿ ಎರಡನ್ನೂ ಏಕಕಾಲಕ್ಕೆ ಸರಿದೂಗಿಸಿಕೊಂಡು ಹೋಗುವುದು ಸವಾಲಾಗುತ್ತಿದೆ.
5. ಮಳೆಯರ ಸ್ವಾವಲಂಬನೆ - ಅತಿಯಾದ ನಿರೀಕ್ಷೆಗಳು: ಮಹಿಳೆಯರು ಈಗ ಆರ್ಥಿಕವಾಗಿ ಸ್ವತಂತ್ರ ಬಯಸುತ್ತಿದ್ದಾರೆ. ಅಸಂತೋಷಕರ ಮದುವೆಯನ್ನು ಮುಂದುವರಿಸುವ ಒತ್ತಡ ಕಡಿಮೆ ಆಗಿದೆ. ಅಲ್ಲದೆ ಪತಿ - ಪತ್ನಿ ಇಬ್ಬರಲ್ಲೂ ಅತಿಯಾದ ನಿರೀಕ್ಷೆಗಳು ಸಹ ವಿಚ್ಛೇದನಕ್ಕೆ ಕಾರಣವಾಗುತ್ತಿವೆ. ಸಿನಿಮಾಗಳು, ಸೋಷಿಯಲ್ ಮೀಡಿಯಾ ಪ್ರಭಾವ ಇದಕ್ಕೆ ಕಾರಣವಾಗುತ್ತಿದೆ.
6. ಕುಟುಂಬ ವ್ಯವಸ್ಥೆಯ ಬದಲಾವಣೆ: ಅವಿಭಕ್ತ ಕುಟುಂಬ → ವಿಭಕ್ತ ಕುಟುಂಬ ಹಿರಿಯರ ಮಾರ್ಗದರ್ಶನ ಕಡಿಮೆಯೂ ಇದಕ್ಕೆ ಮುಖ್ಯ ಕಾರಣವಾಗುತ್ತಿದೆ. ಮೊದಲೆಲ್ಲ ಮನೆಯಲ್ಲಿ ಹಿರಿಯರ ಮಾರ್ಗದರ್ಶನ ಹಾಗೂ ಸಲಹೆಗಳು ಸಿಗುತ್ತಿದ್ದವು. ಆದರೆ ಈಗ ಅದರ ಅವಕಾಶ ವಿರಳ ಎನ್ನುವಂತಾಗಿದೆ. ಇದೂ ಸಹ ಡಿವೋರ್ಸ್‌ಗೆ ಕಾರಣವಾಗಿದೆ.
7. ಮಾನಸಿಕ ಒತ್ತಡ - ಆರೋಗ್ಯ ಸಮಸ್ಯೆಗಳು: ಇನ್ನು ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಹೆಚ್ಚಾಗುತ್ತಿರುವ ಮಾನಸಿಕ ಒತ್ತಡ ಹಾಗೂ ಆರೋಗ್ಯ ಸಮಸ್ಯೆಗಳು ಸಹ ಪರೋಕ್ಷವಾಗಿ ವಿಚ್ಛೇದನಕ್ಕೆ ಕಾರಣವಾಗುತ್ತಿದೆ.
8. ತಡವಾದ ಮದುವೆಗಳು (Late Marriages): ದೇಶದಲ್ಲಿ ಈಗ ತಡವಾಗಿ ಮದುವೆ ಆಗುವವರ ಸಂಖ್ಯೆ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಈಗೆಲ್ಲ 30+ ವಯಸ್ಸಿನಲ್ಲಿ ಮದುವೆ ಆಗುವವರ ಸಂಖ್ಯೆ ಹೆಚ್ಚಾಗಿದೆ. Individual lifestyle / ವೈಯಕ್ತಿಕ ಜೀವನ ಶೈಲಿಯಲ್ಲಿನ ಬದಲಾವಣೆ ಸಹ ವಿಚ್ಛೇದನಕ್ಕೆ ಕಾರಣವಾಗುತ್ತಿವೆ.
9. ಸಹನೆ ಮತ್ತು ಹೊಂದಾಣಿಕೆ ಕಡಿಮೆ: ಬದಲಾದ ಘಟ್ಟದಲ್ಲಿ ಪುರುಷ ಹಾಗೂ ಮಹಿಳೆ ಇಬ್ಬರಲ್ಲೂ ಪರಸ್ಪರ ಸಹನೆ ಹಾಗೂ ಹೊಂದಾಣಿಕೆ ಕೊರತೆಯೂ ಸಹ ಡಿವೋರ್ಸ್‌ಗೆ ಕಾರಣವಾಗುತ್ತಿವೆ.
10. ರಾಜಿಗಿಂತ ಶಾಂತಿ ಮುಖ್ಯ: ಮೊದಲಿನಂತೆ ಯಾರು ಸಹ ಇದೀಗ ರಾಜಿ ಮಾಡಿಕೊಳ್ಳುವುದಕ್ಕೆ ಮುಂದಾಗುತ್ತಿಲ್ಲ ಅಥವಾ ಬಿಟ್ಟುಕೊಟ್ಟು ಮುಂದೆ ಹೋಗುತ್ತಿಲ್ಲ. ರಾಜಿ ಮಾಡಿಕೊಳ್ಳುವುದಕ್ಕಿಂತಲೂ ಶಾಂತಿ ಮುಖ್ಯ ಎನ್ನುವುದು ಈಗ ಸಾಮಾನ್ಯವಾಗಿದೆ. ಇದು ಮುಖ್ಯ ಕಾರಣವಲ್ಲದಿದ್ದರೂ ಡಿವೋರ್ಸ್‌ಗೆ ಇದೂ ಸಹ ಪ್ರಮುಖ ಕಾರಣವಾಗಿದೆ.
-
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್












Click it and Unblock the Notifications