Ditwah Cyclone: ದಿತ್ವಾ ಚಂಡಮಾರುತದಿಂದ ಭೀಕರ ಮಳೆ, ಈ ಭಾಗಗಳಲ್ಲಿ ರೆಡ್ ಅಲರ್ಟ್
Ditwah Cyclone: ದಿತ್ವಾ ಚಂಡಮಾರುತ ಅಪ್ಪಳಿಸಿರುವ ಹಿನ್ನೆಲೆ ಕರ್ನಾಟಕದ ಹಲವೆಡೆ ಭಾನುವಾರ ಬೆಳಿಗ್ಗೆಯಿಂದಲೇ ಮಳೆ ಆರ್ಭಟಿಸುತ್ತಿದೆ. ಈ ಚಂಡಮಾರುತದಿಂದಾಗಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ರಾಜಧಾನಿ ಬೆಂಗಳೂರು ನಗರ ಹಾಗೂ ಗಡಿ ಜಿಲ್ಲೆಗಳಲ್ಲಿ ಮುಂಜಾನೆಯಿಂದಲೇ ಮಳೆಯಾಗುತ್ತಿದೆ. ದಿತ್ವಾ ಚಂಡಮಾರುತದಿಂದ ಇಂದು ಭೂಕುಸಿತ ಬೀರಲಿದ್ದು, ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಸದ್ಯ ದಿತ್ವಾ ಚಂಡಮಾರುತವು ಬಂಗಾಳಕೊಲ್ಲಿಯ ನೈರುತ್ಯ ಮತ್ತು ಉತ್ತರ ತಮಿಳುನಾಡು-ಪುದುಚೇರಿ ಕರಾವಳಿಗಳಲ್ಲಿ ಗಂಟೆಗೆ 7 ಕಿ.ಮೀ ವೇಗದಲ್ಲಿ ಬಹುತೇಕ ಉತ್ತರದ ಕಡೆಗೆ ಚಲಿಸುತ್ತಿದೆ ಎಂದು ಹೇಳಿದೆ. ಶ್ರೀಲಂಕಾದಲ್ಲಿ ಚಂಡಮಾರುತ ಅಪ್ಪಳಿಸಿದ್ದು, 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. ಮುಂದಿನ 24 ಗಂಟೆಗಳಲ್ಲಿ ಇದು ಉತ್ತರ ತಮಿಳುನಾಡು-ಪುದುಚೇರಿ ಕರಾವಳಿಗಳಿಗೆ ಸಮಾನಾಂತರವಾಗಿ ಉತ್ತರಕ್ಕೆ ಚಲಿಸುವ ಸಾಧ್ಯತೆಯಿದೆ. ಚಂಡಮಾರುತವು ಉತ್ತರದ ಕಡೆಗೆ ಚಲಿಸುವಾಗ, ಇಂದು ಮಧ್ಯಾಹ್ನ ಮತ್ತು ಸಂಜೆ ವೇಳೆಗೆ ತಮಿಳುನಾಡು-ಪುದುಚೇರಿ ಕರಾವಳಿಯಿಂದ ಕನಿಷ್ಠ 70 ಕಿ.ಮೀ ಮತ್ತು 30 ಕಿ.ಮೀ ವ್ಯಾಪ್ತಿಯಲ್ಲಿ ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ಕೇಂದ್ರೀಕೃತವಾಗಿರುತ್ತದೆ ಎಂದು ಮಾಹಿತಿ ನೀಡಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ದಿತ್ವಾ ಚಂಡಮಾರುತ ಸಮೀಪಿಸುತ್ತಿರುವ ಪರಿಣಾಮವಾಗಿ, ಅರುಲ್ಮಿಗು ವೇದಾರಣ್ಯೇಶ್ವರ ಸ್ವಾಮಿ ದೇವಾಲಯದ ಗರ್ಭಗುಡಿಯ ಹೊರಗೆ ಮಳೆನೀರು ನಿಂತಿದೆ. ದಿತ್ವಾ ಚಂಡಮಾರುತದ ಕಾರಣದಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಗುಜರಾತ್‌ನ ವಡೋದರಾದಿಂದ ಚೆನ್ನೈಗೆ ನಿಯೋಜಿಸಲು 6 ಬಿಎನ್ ಎನ್‌ಡಿಆರ್‌ಎಫ್‌ನ 5 ತಂಡಗಳನ್ನು ಕಳಿಸಿಕೊಡಲಾಗಿದೆ.
ಮೀನುಗಾರರಿಗೆ ಎಚ್ಚರಿಕೆ
ಬಂಗಾಳಕೊಲ್ಲಿಯ ನೈರುತ್ಯ ಮತ್ತು ಅದಕ್ಕೆ ಹೊಂದಿಕೊಂಡಿರುವ ಉತ್ತರ ಶ್ರೀಲಂಕಾದ ಮೇಲೆ ಬೀಸುವ ದಿತ್ವಾ ಚಂಡಮಾರುತದಿಂದ ತಮಿಳುನಾಡಿನ ಕರಾವಳಿಯಲ್ಲಿ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ ಮತ್ತು ರಾಯಲಸೀಮಾದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಡಿಸೆಂಬರ್ 1ರವರೆಗೆ ಶ್ರೀಲಂಕಾ, ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಪುದುಚೇರಿ ಮತ್ತು ಶ್ರೀಲಂಕಾ ಕರಾವಳಿಗಳಲ್ಲಿ ಡಿಸೆಂಬರ್ 1 ರವರೆಗೆ ಮೀನುಗಾರಿಕೆಗೆ ಇಳಿಯದಂತೆ ಸೂಚಿಸಲಾಗಿದೆ.
ಚಂಡಮಾರುತದ ಪರಿಣಾಮ ತೀವ್ರಗೊಳ್ಳುತ್ತಿದ್ದಂತೆ ಚೆನ್ನೈ ನಗರದಲ್ಲಿ ಬಲವಾದ ಗಾಳಿ ಮತ್ತು ಸಮುದ್ರದ ಪ್ರಕ್ಷುಬ್ಧತೆ ಕಂಡುಬಂದಿದೆ. ಐಎಂಡಿ ಪ್ರಕಾರ, ಚಂಡಮಾರುತ ದಿತ್ವಾ ಮುಂದಿನ 24 ಗಂಟೆಗಳಲ್ಲಿ ಉತ್ತರ ತಮಿಳುನಾಡು-ಪುದುಚೇರಿ ಕರಾವಳಿಗಳಿಗೆ ಸಮಾನಾಂತರವಾಗಿ ಉತ್ತರದ ಕಡೆಗೆ ಚಲಿಸುವ ಸಾಧ್ಯತೆಯಿದೆ. ಮುಂದಿನ ಮೂರು ಗಂಟೆಗಳ ಕಾಲ ಚೆನ್ನೈ ಸೇರಿದಂತೆ ತಮಿಳುನಾಡು ಮತ್ತು ಪುದುಚೇರಿಯ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ವರದಿಗಳ ಪ್ರಕಾರ ದಿತ್ವಾ ಚಂಡಮಾರುತದಿಂದ 132 ಜನರು ಸಾವನ್ನಪ್ಪಿದ್ದಾರೆ, 176 ಜನರು ಕಾಣೆಯಾಗಿದ್ದರಿಂದ ಶ್ರೀಲಂಕಾ ತುರ್ತು ಪರಿಸ್ಥಿತಿ ಘೋಷಿಸಿದೆ. ಅಲ್ಲದೆ 15,000ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. 78,000 ಜನರು ಸ್ಥಳಾಂತರಗೊಂಡಿದ್ದಾರೆ. ಭಾರತವು ಎರಡು ವಿಮಾನಗಳ ಲೋಡ್ ಪರಿಹಾರ ಸಾಮಗ್ರಿಗಳು, ಕೊಲಂಬೊದಲ್ಲಿರುವ ಭಾರತೀಯ ಯುದ್ಧನೌಕೆ ತನ್ನ ಪಡಿತರವನ್ನು ದಾನ ಮಾಡಿದೆ.












Click it and Unblock the Notifications