ಸ್ವಾಮಿ ನಿತ್ಯಾನಂದನ ದಯೆಯಿಂದ ಕೆಲಸ ಕಳೆದುಕೊಂಡ ಸರ್ಕಾರಿ ಅಧಿಕಾರಿ!
ಸ್ವಾಮಿ ನಿತ್ಯಾನಂದ ಹೆಸರು ಕೇಳುತ್ತಿದ್ದಂತೆ ಹಲವರ ಕಿವಿ ಅಲರ್ಟ್ ಆಗಿಬಿಡುತ್ತದೆ. ಯಾಕೆ ಅಂದ್ರೆ ಸ್ವಾಮಿ ನಿತ್ಯಾನಂದ ಭಾರತದಲ್ಲಿ ಇದ್ದಾಗ ಮಾಡಿಕೊಂಡ ವಿವಾದಗಳು ಒಂದೆರಲ್ಲ. ಇದೇ ಕಾರಣಕ್ಕೆ ಭಾರಿ ತಿಕ್ಕಾಟ ಕೂಡ ನಡೆದು, ಕೊನೆಗೆ ಸ್ವಾಮಿ ನಿತ್ಯಾನಂದ ಭಾರತವನ್ನೇ ಬಿಟ್ಟು ಹೋಗುವ ಪರಿಸ್ಥಿತಿ ಬಂದಿತ್ತು. ಹೀಗಿದ್ದಾಗಲೇ ಸ್ವಾಮಿ ನಿತ್ಯಾನಂದನ ದಯೆಯಿಂದ ಸರ್ಕಾರಿ ಅಧಿಕಾರಿ ತಮ್ಮ ಕೆಲಸವನ್ನೇ ಕಳೆದುಕೊಂಡಿದ್ದಾರೆ.
ಸ್ವಾಮಿ ನಿತ್ಯಾನಂದ ಭಾರತ ಬಿಟ್ಟು ಹೋದ ನಂತರ, ತನ್ನದೇ ಸ್ವಂತ ದೇಶ ಕಟ್ಟಿಕೊಂಡು ಸುದ್ದಿಯಲ್ಲಿದ್ದರು. ಅದ್ರಲ್ಲೂ ಸ್ವಾಮಿ ನಿತ್ಯಾನಂದ ವಿಚಾರ, ಜಾಗತಿಕ ಮಟ್ಟದಲ್ಲೂ ಸದ್ದು ಮಾಡಿ ಸುದ್ದಿಯಾಗಿತ್ತು. ತನ್ನದೇ ದೇಶದಲ್ಲಿ, ಸನಾತನ ಧರ್ಮದ ಕಠಿಣ ನಿಯಮ ಜಾರಿಗೆ ತರಲು ಸ್ವಾಮಿ ನಿತ್ಯಾನಂದ ಮುಂದಾಗಿದ್ದು ಸುದ್ದಿಯಾಗಿತ್ತು. ಈಗ ನೋಡಿದ್ರೆ ನಿತ್ಯಾನಂದ ಬಗ್ಗೆ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ. ಹಾಗಾದರೆ ಸ್ವಾಮಿ ನಿತ್ಯಾನಂದ ಕುರಿತು ಈಗ ಹೊರಬಿದ್ದ ಬ್ರೇಕಿಂಗ್ ನ್ಯೂಸ್ ಏನು? ಮುಂದೆ ಓದಿ.

ಸ್ವಾಮಿ ನಿತ್ಯಾನಂದ ದಯೆಯಿಂದ ಕೆಲಸ ಉಡೀಸ್!
ಯೆಸ್.. ಅಸ್ತಿತ್ವದಲ್ಲಿ ಇಲ್ಲದ ದೇಶ 'ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ' ಜೊತೆಗೆ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದಕ್ಕಾಗಿ, ಪೆರುಗ್ವೆ ಹಿರಿಯ ಅಧಿಕಾರಿ ಒಬ್ಬರನ್ನು ವಜಾಗೊಳಿಸಲಾಗಿದೆ. ಈ ಮೂಲಕ ಸ್ವಾಮಿ ನಿತ್ಯಾನಂದ ದಯೆಯಿಂದ ಸರ್ಕಾರಿ ಅಧಿಕಾರಿ ಒಬ್ಬರ ಕೆಲಸವೇ ಈಗ ಕಿತ್ಕೊಂಡು ಹೋಗಿದೆ. 'ದಕ್ಷಿಣ ಅಮೆರಿಕದ ದ್ವೀಪರಾಷ್ಟ್ರ' ಎಂದು ಪರಿಚಯಿಸಿಕೊಂಡಿರುವ 'ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ' ಅಧಿಕಾರಿಗಳ ಜೊತೆ, ಒಪ್ಪಂದಕ್ಕೆ ಸಹಿ ಮಾಡಿದ್ದರಿಂದ ನನ್ನ ಕೆಲಸ ಹೋಗಿದೆ. ಹೀಗಂತ ಪೆರುಗ್ವೆ ಅಧಿಕಾರಿ ಅರ್ನಾಲ್ಡೊ ಚಾಮೊರ್ರೊ ಹೇಳಿದ್ದಾರೆ
ಭಾರತದಲ್ಲೂ ಸಿಕ್ಕಾಪಟ್ಟೆ ಕಿರಿಕ್!
ಅಷ್ಟಕ್ಕೂ ಸ್ವಾಮಿ ನಿತ್ಯಾನಂದ ವಿಚಾರವಾಗಿ ಭಾರತದಲ್ಲಿ ಈಗಾಗಲೇ ದೊಡ್ಡ ಕಿರಿಕ್ ನಡೆದಿದೆ. ಹೀಗಾಗಿಯೇ ಸ್ವಾಮಿ ನಿತ್ಯಾನಂದ ಕೂಡ ಭಾರತ ಬಿಟ್ಟು ಹೋಗಿದ್ದೂ ಆಗಿದೆ. ಆದರೆ ತನ್ನ ಹೊಸ ದೇಶದ ಮೂಲಕ ಸ್ವಾಮಿ ನಿತ್ಯಾನಂದ ಸದ್ದು ಮಾಡುತ್ತಿದ್ದರು. ಈಗ ನೋಡಿದ್ರೆ ಈ ವಿಚಾರದಲ್ಲಿ ಸರ್ಕಾರಿ ಅಧಿಕಾರಿಯೇ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ. ಸ್ವಾಮಿ ನಿತ್ಯಾನಂದ ವಿಚಾರವಾಗಿ ಅರ್ನಾಲ್ಡೊ ಚಾಮೊರ್ರೊ ಈಗ ಕೆಲಸ ಕಳೆದುಕೊಂಡಿರುವ ವಿಚಾರ ಸಂಚಲನ ಸೃಷ್ಟಿಮಾಡಿದೆ.

ಅನ್ಯಾಯವಾಗಿ ಕೆಲಸ ಹೋಯ್ತಂತೆ!
ಒಟ್ನಲ್ಲಿ ಸ್ವಾಮಿ ನಿತ್ಯಾನಂದ ವಿಚಾರ ಭಾರತದಲ್ಲಿ ಮಾತ್ರವಲ್ಲ ದಕ್ಷಿಣ ಅಮೆರಿಕದಲ್ಲಿಯೂ ಭಾರಿ ಸದ್ದು ಮಾಡುತ್ತಿದೆ. ಅದ್ರಲ್ಲೂ ಒಬ್ಬ ಸರ್ಕಾರಿ ಅಧಿಕಾರಿಯ ಕೆಲಸಕ್ಕೂ ನಿತ್ಯಾನಂದ ವಿಚಾರ ಕುತ್ತು ತಂದಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಈ ಆರೋಪದ ಕುರಿತು, ಸ್ವಾಮಿ ನಿತ್ಯಾನಂದ ಅಥವಾ ಅವರೇ ಕಟ್ಟಿಕೊಂಡಿರುವ ದೇಶದ ಅಧಿಕಾರಿಗಳು ಹೇಗೆ ತಮ್ಮ ರಿಯಾಕ್ಷನ್ ಕೊಡಲಿದ್ದಾರೆ? ಅನ್ನೋದನ್ನ ಕಾದು ನೋಡಬೇಕಿದೆ.
ಹೀಗೆ ಭಾರತದಲ್ಲಿ ಇರುವ ಸಮಯದಲ್ಲೂ, ಸ್ವಾಮಿ ನಿತ್ಯಾನಂದ ವಿಚಾರ ಜಗತ್ತಿನಾದ್ಯಂತ ನಳನಳಿಸಿತ್ತು. ಈಗ ಭಾರತ ಬಿಟ್ಟು ಹೋಗಿ ಬೇರೆ ದೇಶ ಕಟ್ಟಿಕೊಂಡರೂ, ಸ್ವಾಮಿ ನಿತ್ಯಾನಂದ ವಿಚಾರ ಸದ್ದು ಮಾಡುವುದು ಕಡಿಮೆ ಆಗಿಲ್ಲ. ಅದರಲ್ಲೂ ಈ ಹಿಂದೆ ಹೊಸ ದೇಶವನ್ನು, ಸ್ವಾಮಿ ನಿತ್ಯಾನಂದ ಕಟ್ಟಿಕೊಂಡ ಸಮಯದಲ್ಲಿ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಈಗ ಆ ದೇಶದ ಅಸ್ತಿತ್ವದ ಕುರಿತು ತಿಕ್ಕಾಟ ಜೋರಾಗಿದೆ. ಅಲ್ಲದೆ ಸಾವಿರಾರು ಜನ ನಿತ್ಯಾನಂದ ಕಟ್ಟಿರುವ ಹೊಸ ದೇಶ ನಂಬಿಕೊಂಡು, ತಮ್ಮ ಕುಟುಂಬಗಳನ್ನೇ ಬಿಟ್ಟು ಹೋಗಿದ್ದಾರೆಂಬ ಆರೋಪ ಕೂಡ ಇದೆ. ಇಷ್ಟೆಲ್ಲದರ ಮಧ್ಯೆ ಮತ್ತೊಮ್ಮೆ ಸ್ವಾಮಿ ನಿತ್ಯಾನಂದ ವಿಚಾರ ಈಗ ಮುನ್ನೆಲೆಗೆ ಬಂದಿರುವುದು ವಿಶೇಷ.












Click it and Unblock the Notifications