India & America: ಭಾರತದ ಜೊತೆ ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿ!
ಭಾರತ & ಅಮೆರಿಕ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಮತ್ತಷ್ಟು ಗಟ್ಟಿಯಾಗುತ್ತಿದೆ. ಅದರಲ್ಲೂ ಆಧುನಿಕ ಕಾಲಘಟ್ಟದಲ್ಲಿ ಅಮೆರಿಕ ನಾಯಕರಿಗೆ ಭಾರತ ಅತಿ ಮುಖ್ಯ. ಇದೇ ಸಂದರ್ಭದಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾಗಿದೆ. ಹೀಗಾಗಿ ಭಾರತದ ಜೊತೆ ಸ್ನೇಹ ವೃದ್ಧಿ ಅನಿವಾರ್ಯ. ಈ ಹೊತ್ತಲ್ಲೇ ಅಮೆರಿಕ ಅಧ್ಯಕ್ಷ ಬೈಡನ್ ಭಾರತಕ್ಕೆ ಬರುತ್ತಿದ್ದಾರೆ. ಜಿ20 ಶೃಂಗಸಭೆಗೆ ಬೈಡನ್ ಬರುತ್ತಿದ್ದರೂ ದ್ವಿಪಕ್ಷೀಯ ಸಭೆ ಈಗ ಜಗತ್ತಿನ ಗಮನ ಸೆಳೆದಿದೆ.
ಹೌದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೆಪ್ಟೆಂಬರ್ 7 ರಂದು ಭಾರತಕ್ಕೆ ಬರಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರ ಜೊತೆ ಬೈಡನ್ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿ ಅನೇಕ ಒಪ್ಪಂದಕ್ಕೆ ಅಂತಿಮ ರೂಪ ನೀಡುವ ಸಾಧ್ಯತೆ ಇದೆ. ಹಾಗೇ ಮುಂದಿನ ವಾರವೇ ಭಾರತದಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಇದರ ಜೊತೆಗೆ ಸೆಪ್ಟೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಬೈಡನ್. ಈ ಬಗ್ಗೆ ಅಮೆರಿಕದ ಶ್ವೇತಭವನ ಅಧಿಕೃತ ಮಾಹಿತಿ ನೀಡಿದೆ. ಕೆಲವು ತಿಂಗಳ ಹಿಂದಷ್ಟೇ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಇದೀಗ ಭಾರತಕ್ಕೆ ಬೈಡನ್ ಬರುತ್ತಿದ್ದಾರೆ.

ಇಡೀ ಜಗತ್ತು ಈ ಬಾರಿಯ ಜಿ20 ಶೃಂಗಸಭೆಗೆ ಕಾಯುತ್ತಿದೆ. ಏಕೆಂದರೆ ಈ ಬಾರಿಯ ಜಿ20 ಶೃಂಗಸಭೆ ನೇತೃತ್ವವನ್ನು ಭಾರತ ವಹಿಸಿದೆ. ಜಿ20 ಶೃಂಗಸಭೆ ಸೆಪ್ಟೆಂಬರ್ 9 ಹಾಗೂ 10 ರಂದು ನವದೆಹಲಿಯಲ್ಲಿ ನಡೆಯಲಿದೆ. ಹೀಗೆ ಭಾರತ ಜಿ20 ನಾಯಕತ್ವ ವಹಿಸಿರುವುದಕ್ಕಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಪ್ರಧಾನಿ ಮೋದಿ ಅವರನ್ನು ಅಭಿನಂದಿಸಲಿದ್ದಾರೆ ಎಂದು ಶ್ವೇತಭವನ ಮಾಹಿತಿ ನೀಡಿದೆ. ಅಲ್ಲದೆ ಜಿ20 ಶೃಂಗಸಭೆಗೂ ಎರಡು ದಿನ ಮೊದಲು ಅಂದರೆ ಸೆಪ್ಟೆಂಬರ್ 7 ರಂದು ಬೈಡನ್ ನವದೆಹಲಿಗೆ ಬರಲಿದ್ದಾರೆ. 8 ರಂದು ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಉಕ್ರೇನ್ ಯುದ್ಧದ ಬಗ್ಗೆ ಪ್ರಸ್ತಾಪ?
ಇನ್ನು ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಶುದ್ಧ ಇಂಧನ ಪರಿವರ್ತನೆ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಜಾಗತಿಕ ಸಮಸ್ಯೆ ಬಗ್ಗೆ ಪಸ್ತಾಪಿಸಲಿದ್ದಾರೆ ಎನ್ನಲಾಗಿದೆ. ಇದರ ಜತೆ ರಷ್ಯಾ & ಉಕ್ರೇನ್ ವಿರುದ್ಧ ನಡೆಸುತ್ತಿರುವ ಯುದ್ಧದ ಪರಿಣಾಮ, ಯುದ್ಧದಿಂದ ಎದುರಾದ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಬೈಡನ್ ಜಿ20 ಶೃಂಗಸಭೆಯಲ್ಲಿ ಸಮಾಲೋಚಿಸುತ್ತಾರೆ ಎನ್ನಲಾಗಿದೆ. ಈ ಮೂಲಕ ರಷ್ಯಾ ವಿರುದ್ಧ ಮತ್ತೊಮ್ಮೆ ಅಮೆರಿಕ ಜಗತ್ತಿನ ಗಮನ ಸೆಳೆಯಲು ಪ್ರಯತ್ನಿಸುವ ಸಾಧ್ಯತೆ ಇದೆ.
ಶೃಂಗಸಭೆಗೆ ರಷ್ಯಾ ಅಧ್ಯಕ್ಷ ಪುಟಿನ್ ಬರಲ್ಲ
ಅಂದಹಾಗೆ ಸೆಪ್ಟೆಂಬರ್ 9 & 10ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ, ತಾವು ಭಾಗವಹಿಸಲು ಸಾಧ್ಯವಾಗ್ತಿಲ್ಲ ಎಂದು ಈಗಾಗಲೇ ರಷ್ಯಾದ ಅಧ್ಯಕ್ಷ ಪುಟಿನ್ ಹೇಳಿದ್ದಾರೆ. ಹೀಗಾಗಿಯೇ ರಷ್ಯಾ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಬರುತ್ತಿದ್ದಾರೆ. ಪುಟಿನ್ ಈ ವಿಚಾರವನ್ನು ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ. ಪುಟಿನ್ ವಿರುದ್ಧ ಸದ್ಯ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನಿಂದ ವಾರಂಟ್ ಇರುವ ಕಾರಣ ಬಂಧನದ ಭೀತಿ ಇದ್ದು. ಹೀಗಾಗಿಯೇ ಪುಟಿನ್ ರಷ್ಯಾ ಬಿಟ್ಟು ಹೊರಗೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಜಿ-20 ರಾಷ್ಟ್ರಗಳು ಸಖತ್ ಸ್ಟ್ರಾಂಗ್
ಅಂದಹಾಗೆ ಜಿ-20 ರಾಷ್ಟ್ರಗಳ ಪಟ್ಟಿಯಲ್ಲಿ ಬಹುತೇಕ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೇ ಆಗಿವೆ. ಭಾರತ, ರಷ್ಯಾ, ಚೀನಾ, ಬ್ರೆಜಿಲ್ & ದಕ್ಷಿಣ ಆಫ್ರಿಕಾ ಇರುವ ಒಂದು ಶಕ್ತಿಶಾಲಿ ಗುಂಪು ಜಿ-20. ಈ ಕಾರಣಕ್ಕೆ ಜಿ-20 ಶೃಂಗಸಭೆ ಬಗ್ಗೆ ಜಗತ್ತು ಕುತೂಹಲ ಹೊಂದಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಜಿ-20 ಶೃಂಗಸಭೆ, ಭಾರತದ ಶಕ್ತಿಯನ್ನು ಮತ್ತೆ ಜಗತ್ತಿಗೆ ತೋರಿಸಲಿದೆ. ಹೀಗಾಗಿಯೇ ಭಾರತ ಕೂಡ ಜಿ-20 ಸಭೆಗಾಗಿ ಭಾರಿ ಸಿದ್ಧತೆ ನಡೆಸಿದೆ.












Click it and Unblock the Notifications