Lok Sabha Poll: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ಗೆಲುವು ಗ್ಯಾರಂಟಿ!

2024ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಎನ್‌ಡಿಎ ಹಾಗೂ ಇಂಡಿಯಾ ಒಕ್ಕೂಟಕ್ಕೆ ಪ್ರಮುಖ ಗುರಿ. ಅದರಲ್ಲೂ ಪ್ರಧಾನಿ ಮೋದಿ ನೇತೃತ್ವದಲ್ಲಿ ಹ್ಯಾಟ್ರಿಕ್ ಜಯ ಸಾಧಿಸುವ ಹುಮ್ಮಸ್ಸಿನಲ್ಲಿ ಬಿಜೆಪಿ ನಾಯಕರು ಇದ್ದಾರೆ. ಮತ್ತೊಂದ್ಕಡೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೋಲಿನ ರುಚಿ ತೋರಿಸುತ್ತೇವೆ ಅಂತಾ ಇಂಡಿಯಾ ಒಕ್ಕೂಟದ ನಾಯಕರು ತೊಡೆ ತಟ್ಟಿದ್ದಾರೆ. ಈ ಹೊತ್ತಲ್ಲಿ ಚುನಾವಣಾ ಸಮೀಕ್ಷೆಯ ವರದಿ ಸಂಚಲನ ಸೃಷ್ಟಿಸಿದೆ.

ಹೌದು, ಇಡೀ ಜಗತ್ತೇ ಇದೀಗ ಕಾಯುತ್ತಿರುವ ಭಾರತದ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮುಂದಿನ ವರ್ಷವೇ ಚುನಾವಣೆ ನಡೆಯಲಿದೆ. ಆದ್ರೆ ಈ ಹೊತ್ತಲ್ಲಿ ಸಮೀಕ್ಷೆ ಹೊರಬಿದ್ದಿದೆ. ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತೆ? ಯಾರು ಬಹುಮತವನ್ನ ಪಡೆಯಲಿದ್ದಾರೆ? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಾಗಾದರೆ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಹ್ಯಾಟ್ರಿಕ್ ಜಯ ಸಾಧಿಸುತ್ತಾ? ಇಲ್ಲ ಸೋಲುತ್ತಾ? ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ಎನ್‌ಡಿಎಗೆ ಫೈಟ್ ಕೊಡುತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ.

2024-lok-sabha-election

ಹ್ಯಾಟ್ರಿಕ್ ಜಯ ಸಾಧಿಸುತ್ತಂತೆ ಬಿಜೆಪಿ!

ಹೌದು, ಈಗ 'ಟೈಮ್ಸ್ ನೌ' ಬಿಡುಗಡೆ ಮಾಡಿರುವ ಸಮೀಕ್ಷೆ ವರದಿಯು ಸಂಚಲನವನ್ನೇ ಸೃಷ್ಟಿ ಮಾಡಿದೆ. 2024ರ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎಗೆ ಭರ್ಜರಿ ಗೆಲುವು ಪಕ್ಕಾ ಅಂತಿದೆ ಈ ಸಮೀಕ್ಷೆ. ಇನ್ನು 543 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 297ರಿಂದ 317 ಸ್ಥಾನ ಪಡೆದು ಸರ್ಕಾರ ರಚಿಸಲಿದೆ ಅಂತಿದೆ ಈ ಸಮೀಕ್ಷೆ. ಹಾಗಾದರೆ ವಿರೋಧ ಪಕ್ಷಗಳು ಎಷ್ಟು ಸ್ಥಾನ ಪಡೆಯಬಹುದು? ಮುಂದೆ ಓದಿ.

'ಇಂಡಿಯಾ' ಒಕ್ಕೂಟ ತಿರುಗೇಟು ಕೊಡುತ್ತಾ?

ಅಂದಹಾಗೆ ಬಿಜೆಪಿ ವಿರುದ್ಧ ಹಾಗೂ ಎನ್‌ಡಿಎ ವಿರುದ್ಧ ರಚನೆಯಾಗಿರುವ 'ಇಂಡಿಯಾ' ಒಕ್ಕೂಟ ಎಷ್ಟು ಸ್ಥಾನ ಗಳಿಸಬಹುದು? ಎಂಬ ಮಾಹಿತಿಯನ್ನೂ ಈ ಸಮೀಕ್ಷೆ ನೀಡಿದೆ. ಸಮೀಕ್ಷೆಯ ವರದಿಯಂತೆ, 543 ಸ್ಥಾನಗಳಲ್ಲಿ ಇಂಡಿಯಾ ಒಕ್ಕೂಟ 165ರಿಂದ 185 ಸ್ಥಾನ ಪಡೆಯಬಹುದು ಎನ್ನಲಾಗಿದೆ. ಎನ್‌ಡಿಎ ಒಕ್ಕೂಟವು 297-317 ಸ್ಥಾನ ಪಡೆಯಬಹುದು ಎನ್ನಲಾಗಿದ್ದು ಇತ್ತ ಇಂಡಿಯಾ ಒಕ್ಕೂಟ 165ರಿಂದ 185 ಸ್ಥಾನ ಪಡೆಯಬಹುದು ಅಂತಾ ಹೇಳಲಾಗಿದೆ. ಹಾಗೇ ಜಗನ್ ಅವರ YSRCP ಒಟ್ಟು 24ರಿಂದ 25 ಸ್ಥಾನ ಪಡೆಯಬಹುದು. ಇನ್ನು ಬಿಆರ್‌ಎಸ್ 9ರಿಂದ 11 ಸ್ಥಾನ, ಬಿಜೆಡಿ 13ರಿಂದ 15 ಸ್ಥಾನ, ಇತರರು 11ರಿಂದ 14 ಸ್ಥಾನ ಪಡೆಯಬಹುದು ಎಂದಿದೆ ಈ ಸಮೀಕ್ಷೆ.

ದೆಹಲಿಯಲ್ಲಿ ಕೇಜ್ರಿವಾಲ್ ಕಮಾಲ್?

ಇನ್ನು ಮತ್ತೊಂದು ಕಡೆ ಆಮ್ ಆದ್ಮಿ ಪಾರ್ಟಿ ಈ ಬಾರಿ ರಾಷ್ಟ್ರ ರಾಜಧಾನಿ ದೆಹಲಿಯ ಲೋಕಸಭಾ ಚುನಾವಣೆಯಲ್ಲಿ ಕಮಾಲ್ ಮಾಡುವ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಆ ಭಾಗದ ವಿಧಾನಸಭೆಯ ಅಧಿಕಾರ ಆಮ್ ಆದ್ಮಿ ಪಕ್ಷದ ವಶವಾಗಿದೆ. ಇದೇ ವೇಳೆ ಎಎಪಿ ಲೋಕಸಭೆ ಚುನಾವಣೆಯಲ್ಲೂ ಕಮಾಲ್ ಮಾಡುವ ನಿರೀಕ್ಷೆ ಇದೆ. ಅದರಂತೆ 3-5 ಸ್ಥಾನ ಎಎಪಿ ಗೆಲ್ಲಬಹುದು ಎಂದು ಸಮೀಕ್ಷೆ ಮಾಹಿತಿ ನೀಡಿದೆ. ಈ ಮೂಲಕ ರಾಷ್ಟ್ರೀಯ ಪಕ್ಷ ಎಂಬ ಸ್ಥಾನಮಾನ ಗಳಿಸಿರುವ ಆಮ್ ಆದ್ಮಿ ಪಕ್ಷ ಮೆಲ್ಲಗೆ ತನ್ನ ವ್ಯಾಪ್ತಿ ಹಿಗ್ಗಿಸುತ್ತಿದೆ.

ಒಟ್ನಲ್ಲಿ ಈ ಮೂಲಕ ಸಮೀಕ್ಷೆಗಳು ಎನ್‌ಡಿಎಗೆ ಗೆಲುವು ಅಂತಿವೆ. ಆದರೆ ವಿರೋಧ ಪಕ್ಷ ನಾಯಕರು ಬೇರೆಯದ್ದೇ ರಣತಂತ್ರ ರೂಪಿಸಲು ಸಜ್ಜಾಗುತ್ತಿದ್ದಾರೆ. ಹಾಗೆ ಎನ್‌ಡಿಎ ಕೂಡ ಹಲವು ರೀತಿಯ ತಂತ್ರಗಳನ್ನ ವಿಪಕ್ಷಗಳ ವಿರುದ್ಧ ಪ್ರಯೋಗ ಮಾಡುತ್ತಿದೆ. ಹೀಗಾಗಿ ಎಲ್ಲ ಪ್ರಶ್ನೆಗಳಿಗೆ & ಕುತೂಹಲಕ್ಕೂ 2024ರ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸೂಕ್ತ ಉತ್ತರ ಸಿಗಲಿದೆ. ಹೀಗಾಗಿ 2024ರ ಲೋಕಸಭೆ ರಿಸಲ್ಟ್ ತನಕ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+