ನಮ್ಮ ಬೆಂಬಲವೇನಿದ್ದರೂ ಕಾಂಗ್ರೆಸಿಗೆ: ಹಾರ್ದಿಕ್ ಪಟೇಲ್ ಸ್ಪಷ್ಟನೆ

Subscribe to Oneindia Kannada

ಅಹಮದಾಬಾದ್, ನವೆಂಬರ್ 22: ಇಂದು ಗುಜರಾತ್ ನಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ (ಪಾಸ್) ಸಂಚಾಲಕ ಹಾರ್ದಿಕ್ ಪಟೇಲ್ ಹಲವು ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದರು.

"ನಾವು ನೇರವಾಗಿ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಬೆಂಬಲ ನೀಡುತ್ತಿಲ್ಲ. ಆದರೆ ನಾವು ಬಿಜೆಪಿ ವಿರುದ್ಧ ಹೋರಾಡಲಿದ್ದೇವೆ. ಹೀಗಾಗಿ ನೇರವಾಗಿಯೋ ಪರೋಕ್ಷವಾಗಿಯೋ ಕಾಂಗ್ರೆಸ್ ನ್ನು ನಾವು ಬೆಂಬಲಿಸಲಿದ್ದೇವೆ," ಎಂದು ಹಾರ್ದಿಕ್ ಖಡಕ್ ಮಾತುಗಳನ್ನಾಡಿದ್ದಾರೆ.

ಕಾಂಗ್ರೆಸ್ ನಮ್ಮ ಬೇಡಿಕೆಯನ್ನು ಮನ್ನಿಸಿದೆ. ಪಟೇಲರಿಗೆ ಮೀಸಲಾತಿ ನೀಡಲು ಕಾಂಗ್ರೆಸ್ ಒಪ್ಪಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಾಟೀದಾರರಿಗೆ ಸೆಕ್ಷನ್ 31 ಮತ್ತು ನಿಬಂಧನೆಗಳ ಸೆಕ್ಷನ್ 46ರ ಅಡಿಯಲ್ಲಿ ಮೀಸಲಾತಿ ನೀಡಲು ಕಾಂಗ್ರೆಸ್ ಒಪ್ಪಿಕೊಂಡಿದೆ. ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾನೂನು ಜಾರಿಗೆ ತರಲಿದೆ ಎಂದು ಹಾರ್ದಿಕ್ ಪಟೇಲ್ ವಿವರ ನೀಡಿದ್ದಾರೆ.

ನಾವು ಯಾವುದೇ ಟಿಕೆಟ್ ಕೇಳಿರಲಿಲ್ಲ. ಜತೆಗೆ 'ಪಾಸ್' ನಲ್ಲಿ ಆಂತರಿಕ ಗೊಂದಲಗಳೂ ಇಲ್ಲ ಎಂದು ಹಾರ್ದಿಕ್ ಖಂಡಾತುಂಡವಾಗಿ ಹೇಳಿದ್ದಾರೆ.

ನಾವು ಯಾರಿಗೂ ಕಾಂಗ್ರೆಸ್ ಗೆ ಮತ ಹಾಕುವಂತೆ ಮನದಿ ಮಾಡಿಕೊಂಡಿಲ್ಲ. ಆದರೆ ಅವರು ನಮ್ಮ ಹಕ್ಕುಗಳ ಬಗ್ಗೆ ಮಾತನಾಡುತ್ತಿರುವುದರಿಂದ ಯಾರಿಗೆ ಮತ ಚಲಾಯಿಸಬೇಕು ಎಂಬ ನಿರ್ಧಾರವನ್ನು ಜನರಿಗೆ ಬಿಟ್ಟಿದ್ದೇವೆ ಎಂದಿದ್ದಾರೆ.

 ಮೀಸಲಾತಿ ಕಾಂಗ್ರೆಸ್ ಒಪ್ಪಿಗೆ

ಮೀಸಲಾತಿ ಕಾಂಗ್ರೆಸ್ ಒಪ್ಪಿಗೆ

ಪಾಟೀದಾರರಿಗೆ ಸೆಕ್ಷನ್ 31 ಮತ್ತು ನಿಬಂಧನೆಗಳ ಸೆಕ್ಷನ್ 46ರ ಅಡಿಯಲ್ಲಿ ಮೀಸಲಾತಿ ನೀಡಲು ಕಾಂಗ್ರೆಸ್ ಒಪ್ಪಿಕೊಂಡಿದೆ. ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾನೂನು ಜಾರಿಗೆ ತರಲಿದೆ ಎಂದು ಹಾರ್ದಿಕ್ ಪಟೇಲ್ ವಿವರ ನೀಡಿದ್ದಾರೆ.

ಯಾವುದೇ ಟಿಕೆಟ್ ಕೇಳಿಲ್ಲ

ನಾವು ಯಾವುದೇ ಟಿಕೆಟ್ ಕೇಳಿರಲಿಲ್ಲ. ಜತೆಗೆ 'ಪಾಸ್' ನಲ್ಲಿ ಆಂತರಿಕ ಗೊಂದಲಗಳೂ ಇಲ್ಲ ಎಂದು ಹಾರ್ದಿಕ್ ಖಂಡಾತುಂಡವಾಗಿ ಹೇಳಿದ್ದಾರೆ.

ನಾವು ಯಾರಿಗೂ ಕಾಂಗ್ರೆಸ್ ಗೆ ಮತ ಹಾಕುವಂತೆ ಮನವಿ ಮಾಡಿಕೊಂಡಿಲ್ಲ. ಆದರೆ ಅವರು ನಮ್ಮ ಹಕ್ಕುಗಳ ಬಗ್ಗೆ ಮಾತನಾಡುತ್ತಿರುವುದರಿಂದ ಯಾರಿಗೆ ಮತ ಚಲಾಯಿಸಬೇಕು ಎಂಬ ನಿರ್ಧಾರವನ್ನು ಜನರಿಗೆ ಬಿಟ್ಟಿದ್ದೇವೆ ಎಂದಿದ್ದಾರೆ.

 ಬಿಜೆಪಿ ವಿರುದ್ಧ ವಾಗ್ದಾಳಿ

ಬಿಜೆಪಿ ವಿರುದ್ಧ ವಾಗ್ದಾಳಿ

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಮ್ಮ ಪದಾಧಿಕಾರಿಗಳನ್ನು ಕುದುರೆ ವ್ಯಾಪಾರ ಮಾಡುವ ಹಲವು ಯತ್ನಗಳನ್ನು ಉತ್ತರ ಗುಜರಾತ್ ನಲ್ಲಿ ಮಾಡಲಾಗಿದೆ. 50 ಲಕ್ಷ ರೂಪಾಯಿಯ ಆಫರ್ ಗಳನ್ನು ಮಾಡಲಾಗಿದೆ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ತನ್ನ ಎಲ್ಲಾ ತಂತ್ರಗಳನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

 ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ

ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ

ತಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಹಾರ್ದಿಕ್ ಪಟೇಲ್, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮೀಸಲಾತಿ ಸೂತ್ರವನ್ನು ಸ್ಪಷ್ಟವಾಗಿ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We are not openly extending support to Congress, but we will fight BJP. So directly or indirectly, there will be support to Congress: Hardik Patel

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ