ವಿವಿಧ ದೇಶಗಳಲ್ಲಿ ಸೈನಿಕರ ಊಟ, ತಿಂಡಿ ಡೀಟೇಲ್ಸ್

Posted By:
Subscribe to Oneindia Kannada

ನವದೆಹಲಿ, ಜನವರಿ 11: ಜಮ್ಮು ಕಾಶ್ಮೀರದಲ್ಲಿ ಗಡಿ ಕಾಯುತ್ತಿರುವ ಭಾರತೀಯ ಯೋಧರಿಗೆ ಬಿಎಸ್ಎಫ್ ಕಳಪೆ ಆಹಾರ ನೀಡುತ್ತಿರುವುದನ್ನು ಬಿಎಸ್ಎಫ್ ಯೋಧ ತೇಜ್ ಬಹಾದೂರ್ ಯಾದವ್ ಜಗಜ್ಜಾಹೀರು ಮಾಡಿದ ನಂತರ, ದೇಶಾದ್ಯಂತ ಇದು ಚರ್ಚೆಗೆ ಗ್ರಾಸವಾಗಿದೆ.

ಗಡಿಕಾಯುವ ಯೋಧರಿಗೆ ಬೆಳಗಿನ ಉಪಾಹಾರಕ್ಕೆ ಕೇವಲ ಒಂದು ರೊಟ್ಟಿ ನೀಡಲಾಗುತ್ತಿದೆ ಎಂಬುದು ಯಾದವ್ ಆರೋಪ. ಪಲ್ಯ ಕೂಡ ನೀಡುವುದಿಲ್ಲವಂತೆ. ಆ ಒಂದು ರೊಟ್ಟಿ ತಿಂದು ಚಹಾ ಕುಡಿದು ಗಂಟೆಗಟ್ಟಲೇ ನಿಂತು ಗಡಿ ಕಾಯಬೇಕು ಎನ್ನುತ್ತಾರೆ ಅವರು.[ಸತ್ಯ ಹೇಳಿದ್ದ ಯೋಧ ಪ್ಲಂಬರ್ ಆಗಿ ನಿಯೋಜನೆ!]

ಇನ್ನು ಮಧ್ಯಾಹ್ನದ ಊಟಕ್ಕೆ ರೊಟ್ಟಿ ಹಾಗೂ ದಾಲ್ ನೀಡುತ್ತಾರೆ. ಆದರೆ, ದಾಲ್ ಹೆಸರಿಗಷ್ಟೇ ಅದರಲ್ಲಿ ಬೇಳೆ ಅಂಶವೇ ಇರುವುದಿಲ್ಲ.ನೀರಿಗೆ ಹಳದಿ ಸುರಿದು ಚೆನ್ನಾಗಿ ಕುದಿಸಿ ತಂದು ಕೊಟ್ಟಂತೆ ಇರುತ್ತದೆ ಎಂದಿದ್ದಾರೆ ಯಾದವ್. ಇನ್ನು ರಾತ್ರಿ ಊಟ ಹೊಟ್ಟೆ ತುಂಬ ಸಿಗುವುದೇ ಇಲ್ಲವಂತೆ. ಅದೆಷ್ಟೋ ಬಾರಿ ಕಳಪೆ ಆಹಾರ ಇರುತ್ತದೆ. ಕೆಲವೊಮ್ಮೆ ಅದೂ ಸರಿಯಾಗಿ ಸರಬರಾಜು ಆಗದೇ ಅರೆಬರೆ ಹೊಟ್ಟೆಯಲ್ಲೇ ಮಲಗಬೇಕು ಎನ್ನುತ್ತಾರೆ ಅವರು.[ಅವ್ಯವಸ್ಥೆ ವಿರುದ್ಧ ಸಿಡಿದೆದ್ದ ಯೋಧನ ವಿರುದ್ಧ ಬಿಎಸ್ಎಫ್ ಕಿಡಿ]

ಯಾದವ್ ಮಾಡಿರುವ ಆರೋಪಗಳಲ್ಲಿ ಅದೆಷ್ಟು ಸತ್ಯವಿದೆ ಅನ್ನೋದು ತನಿಖೆ ನಂತರ ಸಾಬೀತಾಗುತ್ತದೆ. ಆದರೆ, ನಿಜವಾಗಿಯೂ ಭಾರತದ ಸೈನಿಕರಿಗಾಗಿ ಸಿದ್ಧಪಡಿಸಿರುವ ಡಯೆಟ್ ನಲ್ಲಿ ಏನಿದೆ ? ಅಷ್ಟೇ ಅಲ್ಲ, ಜಗತ್ತಿನ ಪ್ರಮುಖ ಮಿಲಿಟರಿ ಶಕ್ತಿಗಳಾದ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿಗಳಲ್ಲಿ ಅಲ್ಲಿನ ಸೈನಿಕರಿಗೆ ಏನು ನೀಡುತ್ತಾರೆಂಬ ಸಂಕ್ಷಿಪ್ತ ಮಾಹಿತಿ ಇಲ್ಲಿ ನಿಮಗಾಗಿ.

ರೋಟಿ, ದಾಲ್ ಜತೆ ಚಿಕನ್ ಸಹ ಉಂಟು

ರೋಟಿ, ದಾಲ್ ಜತೆ ಚಿಕನ್ ಸಹ ಉಂಟು

ಭಾರತದಲ್ಲಿನ ಸೈನಿಕರಿಗೆ ನೀಡಲಾಗುವ ಊಟಕ್ಕೆ ನಿಗದಿಪಡಿಸಿರುವ ಮೆನು ಪ್ರಕಾರ, ನಮ್ಮ ಯೋಧರಿಗೆ ಬೆಳಗ್ಗೆ ನೀಡಲಾಗುವ ತಿಂಡಿಯಲ್ಲಿ ಪೂರಿ ನೀಡಬೇಕು. ಪೂರಿ, ಪಲ್ಯ ಇಲ್ಲವಾದರೆ ರೊಟ್ಟಿ, ಪಲ್ಯ ಕಡ್ಡಾಯ. ಆಲೂಗೆಡ್ಡೆ ಪಲ್ಯ, ಕುಂಬಳಕಾಯಿ ಪಲ್ಯ ಕಡ್ಡಾಯ. ಇದರ ಜತೆಗೆ ನಂಚಿಕೆಗಾಗಿ ಹಸಿರು ಮೆಣಸಿನಕಾಯಿ, ನೀರುಳ್ಳಿ ತುಂಡುಗಳನ್ನು ನೀಡಬೇಕು. ಮಧ್ಯಾಹ್ನ, ರಾತ್ರಿ ಊಟಕ್ಕೆ ರೋಟಿ, ದಾಲ್, ತರಕಾರಿ ಪಲ್ಯ, ಹಾಲು ಅಥವಾ ಮೊಟ್ಟೆ, ಅನ್ನ, ಸಾಂಬಾರು. ಕೆಲವೊಮ್ಮೆ ಮಟನ್ ಅಥವಾ ಚಿಕನ್ ನೀಡಿದರೂ ಸಸ್ಯಾಹಾರಿಗಳಿಗೆ ಹಾಲು ನೀಡಬೇಕು.

ಬರ್ಗರ್, ಸಾಸ್ ಜತೆ ರುಚಿಕಟ್ಟಾದ ಊಟ

ಬರ್ಗರ್, ಸಾಸ್ ಜತೆ ರುಚಿಕಟ್ಟಾದ ಊಟ

ಅಮೆರಿಕದಲ್ಲಿ ನೀಡಲಾಗುವ ಊಟದಲ್ಲಿ ಸ್ಟಾರ್ಟರ್ ಗಳಾಗಿ ಚಿಲ್ಲಿ ವೆಜ್ ಬೀನ್ಸ್, ಸ್ಪಾಗೆಟಿ ಅಥವಾ ದನದ ಮಾಂಸದ ಪಲ್ಯ, ಸಸ್ಯಾಹಾರಿ ಬರ್ಗರ್, ಸಾಸ್, ಚಿಕೆನ್ ಫಾಜಿತಾ ಟಾರ್ಟಿಲಾ ನೀಡಲಾಗುತ್ತದೆ. ಇನ್ನು, ಸೈಡ್ ಡಿಷ್ ಆಗಿ ಅನ್ನ, ಮೆಕ್ಕೆಜೋಳ, ಡ್ರೈ ಫ್ರೂಟ್ಸ್, ಬ್ರೆಡ್, ಬೆಣ್ಣೆ, ತಿಂಡಿಗೆ ಬಿಸ್ಕೇಟ್ ಗಳು, ಪೌಂಡ್ ಕೇಕ್, ಚಾಕ್ಲೇಟ್, ಕೋಕೋ, ಡೈರಿ ಶೇಕ್ಸ್, ಕಾಫಿ, ಟೀ ಸೇರಿವೆ.

ಬೇಕರಿ ಐಟಂ, ಬೇಕರಿ ಫುಡ್ ಹೆಚ್ಚು ಆಪ್ತ

ಬೇಕರಿ ಐಟಂ, ಬೇಕರಿ ಫುಡ್ ಹೆಚ್ಚು ಆಪ್ತ

ತಿನಿಸುಗಳ ಲೆಕ್ಕಾಚಾರದಲ್ಲಿ ನೋಡಿದರೆ, ಅಮೆರಿಕದ ಡಯೆಟ್ ಚಾರ್ಟ್ ಗೆ ಹೋಲಿಸಿದರೆ, ಬ್ರಿಟನ್ ಸೈನಿಕರ ಡಯೆಟ್ ಚಾರ್ಟ್ ಕೊಂಚ ಚಿಕ್ಕದು. ಆದರೆ, ಇಲ್ಲಿ ಅಮೆರಿಕಕ್ಕಿಂತ ಹೆಚ್ಚಾಗಿ ಮಾಂಸದಡುಗೆ ಪಟ್ಟಿಯಿದೆ. ಇಲ್ಲಿ ಮುಖ್ಯವಾಗಿ ಚಿಕನ್ ಟಿಕ್ಕಾ ಮಸಾಲಾದಂತಹ ಕೋಳಿಮಾಂಸದಡುಗೆ ನೀಡಲಾಗುತ್ತದೆ. ಇದಲ್ಲದೆ, ಹಂದಿ ಮಾಂಸ ಜನಪ್ರಿಯ ಐಟಂ. ಇನ್ನು, ಟೀ, ಕಾಫಿ ಮಾಮೂಲು.

ಹಂದಿ, ಚಾಕೋಲೇಟ್ ಪಡ್ಡಿಂಗ್ ಅಂದ್ರೆ ಇಷ್ಟ

ಹಂದಿ, ಚಾಕೋಲೇಟ್ ಪಡ್ಡಿಂಗ್ ಅಂದ್ರೆ ಇಷ್ಟ

ಇನ್ನು, ಫ್ರಾನ್ಸ್ ನ ಸೈನಿಕರಿಗೆ ಮುಖ್ಯವಾಗಿ ಬಾತುಕೋಳಿ ಮಾಂಸ ಹಾಗೂ ಹಂದಿ ಮಾಂಸದಡುಗೆಯನ್ನು ಪ್ರಮುಖವಾಗಿ ನೀಡಲಾಗುತ್ತದೆ. ಇದರ ಜತೆಯಲ್ಲಿ ಕ್ರೀಮ್ ಚಾಕೋಲೇಟ್ ಪಡ್ಡಿಂಗ್, ಸುವಾಸನೆ ಭರಿತ ಹಾಲು, ಬೆಣ್ಣೆ ಮಾದರಿಯ ಡೀರ್ ಪೇಟ್ ಸಿಗಲಿದೆ. ಡೀಪ್ ಫ್ರೈ ಮಾಡಿದ ಮಾಂಸದ ಅಡುಗೆಗಳು ಇಲ್ಲಿ ಬಹು ಪ್ರಚಲಿತ.

ಆದ್ರೂ ಇರಲೇಬೇಕು ಮಾಂಸಾಹಾರ

ಆದ್ರೂ ಇರಲೇಬೇಕು ಮಾಂಸಾಹಾರ

ಇನ್ನು, ಜರ್ಮನಿಯಲ್ಲಿ ನೀಡಲಾಗುವ ಆಹಾರದಲ್ಲಿ ಬ್ರೆಡ್ ಕಡ್ಡಾಯವಾಗಿ ಇದ್ದೇ ಇರುತ್ತದೆ. ನಾವಿಲ್ಲಿ ರೋಟಿ ತಿಂದ ಹಾಗೆ ಅದೂ ಒಂದು ರೀತಿಯ ಸ್ಟಾರ್ಟರ್ ಇದ್ದಂತೆ. ಆದರೆ, ಇದರೊಂದಿಗೆ ವಿವಿಧ ಹಣ್ಣು, ತರಕಾರಿಗಳ ಜ್ಯೂಸ್, ಆಲೂಗೆಡ್ಡೆಯಿಂದ ತಯಾರಿಸಿದ ಪಲ್ಯ ಅಥವಾ ಇನ್ನಿತರ ಖಾದ್ಯಗಳು ನೀಡಲಾಗುತ್ತದೆ. ಆಗಾಗ ಕುರುಕುಲು ತಿಂಡಿಗಳ ರೂಪದಲ್ಲಿ ಚೆರಿ ಹಣ್ಣಿನ ತಿನಿಸುಗಳು ಸಿಗುತ್ತವೆ. ಇನ್ನು, ಅವಸರಕ್ಕೆ ಸಿಗುವುದು ಬ್ರೆಡ್ ಹಾಗೂ ಜಾಮ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Many of the countries supply healthy food and maintains a balanced diet for their soldiers. Big military powers like America, Britain, France and Germany follow saparate, healthy diet chart. In the light of food rant in BSF, more informaitions are given.
Please Wait while comments are loading...