ರಾಹುಲ್ ಗಾಂಧಿ - ಹಾರ್ದಿಕ್ ಭೇಟಿ, ಕುತೂಹಲಕ್ಕೆ ತೆರೆ

ಅಹಮದಾಬಾದ್, ಅಕ್ಟೋಬರ್ 24: ಪಾಟೀದಾರ್ ಸಮುದಾಯದ 'ಬೆಂಕಿ ಚೆಂಡು' ಹಾರ್ದಿಕ್ ಪಟೇಲ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಪಕ್ಷಾಂತರ ಪರ್ವ, ಕಾಂಗ್ರೆಸ್ ತಂತ್ರಗಾರಿಕೆ, ಹಾರ್ದಿಕ್ ಅವರ ಬೆಂಬಲಿಗರ ನಡೆ ಎಲ್ಲವೂ ಕುತೂಹಲಕಾರಿಯಾಗಿದೆ.

ಈ ನಡುವೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಹಾರ್ದಿಕ್ ಅವರು ಭೇಟಿ ಮಾಡಿದ ಸುದ್ದಿ ಹರಡುತ್ತಿದೆ. ಅಹಮದಾಬಾದಿನಲ್ಲಿ ಭೇಟಿ ಮಾಡಿದರು, ದೆಹಲಿಯಲ್ಲಿ ಇಬ್ಬರು ಭೇಟಿಯಾದರಂತೆ ಎಂಬ ಗುಸುಗುಸು ಹಬ್ಬಿದೆ. ಆದರೆ, ನಾನು ಯಾರನ್ನು ಭೇಟಿ ಮಾಡಿಲ್ಲ ಎಂದು ಹಾರ್ದಿಕ್ ಅವರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

Did Hardik meet Rahul? The guess work continues

'ಬಿಜೆಪಿಯವರು ಗೂಢಚಾರಿಕೆ ಮಾಡುವುದರಲ್ಲಿ ಎತ್ತಿದ ಕೈ, ನಾನಿದ್ದ ಹೋಟೆಲ್ ಸಿಸಿಟಿವಿ ಪರೀಕ್ಷಿಸಿದ್ದರೆ, ಅದರಲ್ಲಿ ಅಚ್ಚರಿ ಪಡುವಂಥದ್ದು ಏನಿಲ್ಲ' ಎಂದು ಹಾರ್ದಿಕ್ ಟ್ವೀಟ್ ಮಾಡಿದ್ದಾರೆ. ರಾಹುಲ್ ಅವರನ್ನು ಭೇಟಿ ಮಾಡಿದರೆ ಎಲ್ಲರಿಗೂ ಹೇಳಿ ಹೋಗುತ್ತೇನೆ ಎಂದಿದ್ದಾರೆ.

ಆದರೆ, ಮೋದಿ ವಿರೋಧಿ ಬಣದ ಯುವ ಪಡೆಯನ್ನು ಸೆಳೆಯಲು ಕಾಂಗ್ರೆಸ್ ಇನ್ನಿಲ್ಲದ್ದಂತೆ ಯತ್ನಿಸುತ್ತಿದೆ. ಜಿಗ್ನೇಶ್ ಮೇವಾನಿ, ಅಲ್ಪೇಶ್ ಠಾಕೂರ್ ಹಾಗೂ ಹಾರ್ದಿಕ್ ಪಟೇಲ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಪೈಕಿ ಅಲ್ಪೇಶ್ ಠಾಕೂರ್ ಅವರು ಕಾಂಗ್ರೆಸಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+