• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೆಲ್ ಕಂಪನಿಗಳನ್ನು ಮಟ್ಟ ಹಾಕಲು ನೋಟು ನಿಷೇಧದ ನೆರವು: ಮೋದಿ

|

ಅಪನಗದೀಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವವರಿಗೆ ಸೊಮವಾರ ಉತ್ತರ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಪನಗದೀಕರಣದಿಂದ ಹಲವಾರು ಶೆಲ್ ಕಂಪನಿಗಳನ್ನು ಮಟ್ಟ ಹಾಕಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಅಪನಗದೀಕರಣಕ್ಕೆ ಎರಡನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.

ಜಾಮೀನಿನ ಮೇಲಿರುವ ಸೋನಿಯಾ, ರಾಹುಲ್ ರಿಂದ ಆರೋಪ: ಗೇಲಿ ಮಾಡಿದ ಮೋದಿ

ಛತ್ತೀಸ್ ಗಢದ ಬಿಲಾಸ್ ಪುರದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಪನಗದೀಕರಣದಿಂದ ಶೆಲ್ ಕಂಪನಿಗಳನ್ನು ಮಟ್ಟ ಹಾಕಲು ಸಾಧ್ಯವಾಗಿದೆ. ಆದರೆ ನನಗೆ ದಿಗ್ಭ್ರಮೆ ಆಗಿದ್ದು ಏನೆಂದರೆ, ಜಾಮೀನಿನ ಮೇಲೆ ಹೊರಗಿರುವ ಕೆಲವು ಕಾಂಗ್ರೆಸ್ ನಾಯಕರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ನಾವು ನೋಟು ನಿಷೇಧ ಮಾಡಿದ್ದು ಜನರ ಕಲ್ಯಾಣಕ್ಕಾಗಿ. ಹಲವಾರು ಶೆಲ್ ಕಂಪನಿಗಳನ್ನು ಮಟ್ಟ ಹಾಕಿದ ಅಂಥ ನಿರ್ಧಾರವನ್ನು ಅವರು ಪ್ರಶ್ನಿಸುತ್ತಾರೆ ಎಂದರು.

ಅಪನಗದೀಕರಣದ ಎರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎದುರು ಪ್ರತಿಭಟನೆ ನಡೆಸಿದ್ದರು. ನೋಟು ನಿಷೇಧ ಎಂಬುದು ದೇಶದ ಜನರಿಗೆ ಹಾಗೂ ಆರ್ಥಿಕತೆಗೆ ವಿಧ್ವಂಸಕಾರಿಯಾದದ್ದು ಮತ್ತು ದುರದೃಷ್ಟ ಎಂದಿದ್ದರು.

English summary
Prime Minister Narendra Modi on Monday hit back at the critics of demonetisation, saying that the move led to crackdown on several shell firms. Today, while addressing an election rally in poll bound Chhattisgarh's Bilaspur, the PM said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X