Republic Day 2026: ದೆಹಲಿ ಏರ್ ಶೋಗೆ ಹದ್ದುಗಳ ಕಾಟ ತಪ್ಪಿಸಲು 1,275 ಕೋಳಿ ಚಿಕನ್ ಬಳಕೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ವರ್ಷದಂತೆ ಜನವರಿ 26ರಂದು ಅದ್ಧೂರಿಯಾಗಿ 'ಗಣರಾಜ್ಯೋತ್ಸವ 2026' ಆಚರಿಸಲಾಗುತ್ತದೆ. ಈ ವೇಳೆ ನಡೆಯುವ ವೈಮಾನಿಕ ಪ್ರದರ್ಶನಕ್ಕೆ ಹದ್ದುಗಳ (ಕಪ್ಪು ಹದ್ದು) ಹಾರಾಟದಿಂದ ತೊಂದರೆ ಆಗದಂತೆ ತಡೆಯಲು ಇದೇ ಮೊದಲ ಬಾರಿಗೆ 1,275 ಕೆಜಿ ಮೂಳೆ ರಹಿತ ಕೋಳಿ ಮಾಂಸ ಬಳಕೆಗೆ ಸರ್ಕಾರ ಮುಂದಾಗಿದೆ.
ದೆಹಲಿ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧಗೊಳ್ಳುತ್ತಿದೆ. ಈ ಸಿದ್ಧತೆಯ ಭಾಗವಾಗಿ ವಾಯುಯಾನ ನಡೆಯುವ ಪ್ರದೇಶದಲ್ಲಿ ನಿತ್ಯ ಹಾರಾಡುವ ಪಕ್ಷಿಗಳ ನಿಯಂತ್ರಣಕ್ಕೆ ಭಾರತೀಯ ವಾಯುಪಡೆಯುವ ದೆಹಲಿ ರಾಜ್ಯ ಅರಣ್ಯ ಇಲಾಖೆ ಜೊತೆಗೆ ಸಮನ್ವಯ ಮಾಡಿಕೊಂಡು ಹೊಸ ಪ್ಲಾನ್ ಮಾಡಿದೆ. ಹದ್ದುಗಳು ಆಹಾರಕ್ಕಾಗಿ ಹಾರಾಡುತ್ತವೆ. ಬೇರೆ ಬೇರೆ ಸ್ಥಳಕ್ಕೆ ತೆರಳುತ್ತವೆ. ಅವುಗಳ ಹಾರಾಟ ಸ್ಥಳ ಗುರುತಿಸಿರುವ ಸರ್ಕಾರ, ಅವುಗಳಿಗೆ ತಿನ್ನಲು ಮೂಳೆ ಇಲ್ಲದ ಚಿಕನ್ ಅನ್ನು ಹಾಕಲು ಮುಂದಾಗಿದೆ.

ಇದರಿಂದಾಗಿ ವೈಮಾನಿಕ ಪ್ರದರ್ಶನ ಸ್ಥಳದಲ್ಲಿರುವ ಹದ್ದುಗಳು ಪ್ರತ್ಯೇಕ ಸ್ಥಳದಲ್ಲಿ ಹಾಕಿರುವ ಈ ಕೋಳಿ ಮಾಂಸಕ್ಕಾಗಿ ಆ ಪ್ರದೇಶಗಳಲ್ಲಿ ಹಾರಾಟ ಮುಂದುವರಿಸುತ್ತವೆ. ಅಲ್ಲಿಯೇ ಆಹಾರಕ್ಕಾಗಿ ದೃಷ್ಟಿ ನೆಡುವ ಕಾರಣ, ವೈಮಾನಿಕ ಪ್ರದರ್ಶನದ ಜಾಗದಲ್ಲಿ ಅವುಗಳ ಬರದಂತೆ ತಡೆಯುವ ಪ್ಲ್ಯಾನ್ ಇದಾಗಿದೆ. ಈ ಕ್ರಮವು ವಿಮಾನ ಮತ್ತು ಪೈಲಟ್‌ಗಳಿಗೆ ಗಂಭೀರ ಅಪಾಯ ಉಂಟುಮಾಡುವ ಫೈಟರ್ ಜೆಟ್‌ಗಳು ಕಡಿಮೆ ಎತ್ತರದಲ್ಲಿ ಹಾರುವಾಗ ಪಕ್ಷಿಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲಿದೆ.
ಪಕ್ಷಿಗಳ ನಿರ್ವಹಣೆ ಕ್ರಮ ಜಾರಿ ಹೇಗೆ?
ಈ ಕಪ್ಪು ಹದ್ದುಗಳು ಸಾಮಾನ್ಯವಾಗಿ ದೆಹಲಿಯಲ್ಲಿ ಕಂಡು ಬರುತ್ತವೆ. ಅವುಗಳು ತೆರೆದ ಸ್ಥಳಗಳಲ್ಲಿ ಆಹಾರಕ್ಕೆ ಹಾರಾಡುತ್ತಿರುತ್ತವೆ. ಸೂಕ್ಷ್ಮ ಪ್ರದೇಶವಾದ ವಾಯು ಪ್ರದರ್ಶನ ಸ್ಥಳದಿಂದ ಅವುಗಳನ್ನು ದೂರ ಇಡಲು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಯು ಆಯ್ದ ಸ್ಥಳಗಳಲ್ಲಿ ಕೋಳಿ ಮಾಂಸದ ಸಣ್ಣ ಸಣ್ಣ ತುಂಡುಗಳನ್ನು ಎಸೆಯಲಿದ್ದಾರೆ. ವಾಯು ಪ್ರದರ್ಶನ ಸ್ಥಳದಿಂದ ದೂರದ ಸ್ಥಳಗಳಲ್ಲಿ ಮಾಂಸ ಎಸೆಯಲಾಗುತ್ತದೆ. ಇದರಿಂದ ಪಕ್ಷಗಳು ಆ ಪ್ರದೇಶಗಳಲ್ಲಿ ಹೆಚ್ಚಾಗಿ ತೊಡಗುವ ಕಾರಣಕ್ಕೆ ಪ್ರದರ್ಶನ ನಿರ್ವಿಘ್ನವಾಗಿ ಜರುಗಲಿದೆ.
ಗಣರಾಜ್ಯೋತ್ಸವ ಮುನ್ನ ದೆಹಲಿಯಲ್ಲಿ ಪ್ರತಿ ವರ್ಷವು ಇಂತಹ ಸಿದ್ಧತೆಗಳನ್ನು ಆರಂಭಿಸಲಾಗುತ್ತದೆ. ಆದರೆ ಎಮ್ಮೆ ಮಾಂಸದ ಬದಲಿಗೆ ಕೋಳಿ ಮಾಂಸವನ್ನು ಬಳಸಲಾಗುವುದು. ರಾಷ್ಟ್ರೀಯ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ವನ್ಯಜೀವಿ ಸುರಕ್ಷತೆಯನ್ನು ಕಾಪಾಡುವಾಗ ಪಕ್ಷಿಗಳ ಚಲನೆಯನ್ನು ಸುಗಮವಾಗಿ ನಿರ್ವಹಿಸಲು ಈ ಬದಲಾವಣೆ ಅಗತ್ಯವಾಗಿದೆ.
20 ಸ್ಥಳಗಳಲ್ಲಿ ಕೋಳಿ ಮಾಂಸ ಎಸೆತ
ಜನವರಿ 15 ರಿಂದ ಜನವರಿ 26 ರವರೆಗೆ ರಾಜಧಾನಿಯಾದ್ಯಂತ ಈಗಾಗಲೇ ಗುರುತಿಸಿರುವ 20 ಸ್ಥಳಗಳಲ್ಲಿ ಈ ಕೋಳಿ ಮಾಂಸವನ್ನು ಎಸೆಯುವ ಕಾರ್ಯ ಮಾಡಲಾಗುತ್ತಿದೆ. ದೆಹಲಿಯ ಕೆಂಪು ಕೋಟೆ, ಜಾಮಾ ಮಸೀದಿ, ಮಂಡಿ ಹೌಸ್, ದೆಹಲಿ ಗೇಟ್ ಮತ್ತು ಮೌಲಾನಾ ಆಜಾದ್ ದಂತ ವಿಜ್ಞಾನ ಸಂಸ್ಥೆ ಮುಂತಾದ ಸ್ಥಳಗಳಲ್ಲಿ ಕಪ್ಪು ಹದ್ದುಗಳ ಹಾರಾಟ ಹೆಚ್ಚಿರುತ್ತದೆ.
ಪಕ್ಷಿಗಳ ಚಲನೆ ಆಧರಿಸಿ ಬೇರೆ ಸ್ಥಳಗಳನ್ನು ಆಯ್ಕೆ ಮಾಡಲಾಗಿದ್ದು, ಅಲ್ಲಿ ಮಾಂಸ ನಿತ್ಯವು ಎಸೆಯಲಾಗುತ್ತಿದೆ. ಪಕ್ಷಿಗಳಿಗೆ ಆಹಾರ ನೀಡುವ ಮೂಲಕ ಗಣರಾಜ್ಯೋತ್ಸವದ ಹೊತ್ತಿಗೆ ಕಾರ್ಯಕ್ರಮದ ಸ್ಥಳದಿಂದ ಅವುಗಳನ್ನು ದೂರವಿಡಲು ಅಧಿಕಾರಿಗಳು ಮುಂದಾಗಿದ್ದಾರೆ.
ರಾಜ್ಯ ಸರ್ಕಾರದಿಂದ ಟೆಂಡರ್
ಪಕ್ಷಗಳಿಗೆ ಬೇರೆ ಸ್ಥಳಗಳಲ್ಲಿ ಆಹಾರ ನೀಡುವ ಕಾರ್ಯಾಚರಣೆ ಸಂಬಂಧ ದೆಹಲಿ ರಾಜ್ಯ ಸರ್ಕಾರವು ಅಲ್ಪಾವಧಿಯ ಟೆಂಡರ್ ಕರೆದಿತ್ತು. 1,275 ಕೆಜಿ ಮೂಳೆಗಳಿಲ್ಲದ ಕೋಳಿ ಮಾಂಸ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಈ ಮಾಂಸವನ್ನು ವಜೀರಾಬಾದ್‌ನಲ್ಲಿರುವ ವನ್ಯಜೀವಿ ರಕ್ಷಣಾ ಕೇಂದ್ರಕ್ಕೆ ಹಂತ ಹಂತವಾಗಿ ತಲುಪಿಸಲಾಗುತ್ತದೆ. ನಿತ್ಯ ಸಮಾರು 200 ರಿಂದ 400 ಕೆಜಿ ಮಾಂಸ ವಿತರಿಸಲಾಗುತ್ತದೆ. ಪ್ರತಿ ಸ್ಥಳದಲ್ಲಿ ಸಣ್ಣ ಸಣ್ಣ ತುಂಡುಗಳಾಗಿ ಮಾಡಿದ ಅದಾಜು 20 ಕೆಜಿ ಮಾಂಸ ಎಸೆಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications