ದೆಹಲಿ: ಜಾಮೀನು ನೀಡುವಂತೆ ಹೈಕೋರ್ಟ್ ಮೊರೆ ಹೋದ ಸತ್ಯೇಂದರ್ ಜೈನ್

ನವದೆಹಲಿ, ನವೆಂಬರ್ 29: ನವದೆಹಲಿ ತಿಹಾರ್ ಜೈಲಿನಲ್ಲಿರುವ ಎಎಪಿ ಸಚಿವ ಸತ್ಯೇಂದ್ರ ಜೈನ್ ಜಾಮೀನು ನೀಡುವಂತೆ ಕೋರಿ ಮಂಗಳವಾರ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸತ್ಯೇಂದರ್ ಜೈನ್‌ಗೆ ಜಾಮೀನು ನೀಡಲು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್'ಗೆ ಮೇಲ್ಮನವಿ ಸಲ್ಲಿಸಲಾಗಿದೆ.

ಸತ್ಯೇಂದರ್ ಜೈನ್ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸ್ಥಿತಿಯಲ್ಲಿಲ್ಲ. ಅಥವಾ ಅವರಿಂದ ಪುರಾವೆಗಳು ಹಾಳಾಗುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ ಸೆಪ್ಟೆಂಬರ್ 30, 2017 ರಂದು ನೋಂದಾಯಿಸಲಾದ ಜಾರಿ ನಿರ್ದೇಶನಾಲಯದ ಇಸಿಐಆರ್(ಎಫ್‌ಐಆರ್‌ಗೆ ಸಮಾನ)ನಲ್ಲಿ ಉಲ್ಲೇಖಿಸಲಾಗಿದೆ. ಇದೇ ವಾರ ಮೇಲ್ಮನವಿ ಅರ್ಜಿಯು ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಈ ಹಿಂದೆ ಸತ್ಯೇಂದರ್ ಜೈನ್ ಜಾಮೀನು ಅರ್ಜಿ ವಜಾ

ಈ ಹಿಂದೆ ಸತ್ಯೇಂದರ್ ಜೈನ್ ಜಾಮೀನು ಅರ್ಜಿ ವಜಾ

ಕಳೆದ ನವೆಂಬರ್ 17ರಂದು ವಿಚಾರಣಾಧೀನ ನ್ಯಾಯಾಲಯವು ಸತ್ಯೇಂದರ್ ಜೈನ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಅಕ್ರಮ ಹಣವನ್ನು ಮರೆ ಮಾಚುವ ಸಾಧ್ಯತೆಯ ಹಿನ್ನೆಲೆ ಈ ಆದೇಶವನ್ನು ನೀಡಿತ್ತು. ಆದರೆ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ.

ತಮ್ಮ ಮನವಿಯಲ್ಲಿ, ಎಎಪಿ ನಾಯಕರು ಯಾವುದೇ ಆದಾಯವನ್ನು ಹೊಂದಿರದ ಕಾರಣ, ಪಿಎಂಎಲ್ಎ ಅಡಿಯಲ್ಲಿ ಅಪರಾಧದಲ್ಲಿ ಭಾಗವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ಆದಾಯ ಗಳಿಕೆ ಕುರಿತು ತಪ್ಪಾಗಿ ಅರ್ಥೈಸಿಕೊಂಡಿರುವ ಉಲ್ಲೇಖ

ಆದಾಯ ಗಳಿಕೆ ಕುರಿತು ತಪ್ಪಾಗಿ ಅರ್ಥೈಸಿಕೊಂಡಿರುವ ಉಲ್ಲೇಖ

ವಿಶೇಷ ನ್ಯಾಯಾಧೀಶರು ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇವಲ ವಸತಿ ನಮೂದುಗಳ ಆಧಾರದ ಮೇಲೆ ಆದಾಯವನ್ನು ಗುರುತಿಸಲು ಹೊರಟಿದ್ದಾರೆ. ಇದರಿಂದ ಪಿಎಂಎಲ್‌ಎಯನ್ನು ತೀವ್ರವಾಗಿ ತಪ್ಪಾಗಿ ತಿಳಿದುಕೊಂಡಂತೆ ಹಾಗೂ ತಪ್ಪಾಗಿ ಗ್ರಹಿಸಿದಂತೆ ತೋರುತ್ತಿದೆ. ಇದು ಕಾಯ್ದೆಯಡಿ ಶಿಕ್ಷಾರ್ಹ ಅಪರಾಧಕ್ಕೆ ಕಾರಣವಾಗುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. ನಿಗದಿತ ಅಪರಾಧ ಚಟುವಟಿಕೆಯ ಪರಿಣಾಮವಾಗಿ ಪಿಎಂಎಲ್‌ಎ ಅಡಿಯಲ್ಲಿ ಅಪರಾಧದ ಆದಾಯವನ್ನು ಪಡೆಯಬೇಕಾಗಿದೆ ಎಂದು ಅದು ಹೇಳಿದೆ.

ಸಚಿವ ಸತ್ಯೇಂದರ್ ಜೈನ್ ಅರೆಸ್ಟ್ ಆಗಿದ್ದು ಯಾವಾಗ?

ಸಚಿವ ಸತ್ಯೇಂದರ್ ಜೈನ್ ಅರೆಸ್ಟ್ ಆಗಿದ್ದು ಯಾವಾಗ?

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 30 ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಚಿವ ಸತ್ಯೇಂದರ್ ಜೈನ್ ಅನ್ನು ಬಂಧಿಸಿದ್ದರು. ಪ್ರಸ್ತುತ ಜೈನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿಬಿಐ ಸಲ್ಲಿಸಿದ ಪ್ರಕರಣದಲ್ಲಿ ಸೆಪ್ಟೆಂಬರ್ 6, 2019 ರಂದು ಅವರಿಗೆ ವಿಚಾರಣಾ ನ್ಯಾಯಾಲಯದಿಂದ ನಿಯಮಿತವಾಗಿ ಜಾಮೀನು ನೀಡಲಾಗಿತ್ತು.

ಅವರಲ್ಲದೆ, ವಿಚಾರಣಾ ನ್ಯಾಯಾಲಯವು ಇಬ್ಬರು ಸಹ-ಆರೋಪಿಗಳಾದ ವೈಭವ್ ಜೈನ್ ಮತ್ತು ಅಂಕುಶ್ ಜೈನ್ ಅವರಿಗೆ ಜಾಮೀನು ನಿರಾಕರಿಸಲಾಗಿದೆ. ಅಪರಾಧದ ಆದಾಯವನ್ನು ಮರೆಮಾಚುವಲ್ಲಿ ಅವರು ಜೈನ್‌ಗೆ "ಉದ್ದೇಶಪೂರ್ವಕವಾಗಿ" ಸಹಾಯ ಮಾಡಿದರು. ಹಣದ ಅಕ್ರಮ ವರ್ಗಾವಣೆಯಲ್ಲಿ "ಪ್ರಥಮ ಫೇಸಿ ತಪ್ಪಿತಸ್ಥ" ಎಂದು ಹೇಳಲಾಗಿದೆ.

ಅಕ್ರಮ ವರ್ಗಾವಣೆ ಕುರಿತು ಉಲ್ಲೇಖಿಸಿದ ಅಂಶಗಳು

ಅಕ್ರಮ ವರ್ಗಾವಣೆ ಕುರಿತು ಉಲ್ಲೇಖಿಸಿದ ಅಂಶಗಳು

ಕೋಲ್ಕತ್ತಾ ಮೂಲದ ಎಂಟ್ರಿ ಆಪರೇಟರ್‌ಗಳಿಗೆ ನಗದು ನೀಡುವ ಮೂಲಕ ಅಪರಾಧದ ಆದಾಯವನ್ನು ಮರೆಮಾಚುವಲ್ಲಿ ಜೈನ್ ನಿಜವಾಗಿ ತೊಡಗಿಸಿಕೊಂಡಿದ್ದಾರೆ ಎಂದು ವಿಚಾರಣಾ ನ್ಯಾಯಾಲಯವು "ಪ್ರಾಥಮಿಕವಾಗಿ" ಹೇಳಿದೆ. ಅಲ್ಲದೇ ಈ ಮೂರು ಕಂಪನಿಗಳ ಆದಾಯವು ಕಳಂಕರಹಿತವಾಗಿದೆ ಎಂದು ತೋರಿಸಲು ಷೇರುಗಳ ಮಾರಾಟ ಮಾಡಲಾಗಿದೆ ಎಂದು ಉಲ್ಲೇಖಿಸಿದೆ. ''ಈ ಪ್ರಕ್ರಿಯೆಯಿಂದ 4.61 ಕೋಟಿ ರೂಪಾಯಿ ಅಂದರೆ 1/3ರಷ್ಟು ಅಪರಾಧದ ಆದಾಯವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ.

ಇದಲ್ಲದೆ, ಜೈನ್ ಅವರು ತಮ್ಮ ಕಂಪನಿಯಲ್ಲಿ ಜೆಜೆ ಐಡಿಯಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಕೋಲ್ಕತ್ತಾ ಮೂಲದ ಎಂಟ್ರಿ ಆಪರೇಟರ್‌ಗಳಿಂದ ವಸತಿ ನಮೂದುಗಳನ್ನು ಪಡೆಯುವ ಮೂಲಕ 15 ಲಕ್ಷ ರೂಪಾಯಿ ಅಕ್ರಮ ಹಣವನ್ನು ಆದಾಯವಾಗಿ ಪರಿವರ್ತಿಸಲು ಇದೇ ವಿಧಾನವನ್ನು ಬಳಸಿದ್ದಾರೆ," ಎಂದು ಕೋರ್ಟ್ ಗಮನಿಸಿದೆ. ಅಕ್ರಮವಾಗಿ ಗಳಿಸಿದ ಹಣದ ಮೂಲವನ್ನು ಪತ್ತೆ ಹಚ್ಚಲು ಜೈನ್ ಉದ್ದೇಶಪೂರ್ವಕವಾಗಿ ಇಂತಹ ಚಟುವಟಿಕೆಯನ್ನು ಮಾಡಿದ್ದಾರೆ ಮತ್ತು ಅದರ ಪ್ರಕಾರ ಅಪರಾಧದ ಆದಾಯವನ್ನು ಕೋಲ್ಕತ್ತಾ ಮೂಲದ ಎಂಟ್ರಿ ಆಪರೇಟರ್‌ಗಳ ಮೂಲಕ ಅದರ ಮೂಲವನ್ನು ಅರ್ಥಮಾಡಿಕೊಳ್ಳಲು ಕಷ್ಟಕರವಾದ ರೀತಿಯಲ್ಲಿ ಮಾಡಲಾಗಿದೆ ಎಂದು ಅದು ಹೇಳಿದೆ.

"ಆದ್ದರಿಂದ ಆರೋಪಿ ಸತ್ಯೇಂದ್ರ ಕುಮಾರ್ ಜೈನ್ 1 ಕೋಟಿ ರೂಪಾಯಿಗೂ ಹೆಚ್ಚು ಹಣ ವರ್ಗಾವಣೆಯ ಅಪರಾಧದಲ್ಲಿ ಪ್ರಾಥಮಿಕವಾಗಿ ತೊಡಗಿಸಿಕೊಂಡಿದ್ದಾರೆ," ಎಂದು ವಿಚಾರಣಾ ನ್ಯಾಯಾಲಯವು ಎಂದು ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+