Delhi MCD Election Results: ಎಎಪಿಗೆ ಭರ್ಜರಿ ಗೆಲುವು
ದೆಹಲಿ ಡಿಸೆಂಬರ್ 7: ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಭರ್ಜರಿ ಜಯ ಸಾಧಿಸಿದೆ. ದೆಹಲಿಯ ಎಎಪಿ ಕಚೇರಿಯಲ್ಲಿ ಬೆಂಬಲಿಗರು ಪಕ್ಷದ ಧ್ವಜಗಳನ್ನು ಹಿಡಿದು ಸಿಹಿ ಹಂಚುವ ಮತ್ತು ಡ್ರಮ್‌ಗಳ ಬಡಿತಕ್ಕೆ ನೃತ್ಯ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ.
ಎಎಪಿ 136 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿದರೆ, ಬಿಜೆಪಿ 100 ಸ್ಥಾನ ಗಳಿಸಿದೆ. ಜೊತೆಗೆ ಕಾಂಗ್ರೆಸ್ ಹತ್ತು ವಾರ್ಡ್‌ಗಳನ್ನು ಗೆದ್ದು ಮೂರನೇ ಸ್ಥಾನದಲ್ಲಿದೆ. ಗೆಲುವಿನ ವಿಶ್ವಾಸವನ್ನು ಹೊಂದಿದ್ದ ಎಎಪಿ ಈಗಾಗಲೆ ರೋಸ್ ಅವೆನ್ಯೂನಲ್ಲಿರುವ ಎಎಪಿ ಕಚೇರಿಯಲ್ಲಿ ಬೆಳಿಗ್ಗೆಯಿಂದಲೇ ಧ್ವನಿವರ್ಧಕಗಳ ಮೂಲಕ ಹಾಡುಗಳನ್ನು ಮೊಳಗಿಸಿತ್ತು. ಇಡೀ ಆವರಣ ವರ್ಣರಂಜಿತ ಬಲೂನ್‌ಗಳಿಂದ ಅಲಂಕರಿಸಲ್ಪಟ್ಟಿತ್ತು.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಜಮಾಯಿಸಿದ್ದರು. ಮತ ಎಣಿಕೆ ಆರಂಭವಾಗಿ ಕೆಲ ಗಂಟೆಗಳ ಬಳಿಕ ಗೋಪಾಲ್ ರೈ, ಅತಿಶಿ ಮತ್ತು ದುರ್ಗೇಶ್ ಪಾಠಕ್ ಸೇರಿದಂತೆ ಬೆಂಬಲಿಗರು ಮತ್ತು ಮುಖಂಡರು ಕಚೇರಿಯಲ್ಲಿ ಜಮಾಯಿಸಲು ಪ್ರಾರಂಭಿಸಿದರು. ಎಣಿಕೆ ಪ್ರಗತಿಯಲ್ಲಿದೆ ಮತ್ತು ಸಂಖ್ಯೆಗಳು ಎಎಪಿ ಪರವಾಗಿ ತಿರುಗುತ್ತಿದ್ದಂತೆ ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಬೆಂಬಲಿಗರು ಎಎಪಿಯ ಅಧಿಕೃತ ಚುನಾವಣಾ ಗೀತೆ 'ಅಚ್ಚೆ ಹೊಂಗೆ 5 ಸಾಲ್, ಎಂಸಿಡಿ ಮೇ ಭಿ ಕೇಜ್ರಿವಾಲ್' ಎಂಬ ಹಾಡಿನೊಂದಿಗೆ ಬೀದಿಯಲ್ಲಿ ಸಾಲುಗಟ್ಟಿ ನಿಂತು ನೃತ್ಯ ಮಾಡಿದರು.

ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಫಲಿತಾಂಶದ ನಂತರ ಜನರನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಆರಂಭಿಕ ಟ್ರೆಂಡ್‌ಗಳಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ಬಿಜೆಪಿ 66 ಸ್ಥಾನಗಳಲ್ಲಿ ಮತ್ತು ಎಎಪಿ 30 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಕಾಂಗ್ರೆಸ್ ಕೇವಲ ಮೂರು ಸ್ಥಾನಗಳಲ್ಲಿ ಮುಂದಿತ್ತು.
ದೆಹಲಿ ಪಾಲಿಕೆ ಫಲಿತಾಂಶ
ಎಣಿಕೆ ಪ್ರಗತಿಯಾಗುತ್ತಿದ್ದಂತೆ ಎಎಪಿ ಮತ್ತು ಬಿಜೆಪಿ ನಡುವಿನ ಅಂತರ ಕಡಿಮೆಯಾಯಿತು ಮತ್ತು ಬೆಳಿಗ್ಗೆ 9.05 ರ ಸುಮಾರಿಗೆ ಬಿಜೆಪಿ 107 ಸ್ಥಾನಗಳಲ್ಲಿ ಮತ್ತು ಎಎಪಿ 95 ರಲ್ಲಿ ಮುನ್ನಡೆ ಸಾಧಿಸಿತು. ಬೆಳಿಗ್ಗೆ 10.30 ರ ಸುಮಾರಿಗೆ ಎಎಪಿ (123) ಬಿಜೆಪಿ (108) ಗಿಂತ ಮುಂದಿತ್ತು. ಕಾಂಗ್ರೆಸ್ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹೆಚ್ಚಿನ ಎಕ್ಸಿಟ್ ಪೋಲ್‌ಗಳಲ್ಲಿ ಬಿಜೆಪಿ ವಿರುದ್ಧ ಎಎಪಿಗೆ ಭಾರಿ ಜಯದ ಸೂಚನೆಯಿದೆ ಮತ್ತು ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ.
ಎಎಪಿ 138 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ ಮತ್ತು ಕಾಂಗ್ರೆಸ್ ಕ್ರಮವಾಗಿ 136 ಮತ್ತು 129 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. MCD ಯ 250 ವಾರ್ಡ್‌ಗಳಿಗೆ ಡಿಸೆಂಬರ್ 4 ರಂದು ನಡೆದ ಚುನಾವಣೆಯಲ್ಲಿ 1,349 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಶೇ.50.48ರಷ್ಟು ಮತದಾನವಾಗಿತ್ತು.

2017ರ ಪೌರ ಚುನಾವಣೆಯಲ್ಲಿ 270 ವಾರ್ಡ್‌ಗಳಲ್ಲಿ ಬಿಜೆಪಿ 181ರಲ್ಲಿ ಗೆಲುವು ಸಾಧಿಸಿತ್ತು. ಅಭ್ಯರ್ಥಿಗಳ ಸಾವಿನಿಂದ ಎರಡು ಕ್ಷೇತ್ರಗಳಲ್ಲಿ ಮತದಾನ ನಡೆಯಲಿಲ್ಲ. ಎಎಪಿ 48 ವಾರ್ಡ್‌ಗಳನ್ನು ಮತ್ತು ಕಾಂಗ್ರೆಸ್ 27 ವಾರ್ಡ್‌ಗಳನ್ನು ಗೆದ್ದಿತ್ತು. ಆ ವರ್ಷದ ಮತದಾನದ ಶೇಕಡಾವಾರು ಪ್ರಮಾಣವು ಸುಮಾರು 53 ಆಗಿತ್ತು. ಈ ವರ್ಷ ಅತಿ ಹೆಚ್ಚು ಶೇಕಡ 65.72 ಮತದಾನವಾಗಿದೆ.












Click it and Unblock the Notifications