ದೆಹಲಿ: ಮದುವೆ ಸಮಾರಂಭದೊಂದಿಗೆ ವರನ ಮಾಸ್ಟರ್ ಪ್ಲಾನ್ ಕೊಲೆ!
ದೆಹಲಿ ಶ್ರದ್ಧಾ ವಾಕರ್ ಪ್ರಕರಣಕ್ಕೆ ನಿಕ್ಕಿ ಯಾದವ್ ಪ್ರಕರಣ ಸಾಮ್ಯತೆ ಹೊಂದಿದೆ. ಪೊಲೀಸ್ ವಿಚಾರಣೆಯಲ್ಲಿ ಬಯಲಾದ ಸತ್ಯಗಳಿವು.
ಹೊಸದಿಲ್ಲಿ ಫೆಬ್ರವರಿ 16: ದೆಹಯಲಿಯಲ್ಲಿ ಮತ್ತೊಂದು ಲಿವ್-ಇನ್ ಸಂಗಾತಿಯ ಹತ್ಯೆ ಪ್ರಕರಣ ಆತಂಕವನ್ನು ಹೆಚ್ಚಿಸಿದೆ. ನಾಲ್ಕು ವರ್ಷದ ತನ್ನ ಲಿವ್-ಇನ್ ಸಂಗಾತಿ ನಿಕ್ಕಿಯನ್ನು ಸಾಹಿಲ್ ಎಂಬಾತ ತನ್ನ ಮದುವೆಯ ದಿನ ಕೊಂದಿದ್ದಾನೆ. ಜೊತೆಗೆ ನಿಕ್ಕಿ ಮೃತದೇಹವನ್ನು ಫ್ರೀಡ್ಜ್‌ನಲ್ಲಿ ಇಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆಯಾದ ದಿನವೇ ಸಾಹಿಲ್ ನಿಕ್ಕಿ ಮೊಬೈಲ್‌ನಲ್ಲಿದ್ದ ತನ್ನ ಚಾಟ್‌ಗಳನ್ನು ಡಿಲೀಟ್ ಮಾಡಿದ್ದಾ ಎಂದು ತಿಳಿದು ಬಂದಿದೆ.
ಸದ್ಯ ಇವರಿಬ್ಬರ ಮೊಬೈಲ್ ಫೋನ್‌ಗಳನ್ನು ಪೊಲೀಸರು ತನಿಖಾಭಾಗವಾಗಿ ವಶಕ್ಕೆ ಪಡೆದಿದ್ದಾರೆ. ಸಾಹಿಲ್ ತನ್ನೊಂದಿಗಿದ್ದುಕೊಂಡು ನಿಶ್ಚಿತಾರ್ಥವಾಗಿದ್ದಾನೆ. ಜೊತೆಗೆ ವಿವಾಹ ಕೂಡ ಮಾಡಿಕೊಳ್ಳುತ್ತಿದ್ದಾನೆ ಎಂದು ನಿಕ್ಕಿಗೆ ಕೊಲೆಯಾದ ದಿನವೇ ಗೊತ್ತಾಗಿತ್ತು. ಹೀಗಾಗಿ ನಿಕ್ಕಿ ಸಾಹಿಲ್ ಗೆಹ್ಲೋಟ್ ನೊಂದಿಗೆ ಜಗಳವಾಡಿದ್ದಳು ಎಂದು ತಿಳಿದುಬಂದಿದೆ.

ಮದುವೆಯ ದಿನ ಕೊಲೆ
24 ವರ್ಷದ ಸಾಹಿಲ್ ಗೆಹ್ಲೋಟ್ ಫೆಬ್ರವರಿ 9 ರಂದು ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ದಿನ ಸ್ನೇಹಿತರೊಂದಿಗೆ ಗಂಟೆಗಳ ಕಾಲ ನೃತ್ಯ ಮಾಡಿದ್ದರು. ಮರುದಿನ ಮದುವೆಯ ದಿನ ನಿಕ್ಕಿ ಯಾದವ್ ಗೆ ಸಾಹಿಲ್ ಮದುವೆಯಾಗುತ್ತಿದ್ದಾನೆ ಎಂದು ತಿಳಿದಿದೆ. ಇದರಿಂದ ತನ್ನನ್ನು ಮದುವೆಯಾಗದೇ ಇದ್ದರೆ ಎಲ್ಲರಿಗೂ ವಿಚಾರ ತಿಳಿಸುವುದಾಗಿ ನಿಕ್ಕಿ ಬೆದರಿಕೆ ಹಾಕಿದ್ದಾಳೆ. ಇದರಿಂದಾಗಿ ಸಾಹಿಲ್ ಮೊಬೈಲ್ ಕೇಬಲ್‌ನಿಂದ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ಕುಟುಂಬ ಒಡೆತನದ ರೆಸ್ಟೋರೆಂಟ್ ಫ್ರಿಡ್ಜ್‌ನಲ್ಲಿ ಇರಿಸಿದ್ದನು. ನಂತರ ಸಾಹಿಲ್ ಮದುವೆ ಮಾಡಿಕೊಂಡಿದ್ದಾನೆ.
23 ವರ್ಷದ ನಿಕ್ಕಿ ಯಾದವ್ ಅವರು ಫೆಬ್ರವರಿ 9 ರಂದು ತಮ್ಮ ಬಾಡಿಗೆ ಮನೆಯಲ್ಲಿ ಭದ್ರತಾ ದೃಶ್ಯಗಳಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅವರು ಕಾಣಿಸಿಕೊಂಡಿಲ್ಲ. ಆಗ ಸಾಹಿಲ್ ಗೆಹ್ಲೋಟ್ ಬೇರೊಬ್ಬ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ಆಕೆಗೆ ತಿಳಿದಿರಲಿಲ್ಲ. ಅವರು 2018 ರಿಂದ ಒಟ್ಟಿಗೆ ವಾಸಿಸುತ್ತಿದ್ದರು. ಇವರಿಬ್ಬರು ಫಾರ್ಮಾಸ್ಯುಟಿಕಲ್ ಕಾಲೇಜು ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳುವಾಗ ಭೇಟಿಯಾದರು.

ಗೋವಾಕ್ಕೆ ತೆರಳಲು ನಿರ್ಧಾರ
ತನ್ನ ನಿಶ್ಚಿತಾರ್ಥದ ನಂತರ, ಸಾಹಿಲ್ ತನ್ನ ಸೋದರಸಂಬಂಧಿಯ ಕಾರನ್ನು ತೆಗೆದುಕೊಂಡು ರಾತ್ರಿ 1 ಗಂಟೆ ಸುಮಾರಿಗೆ ನಿಕ್ಕಿಯ ಮನೆಗೆ ತೆರಳಿದ್ದನು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸಾಹಿಲ್ ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸುತ್ತಿರುವುದು ತೋರಿಸುತ್ತದೆ. ಮುಂಜಾನೆ 5 ಗಂಟೆಯ ಸುಮಾರಿಗೆ ಅವರು ಹೊರಟು ಹೋಗುತ್ತಿರುವುದು ಕಂಡುಬಂದಿದೆ. ಅದೇ ದಿನ ಇಬ್ಬರು ಅದೇ ಕಾರಿನಲ್ಲಿ ದಕ್ಷಿಣ ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣಕ್ಕೆ ಗೋವಾಕ್ಕೆ ರೈಲು ಹಿಡಿಯಲು ಹೋದರು.
ನಿಕ್ಕಿ ಯಾದವ್ ಸಾಹಿಲ್ ಜೊತೆ ಗೋವಾಕ್ಕೆ ಹೋಗಲು ಬಯಸಿದ್ದರು. ಆದರೆ ಅವರು ಟಿಕೆಟ್ ಪಡೆಯಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅವರು ಹಿಮಾಚಲ ಪ್ರದೇಶದ ಯಾವುದೇ ಬೆಟ್ಟದ ಪಟ್ಟಣಕ್ಕೆ ಪ್ರವಾಸವನ್ನು ಬುಕ್ ಮಾಡಲು ಬಸ್ ನಿಲ್ದಾಣಕ್ಕೆ ಹೋಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಫೆಬ್ರವರಿ 10 ರಂದು ಕೊಲೆ
ಸಾಹಿಲ್ ನಿಕ್ಕಿಯನ್ನು ಬಿಡಲು ಯೋಜಿಸಿದ್ದರು ಮತ್ತು ಒಟ್ಟಿಗೆ ಹೋಗುವುದಾಗಿ ಭರವಸೆ ನೀಡುವ ಮೂಲಕ ಅವಳನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.
ಅವರಿಗೂ ಬಸ್ ಟಿಕೆಟ್ ಸಿಗದ ಕಾರಣ ಅಲ್ಲಿಂದ ತೆರಳಿದ್ದಾರೆ. ಇಬ್ಬರು ಉತ್ತರ ದೆಹಲಿಯ ಕಾಶ್ಮೇರೆ ಗೇಟ್‌ನಲ್ಲಿ ಕಾರನ್ನು ನಿಲ್ಲಿಸಿ ಸುಮಾರು ನಾಲ್ಕು ಗಂಟೆಗಳ ಕಾಲ ವಾಗ್ವಾದ ನಡೆಸಿದ್ದಾರೆ. ಸಾಹಿಲ್ ಅವರು ಎರಡು ಮನಸ್ಸಿನಲ್ಲಿದ್ದರು. ಅದು ಸಾಹಿಲ್‌ನ ಮದುವೆಯ ದಿನ ಮತ್ತು ಅವನ ಕುಟುಂಬ ಕರೆ ಮಾಡುತ್ತಲೇ ಇತ್ತು. ಫೆಬ್ರವರಿ 10 ರಂದು ಬೆಳಿಗ್ಗೆ 9 ಗಂಟೆಗೆ ಕಿರುಚಾಟದ ನಡುವೆ, ಸಾಹಿಲ್ ತನ್ನ ಚಾರ್ಜಿಂಗ್ ಕೇಬಲ್ ಬಳಸಿ ತನ್ನ ಗೆಳತಿ ನಿಕ್ಕಿಯ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಕ್ಕಿ ಫೋನ್ ತನ್ನೊಂದಿಗೆ ಇಟ್ಟುಕೊಂಡಿದ್ದ ಸಾಹಿಲ್
ಬಳಿಕ ತಮ್ಮ ಕುಟುಂಬದ ಧಾಬಾದಲ್ಲಿನ ಫ್ರೀಡ್ಜ್‌ನಲ್ಲಿ ನಿಕ್ಕಿಯ ದೇಹವನ್ನು ಇಟ್ಟಿದ್ದಾರೆ. ಧಾಬಾಕ್ಕೆ ಬೀಗ ಹಾಕಿ ಮದುವೆಗೆಂದು ಮನೆಗೆ ತೆರಳಿದ್ದಾನೆ. ಅವರ ಕುಟುಂಬ ಮತ್ತು ಸಂಬಂಧಿಕರು ಮಲಗಿದ್ದಾಗ, ಸಾಹಿಲ್ ಶವವನ್ನು ಸಾಗಿಸಲು 3.30 ರ ಸುಮಾರಿಗೆ ಮತ್ತೊಂದು ಕಾರಿನಲ್ಲಿ ಧಾಬಾಕ್ಕೆ ತೆರಳುತ್ತಾನೆ.
ಶವವನ್ನು ನದಿ ಅಥವಾ ಚರಂಡಿಗೆ ಎಸೆಯುವುದು ಸಾಹಿಲ್‌ನ ಯೋಜನೆಯಾಗಿತ್ತು. ಸಾಹಿಲ್ ನಿಕ್ಕಿಯ ಮೊಬೈಲ್ ಫೋನ್ ಅನ್ನು ಇಟ್ಟುಕೊಂಡಿದ್ದ ಎಂದು ಆರೋಪಿಸಲಾಗಿದೆ. ಅದನ್ನು ಪೊಲೀಸರು ಹಿಂಪಡೆದಿದ್ದಾರೆ. ಸಾಹಿಲ್ ತನ್ನ ಮತ್ತು ನಿಕ್ಕಿಯ ಫೋನ್‌ಗಳಿಂದ ಎಲ್ಲಾ ಡೇಟಾವನ್ನು ಅಳಿಸಿದ್ದನು. "ಅದು ದೊಡ್ಡ ಸಾಕ್ಷಿಯಾಗಿದ್ದರಿಂದ ತಮ್ಮ ಜಗಳಗಳ ಎಲ್ಲಾ ಚಾಟ್‌ಗಳನ್ನು ಅಳಿಸಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದುವೆಯಾಗಿ ತವರಿಗೆ ತೆರಳಿದ ನವ ವಧು
ಹತ್ಯೆಯ ಕುರಿತು ಸಾಹಿಲ್ ತನ್ನ ತಪ್ಪೊಪ್ಪಿಗೆಯಲ್ಲಿ ಉಲ್ಲೇಖಿಸಿರುವ ಎಲ್ಲಾ ಸ್ಥಳಗಳ ಭದ್ರತಾ ದೃಶ್ಯಗಳನ್ನು ಸಹ ಪೊಲೀಸರು ಪರಿಶೀಲಿಸುತ್ತಿದ್ದಾರೆ. ನಾಲ್ಕು ದಿನಗಳ ನಂತರ, ಮಂಗಳವಾರ (ಫೆಬ್ರವರಿ 14) ನೆರೆಹೊರೆಯವರು ನಿಕ್ಕಿ ಯಾದವ್ ನಾಪತ್ತೆಯಾಗಿದ್ದಾರೆಂದು ಪೊಲೀಸರಿಗೆ ವರದಿ ಮಾಡಿದ್ದಾರೆ. ಪೊಲೀಸ್ ವಿಚಾರಣೆಯಿಂದ ಎಲ್ಲಾ ಸತ್ಯಗಳು ಬಯಲಾಗಿವೆ. ಘಟನೆ ಬಳಿಕ ಸಾಹಿಲ್‌ನನ್ನು ಮದುವೆಯಾದ ಹುಡುಕಿ ತವರು ಮನೆಯಲ್ಲೇ ಉಳಿದಿದ್ದಾಳೆ.
ಕಳೆದ ವರ್ಷ ಶ್ರದ್ಧಾ ವಾಕರ್‌ಳನ್ನು ಆಕೆಯ ಗೆಳೆಯ ಅಫ್ತಾಬ್ ಪೂನವಾಲಾ ಕೊಂದ ಅಪರಾಧದೊಂದಿಗೆ ಈ ಅಪರಾಧವು ಸಾಮ್ಯತೆ ಹೊಂದಿದೆ. ಅವರು ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಸ್ವಲ್ಪಮಟ್ಟಿಗೆ ವಿಲೇವಾರಿ ಮಾಡಿದರು, ಭಾಗಗಳನ್ನು ವಾರಗಳವರೆಗೆ ತನ್ನ ಫ್ರಿಜ್‌ನಲ್ಲಿ ಇರಿಸಿದ್ದರು.












Click it and Unblock the Notifications