ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Vande Bharat Express: ದೆಹಲಿಯಿಂದ ಜೈಪುರ್‌ಗೆ ಕೇವಲ 105 ನಿಮಿಷದಲ್ಲಿ ಪ್ರಯಾಣ!

|
Google Oneindia Kannada News

ನವದೆಹಲಿ,ಜನವರಿ.13: ಭಾರತೀಯ ರೈಲ್ವೆ ಇಲಾಖೆಯ ನೂತನ ಯೋಜನೆಯ ಅನುಷ್ಠಾನದಿಂದ ಮುಂಬರುವ ದಿನಗಳಲ್ಲಿ ದೆಹಲಿ ಮತ್ತು ಜೈಪುರ ನಡುವಿನ 281.3 ಕಿ.ಮೀ ಅಂತರವನ್ನು ಕೇವಲ 1 ಗಂಟೆ 45 ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಹೌದು, ಮುಂಬರುವ 2023ರ ಮಾರ್ಚ್‌ ಅಂತ್ಯದೊಳಗೆ ಭಾರತೀಯ ರೈಲ್ವೆ ಇಲಾಖೆಯು ದೆಹಲಿ ಮತ್ತು ಜೈಪುರ ನಡುವೆ ವಂದೇ ಭಾರತ ಎಕ್ಸ್‌ಪ್ರೆಸ್‌ ಸಂಚಾರಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಸಾಮಾನ್ಯವಾಗಿ ಎಕ್ಸ್‌ಪ್ರೆಸ್‌ ವೇ ಮೂಲಕ ದೆಹಲಿಯಿಂದ ಜೈಪುರ ತಲುಪಲು 5-6 ಗಂಟೆಗಳು ತೆಗೆದುಕೊಳ್ಳುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ ಯೋಜನೆ ಅನುಷ್ಠಾನದ ಬಳಿಕ ದೆಹಲಿ ಮತ್ತು ಜೈಪುರ ನಡುವಿನ ಅಂತರವನ್ನು ಸಾರಿಗೆಯಲ್ಲಿ ಸಂಚರಿಸುವ ಸಮಯವನ್ನು ಅರ್ಧದಷ್ಟು ಕಡಿಮೆಗೊಳಿಸಲಿದೆ.

ಈ ಕುರಿತು ಜೈಪುರದ ಬಿಜೆಪಿ ಸಂಸದ ರಾಮಚರಣ್ ಬೋಹ್ರಾ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ರೈಲ್ವೆ ವಲಯದ ಸುಧಾರಣೆಗೆ ಸಂಬಂಧಿಸಿದಂತೆ ಸುಮಾರು 900 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ. ಮಾರ್ಚ್ 2023 ರ ಮೊದಲ ದೆಹಲಿ ಮತ್ತು ಜೈಪುರ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Delhi-Jaipur Vande Bharat Express Train to take just 105 minutes of travel time

ಸಂಗನೇರ್ ರೈಲು ನಿಲ್ದಾಣ ಅಭಿವೃದ್ದಿ !

ಮೂರು ಪ್ಲಾಟ್‌ಫಾರ್ಮ್‌ಗಳಿರುವ ಸಂಗನೇರ್ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ. ಜೈಪುರ ಮತ್ತು ಸವಾಯಿ ಮಾಧೋಪುರ್ ನಡುವಿನ ರೈಲು ಮಾರ್ಗಗಳನ್ನು ದ್ವಿಗುಣಗೊಳಿಸಲಾಗುವುದು. ಸಂಚಾರ ದಟ್ಟಣೆ ನಿವಾರಿಸಲು ಡಿಗ್ಗಿ-ಮಾಳಾಪುರ ಕ್ರಾಸಿಂಗ್‌ನಲ್ಲಿ ಅಂಡರ್‌ಪಾಸ್ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.

ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್‌ ಫ್ಯಾಕ್ಟರಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೆಮಿ ಹೈ-ಸ್ಪಿಡ್‌ ರೈಲನ್ನು ತಯಾರಿಸಲಾಗಿದೆ. ಇದು ಒಂದು ಗಂಟೆಗೆ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಆದರೆ ಟ್ರ್ಯಾಕ್‌ಗಳ ಸ್ಥಿತಿಗಳ-ಗತಿಗಳ ಅನುಗುಣವಾಗಿ ಗಂಟೆಗೆ ಗರಿಷ್ಠ 130 ಕಿಮೀ ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ದೆಹಲಿ ಮತ್ತು ಜೈಪುರ ನಡುವಿನ ವೇಗ ಗಂಟೆಗೆ 130 ಕಿ.ಮೀ. ಸರಾಸರಿ ವೇಗ ಗಂಟೆಗೆ 75 ಕಿಮೀ ಆಗಿರುತ್ತದೆ ಎಂಬ ಮಾಹಿತಿಯನ್ನು ಸಚಿವರು ನೀಡಿದರು.

ರಾಜಸ್ಥಾನದಿಂದ ದೆಹಲಿಗೆ ನಾಲ್ಕು ರೈಲುಗಳು !

ರೈಲ್ವೆ ಸಚಿವಾಲಯವು ರಾಜಸ್ಥಾನದಿಂದ ದೆಹಲಿಗೆ ನಾಲ್ಕು ರೈಲುಗಳನ್ನು ಓಡಿಸಲು ಯೋಜನೆ ರೂಪಿಸಲಾಗುತ್ತಿದೆ. ಜೈಪುರ, ಜೋಧಪುರ, ಕೋಟಾ ಮತ್ತು ಉದಯಪುರ ನಿಂದ ದೆಹಲಿಗೆ ನಾಲ್ಕು ರೈಲುಗಳ ಸಂಚಾರ ಆರಂಭವಾಗಲಿದೆ. ಈ ಯೋಜನೆಗೆ 500 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು. ಈಗಾಗಲೇ ಅಧಿಕಾರಿಗಳು ರೈಲಿಗಳ ಪ್ರಾಯೋಗಿಕ ಓಡಾಟ ಫ್ರಾರಂಭಿಸಿದ್ದು,ಎಲ್ಲ ಪ್ರಯೋಗಗಳು ಯಶಸ್ವಿಯಾಗಿವೆ. ಜೈಪುರ, ಮದರ್, ಅಜ್ಮೀರ್, ಉದಯಪುರ ಮತ್ತು ಶ್ರೀ ಗಂಗಾನಗರ ಮತ್ತು ಜೋಧಪುರದಲ್ಲಿ ಐದು ನಿರ್ವಹಣಾ ಡಿಪೋಗಳನ್ನು ಮಾಡಲಾಗುವುದರ ಜೊತೆಗೆ ಸೆಪ್ಟೆಂಬರ್ ಅಂತ್ಯದೊಳಗೆ ರಾಜಸ್ಥಾನದಲ್ಲಿ ಆರು ಹಳಿಗಳ ಮೇಲೆ ರೈಲು ಸಂಚರಿಸಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Delhi-Jaipur Vande Bharat Express Train to take just 105 minutes of travel time

ಈವರೆಗೂ ದೆಹಲಿಯಿಂದ ರಾಜಸ್ಥಾನದ ಕಡೆಗೆ ಸಂಚರಿಸಲಿರುವ ರೈಲುಗಳ ಟಿಕೆಟ್ ದರ ನಿಗದಿಯಾಗಿಲ್ಲ. ಆದರೇ ದೆಹಲಿ ಮತ್ತು ವಾರಣಾಸಿ ನಡುವೆ, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಟಿಕೆಟ್ ದರವು ಚೇರ್ ಕಾರ್‌ಗೆ ರೂ 1800 ಮತ್ತು ಎಕ್ಸಿಕ್ಯೂಟಿವ್ ಕೋಚ್‌ಗೆ ರೂ 3000 ಆಗಿದೆ.

English summary
With the implementation of the new scheme of the Indian Railway Department, the distance of 281.3 km between Delhi and Jaipur can be traveled in just 1 hour 45 minutes in the coming days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X