ಕಾರ್ತಿ ಚಿದಂಬರಂ ಬಂಧಿಸದಂತೆ ಹೈಕೋರ್ಟ್ ಸೂಚನೆ
ನವದೆಹಲಿ, ಮಾರ್ಚ್ 09: ಐಎನ್ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿಕೊಂಡಿರುವ ಕಾರ್ತಿ ಚಿದಂಬರಂಗೆ ಶುಕ್ರವಾರ ಮಧ್ಯಾಹ್ನ ಕೊಂಚ ನೆಮ್ಮದಿ ಸಿಕ್ಕಿದೆ. ಮಾರ್ಚ್ 20ರ ತನಕ ಬಂಧಿಸದಂತೆ ಜಾರಿ ನಿರ್ದೇಶನಾಲಯಕ್ಕೆ ದೆಹಲಿ ಹೈಕೋರ್ಟ್ ಸೂಚಿಸಿದೆ.
ಮಧ್ಯಂತರ ಆದೇಶ ಹೊರಡಿಸಿರುವ ದೆಹಲಿ ಹೈಕೋರ್ಟ್, ಮುಂದಿನ ವಿಚಾರಣೆ ತನಕ ಆದೇಶ ಜಾರಿಯಲ್ಲಿರಲಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಹಾಗೂ ಜಾರಿ ನಿರ್ದೇಶನಾಲಯ ಸಂಸ್ಥೆಗಳಿಗೆ ನೋಟಿಸ್ ಜಾರಿಗೂಳಿಸಲಾಗಿದೆ.

ಸದ್ಯ ಸಿಬಿಐ ವಶದಲ್ಲಿರುವ ಕಾರ್ತಿ ಚಿದಂಬರಂ ಅವರು ಜಾರಿ ನಿರ್ದೇಶನಾಲಯ ಸಂಸ್ಥೆಯಿಂದ ಬಂಧನ ಭೀತಿಯಲ್ಲಿದ್ದರು. ಈ ಕುರಿತಂತೆ ಹೈಕೋರ್ಟಿಗೆ ಅರ್ಜಿ ಹಾಕಿ, ನಿರೀಕ್ಷಣಾ ಭದ್ರತೆಗಾಗಿ ಮನವಿ ಮಾಡಿಕೊಂಡಿದ್ದರು.












Click it and Unblock the Notifications