Delhi Assembly Polls 2025: ಮತದಾರರ ನೋಂದಣಿ ಕುಸಿತ, ಎಎಪಿ ಆರೋಪವೇನು?
ನವದೆಹಲಿ, ಜನವರಿ 19: ನವ ದೆಹಲಿ ವಿಧಾನಸಭಾ ಚುಣಾವಣೆಯ ಚಟುವಟಿಕೆಗಳು ಗರಿಗೆದರಿವೆ. ಸುಮಾರು 27 ವರ್ಷಗಳ ನಂತರ ದೆಹಲಿಯಲ್ಲಿ ಕೇಂದ್ರ ಆಡಳಿತ ಪಕ್ಷ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಂತಹ ಬೃಹತ್ ಪಕ್ಷದೊಂದಿಗೆ ರಾಜ್ಯ ಆಡಳಿತ ಪಕ್ಷ ಆಮ್ ಆದ್ಮಿ ಪಕ್ಷವು ತೀವ್ರ ಪೈಪೋಟಿ ಒಡ್ಡಲು ಮುಂದಾಗಿದೆ. ಈ ವೇಳೆ ನಕಲಿ ಮತದಾರರ ಸೇರ್ಪಡೆ ಕುರಿತು ಮಾಜಿ ಸಿಎಮ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಯು ಬಿಜೆಪಿ ಮೇಲೆ ಆರೋಪ ಮಾಡಿದೆ.
ಫೆಬ್ರವರಿ 5 ರಂದು ಚುನಾವಣೆ ನಡೆಯಲಿದ್ದು, ಮತದಾನ ದಿನಗಳು ಸಮೀಪಿಸುತ್ತಿವೆ. ಎಎಪಿ ಮತ್ತು ಬಿಜೆಪಿ ಮಧ್ಯೆ ತೀವ್ರ ಹಣಾಹಣಿ ನಡೆಯಲಿದೆ. ಈ ವರ್ಷದ ಮೊದಲು ಚುನಾವಣೆಯಲ್ಲಿ ಪಕ್ಷಗಳ ಪ್ರಚಾರವು ವೇಗ ಪಡೆಯುತ್ತಿದೆ. ಈ ವೇಳೆ ಕೆಲವು ವಿಷಯಗಳು ಮುನ್ನೆಲೆಗೆ ಬರುತ್ತಿದೆ. ಮತದಾರರ ಪಟ್ಟಿಯಲ್ಲಿ ಚುನಾವಣಾ ಆಯೋಗದ ಗಮನ ಸೆಳೆದಿರುವ ಅತ್ಯಂತ ರೋಮಾಂಚಕಾರಿ ಅಂಶವೆಂದರೆ ಎಎಪಿ ಮತದಾರರ ಪಟ್ಟಿಯಲ್ಲಿ ಕುಶಲತೆಯಿಂದ ನಕಲಿ ಮತದಾರರನ್ನು ಸೇರಿಸುವ ಪಿತೂರಿ ನಡೆದಿದೆ ಎಂದು ಬಿಜೆಪಿ ವಿರುದ್ಧ ಗುಡುಗಿದೆ.

ಚುನಾವಣೆಯು ಪಾರದರ್ಶಕತೆಯಿಂದ ನಡೆಯಲು ಆದ್ಯತೆ ನೀಡಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಎಎಪಿ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಎಎಪಿಯು ಸಂಸದರು ಸೇರಿದಂತೆ ಕೇಂದ್ರ ಸರ್ಕಾರದ ನಾಯಕರು ಪಟ್ಟಿಯಲ್ಲಿ 'ನಕಲಿ ಮತದಾರರ' ಸೇರ್ಪೆಗೆ ಸಂಚು ನಡೆಸಿದ್ದಾರೆ. 80 ಹಾಗೂ 80ಕ್ಕಿಂತ ಮೇಲ್ಪಟ್ಟ ವಯೋಮಾನದವರಿಂದ ಅರ್ಜಿ ಹಾಕಿಸಿ ಸೇರಿಸುವ ಪ್ರಯತ್ನ ನಡೆದಿದೆ ಎಂದೆಲ್ಲ ಗುಡುಗಿದ್ದಾರೆ.
ಏತನ್ಮಧ್ಯೆ, ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮತ್ತು ಅಳಿಸುವಿಕೆಗೆ ಚುನಾವಣಾ ಸಂಸ್ಥೆಯ ಕಾರ್ಯವಿಧಾನವು ಕಠಿಣ ಮತ್ತು ಪಾರದರ್ಶಕವಾಗಿದೆ ಎಂದು ಹೇಳುವ ಮೂಲಕ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಈ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ.
ಮತ್ತೊಂದು ವಿಚಾರವೆಂದರೆ 2020 ರಲ್ಲಿ ದೆಹಲಿಯಲ್ಲಿ ಕೊನೆಯ ಬಾರಿಗೆ ಚುನಾವಣೆ ನಡೆದಾದ ಬಳಿಕ ಸುಮಾರು 14 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ ಕುಸತಿವಾಗಿದೆ ಎಂಬುದು ಖೇದನಿಯ ಸಂಗತಿ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಶೇಕಡಾ 20ರಷ್ಟು ಕಡಿಮೆ ಆಗಿದೆ ಎಂದು ಚುನಾವಣೆ ಆಯೋಗದ ಅಂಕಿ ಸಂಖ್ಯೆಗಳು ಮಾಹಿತಿ ನೀಡಿವೆ.
2025 ರಲ್ಲಿ ಒಟ್ಟು 05 ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸದಾಗಿ ನೋಂದಣಿ ಮಾಡಿಕೊಂಡರ ಸಂಖ್ಯೆ ಈ ಹಿಂದಿನ ಚುನಾವಣೆ ( 2020) ಆಗಿದ್ದ ನೋಂದಣಿಗಿಂತ ಕಡಿಮೆ ಇದೆ. ಲಕ್ಷ್ಮಿ ನಗರದಂ ಕ್ಷೇತ್ರದಲ್ಲಿ ಕಳೆದ ಬಾರಿಗಿಂತಲೂ ಈ ವರ್ಷ 15,213 ಕಡಿಮೆ ಮತದಾರರರು ನೋಂದಣಿ ಮಾಡಿಕೊಂಡಿದ್ದಾರೆ.
ರೋಹಿಣಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ 10,437 ಮಂದಿ ಕಡಿಮೆಯಾಗಿದ್ದಾರೆ. ದೆಹಲಿ ಕಂಟೋನ್ಮೆಂಟ್ ಕ್ಷೇತ್ರದಲ್ಲಿ ಮತದಾರರ ನೋಂದಣಿಯಲ್ಲಿ ಭಾರೀ ಕುಸಿತವಾಗಿದೆ. ಇಲ್ಲಿ ನೋಂದಾಯಿತರ ಸಂಖ್ಯೆ ಕಳೆದ ಬಾರಿ 1,29,338 ಇದ್ದದ್ದು ಈ ಬಾರಿ 78,893 ಕ್ಕೆ ಇಳಿದಿದೆ ಎಂದು ಆಯೋಗುವ ಮಾಹಿತಿ ನೀಡಿದೆ.
ಹೀಗೆ ಮತದಾರರು, ನಕಲಿ ಮತದಾರರ ಸೇರ್ಪಡೆ, ಕಡಿಮೆ ನೋಂದಾಯಿತರು ಸೇರಿದಂತೆ ಮಹತ್ವದ ವಿಚಾರಗಳಿಂದ ದೆಹಲಿ ಚುಣಾವಣೆ ಕುತೂಹಲದ ಕೇಂದ್ರವಾಗಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications