Delhi Assembley Election 2025: ಫ್ಲಾಟ್ ಹಂಚಿಕೆಗೆ ಎಎಪಿ-ಬಿಜೆಪಿ ಕಿತ್ತಾಟ: ಕಾಂಗ್ರೆಸ್ ನಾಯಕ
ನವದೆಹಲಿ, ಜನವರಿ 20: ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಅರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ರಾಜಕೀಯ ಪಕ್ಷಗಳ ಮಧ್ಯೆ ಆರೋಪ ಪ್ರತ್ಯಾರೋಪಗಳು, ಭರವಸೆ ಘೋಷಣೆಗಳು ನಡೆಯುತ್ತಿವೆ. ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಪಕ್ಷಗಳು ಫ್ಲಾಟ್ ಹಂಚಿಕೆ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಕಾಂಗ್ರೆಸ್ ಪಕ್ಷ ನಾಯಕ ರಾಜೀವ್ ಶುಕ್ಲಾ ಅವರು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ (JNNURM) ಅಡಿಯಲ್ಲಿ ನಿರ್ಮಿಸಲಾಗಿದ್ದ 35,744 EWS ಫ್ಲಾಟ್‌ಗಳಲ್ಲಿ ಈವರೆಗೆ ಕೇವಲ 4,833 ಫ್ಲಾಟ್‌ಗಳನ್ನು ಮಾತ್ರ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಉಳಿದವರಿಗೆ ಹಂಚಿಕೆ ಮಾಡುವಲ್ಲಿನ ವಿಳಂಬ ಧೋರಣೆಯನ್ನು ಅವರು ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

ನಿರ್ಮಾಣವಾಗಿರುವ ಫ್ಲಾಟ್‌ಗಳ ಹಂಚಿಕೆಯಲ್ಲಿ ರಾಜಕೀಯ ಮಾಡಲಾಗುತ್ತಿದೆ. ಇದರ ಹಂಚಿಕೆಯಿಂದ ಯಾವ ಪಕ್ಷಕ್ಕೆ ಕ್ರೆಡಿಟ್ ಸಿಗಬೇಕು ಎಂಬುದರ ಕುರಿತು ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿಯು ರಾಜಕೀಯ ಮಾಡುತ್ತಿವೆ. ಪರಸ್ಪರ ಕಿತ್ತಾಟಕ್ಕಿಳಿದಿವೆ ಎಂದರು.
52 ಸಾವಿರ ಫ್ಲಾಟ್‌ಗಳ ನಿರ್ಮಾಣ
ರಾಜೀವ್ ಶುಕ್ಲಾ ಅವರು ಹೇಳುವಂತೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ (JNNURM) ಅಡಿಯಲ್ಲಿ ದೆಹಲಿಯಲ್ಲಿ ಸುಮಾರು 14 ಕಡೆಗಳಲ್ಲಿ ಆರ್ಥಿಕವಾಗಿ ದುರ್ಬಲರಿಗೆ ವಾಸಕ್ಕೆ ಅನುಕೂಲವಾಗುವಂತೆ 52,344 ಫ್ಲಾಟ್‌ಗಳನ್ನು ನಿರ್ಮಿಸಲಾಗಿತ್ತು. ಇದಕ್ಕಾಗಿ ನಮ್ಮ ಕಾಂಗ್ರೆಸ್ ಬಜೆಟ್‌ನಲ್ಲಿ ಬರೋಬ್ಬರಿ 2,400ಕೋಟಿಗೆ ಅಧಿಕ ಹಣವನ್ನು ಹಂಚಿಕೆ ಮಾಡಿತ್ತು.
ಕೆಲವೇ ವರ್ಷಗಳ ಹಿಂದಷ್ಟೇ 35,744 ಫ್ಲಾಟ್‌ಗಳ ನಿರ್ಮಾಣ ಕಾಮಗಾರಿ ಕೆಲಸ ಮುಗಿದಿದೆ. ಹಂಚಿಕೆಗೆ ಫ್ಲಾಟ್‌ಗಳು ಸಿದ್ಧವಿದ್ದರು ಸಹಿತ ಕೇವಲ 4,833 ಫ್ಲಾಟ್‌ಗಳನ್ನು ಮಾತ್ರ ಬಡವರಿಗೆ ವಿತರಣೆ ಮಾಡಿ ಪತ್ರ ನೀಡಲಾಗಿದೆ. ಉಳಿದ ಬಾಕಿ ಫಲಾನುವಭಿಗಳಿಗೆ ಹಂಚದೇ ರಾಜಕೀಯ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ ಒಟ್ಟು 30,303 ಫ್ಲಾಟ್‌ಗಳು ತಲೆತ್ತಿದ್ದು, ಅವೆಲ್ಲವನ್ನು ಹಂಚಿಕೆ ಮಾಡಬಹುದಾಗಿದೆ. ಆದರೆ ಕೇಂದ್ರ ಆಡಳಿತ ಪಕ್ಷ ಬಿಜೆಪಿ ಹಾಗೂ ದೆಹಲಿ ರಾಜ್ಯ ಆಡಳಿತ ಎಎಪಿಯ ನಡುವಿನ ಕಿತ್ತಾಟದಿಂದಾಗಿ ಹಂಚಿಕೆ ಆಗದೇ ಹಾಗೆಯೇ ಉಳಿದಿವೆ. ಇನ್ನೂ ನಿರ್ಮಾಣ ಹಂದದಲ್ಲಿರುವ ಕೋಟ್ಯಾಂತರ ರೂಪಾಯಿ ವ್ಯಯಿಸಿ ಕಟ್ಟಲಾಗುತ್ತಿರುವ 16,600 ಫ್ಲಾಟ್‌ಗಳು ಶಿಥಿಲಾವಸ್ಥೆಗೆ ತಲುಪಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕೋರ್ಟ್ ಆದೇಶ ಪಾಲಿಸದ ಎಎಪಿ, ಬಿಜೆಪಿ
ಇದೇ ಪ್ಲಾಟ್ ಹಂಚಿಕೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ದೆಹಲಿ ಹೈಕೋರ್ಟ್ ಉನ್ನತ ಅಧಿಕಾರ ಸಮಿತಿ ರಚಿಸಿ ಶೀಘ್ರವೇ ಅರ್ಹರಿಗೆ ಫ್ಲಾಟ್‌ಗಳ ಹಂಚಿಕೆಗೆ ಸೂಚನೆ ನೀಡಿತು. ಹೀಗೆ ನ್ಯಾಯಲಯವು ಆದೇಶ ಹೊರಡಿಸಿದ್ದರೂ ಸಹಿತ ದೆಹಲಿ ರಾಜ್ಯ ಎಎಪಿ ಸರ್ಕಾರ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಈ ರೀತಿ ಧೋರಣೆಯು ಸರಿಯಲ್ಲ ಎಂದು ತಿಳಿಸಿದರು.
ಶೀಲಾ ದೀಕ್ಷಿತ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗ ದೆಹಲಿಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸ ಆಗಲು, ಇಲ್ಲಿನ ಸಮಸ್ಯ ಪರಿಹಾರಕ್ಕೆ ಫೆಬ್ರವರಿ 5 ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುಣಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications