ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ: ದೆಹಲಿಯಲ್ಲಿ ಈ ವರ್ಷ ಕನಿಷ್ಠ ಮಾಲಿನ್ಯ ದಾಖಲು

|
Google Oneindia Kannada News

ಬೆಂಗಳೂರು, ಅಕ್ಟೋಬರ್, 26: ಏಷ್ಯಾದ ನಗರಗಳಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯು ವಾಯುಮಾಲಿನ್ಯದ ನಗರ ಎಂದು ಸ್ಥಾನ ಪಡೆದುಕೊಂಡಿದೆ. ದೀಪಾವಳಿ ನಗರದ ದೆಹಲಿಯ ವಾಯು ಗುಣಮಟ್ಟದ ಮತ್ತಷ್ಟು ಹದಗೆಟ್ಟಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಗಳು ಬಹಿರಂಗಪಡಿಸಿವೆ.

ದೀಪಾವಳಿಯ ನಂತರ ದೆಹಲಿಯಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಗಾಳಿ ದಾಖಲಾಗಿದೆ. ಮತ್ತೊಂದೆಡೆ ಈ ವರ್ಷ ದೆಹಲಿಯು ಏಳು ವರ್ಷಗಳಲ್ಲೇ ಅತ್ಯಂತ ಕಡಿಮೆ ಮಾಲಿನ್ಯದ ದೀಪಾವಳಿಯನ್ನು ಆಚರಿಸಿದೆ ಎನ್ನಲಾಗುತ್ತಿದೆ. ಇದಕ್ಕೆ ಆಮ್ ಆದ್ಮಿ ಪಕ್ಷದ ನೇತೃತ್ವದ ಸರ್ಕಾರ ಮಾಲಿನ್ಯ ನಿಯಂತ್ರಣದ ಪ್ರಯತ್ನಗಳು ಎಂಬ ಮಾತು ಕೇಳಿ ಬಂದಿವೆ. ಆದರೆ ಮೊದಲೇ ದೆಹಲಿಯ ಗಾಳಿ ಉಸಿರಾಟಕ್ಕೆ ಯೋಗ್ಯವಲ್ಲದ ಸ್ಥಿತಿ ತಲುಪಿತ್ತು. ಈ ಮಧ್ಯೆ ಸುಪ್ರೀಂಕೋರ್ಟ್ ಸೂಚನೆ ಇದ್ದರೂ ನಗರದಲ್ಲಿ ನಿಯಮ ಮೀರಿ ಪಟಾಕಿ ಹೊಡೆಯಲಾಗಿದೆ.

ದೀಪಾವಳಿ ಬಳಿಕ ಸಿಎಂ ದೆಹಲಿ ಪ್ರವಾಸ: ಸಂಪುಟ ವಿಸ್ತರಣೆ ಫಿಕ್ಸ್‌ದೀಪಾವಳಿ ಬಳಿಕ ಸಿಎಂ ದೆಹಲಿ ಪ್ರವಾಸ: ಸಂಪುಟ ವಿಸ್ತರಣೆ ಫಿಕ್ಸ್‌

ನಗರದ ಹೊರ ಪ್ರದೇಶಗಳಲ್ಲಿ ರೈತರು ಸುಡುವ ಕೃಷಿ ತ್ಯಾಜ್ಯದ ಹೊಗೆ ಸಹ ನಗರವನ್ನು ಆವರಿಸಿ ನಿವಾಸಿಗಳ ಆರೋಗ್ಯಕ್ಕೆ ಕುತ್ತು ಒಡ್ಡುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಕಡಿಮೆ ವಾಯು ಮಾಲಿನ್ಯದ ದೀಪಾವಳಿ ಆಚರಣೆ ಹೇಗೆ ಸಾಧ್ಯ ಎಂದು ಹಲವು ಪ್ರಶ್ನಿಸಿದ್ದಾರೆ. ಆಮ್‌ ಆದ್ಮಿ ಪಕ್ಷದ ಆಡಳಿತ ವೈಫಲ್ಯವು ಇದಕ್ಕೆ ಕಾರಣ ಎಂದು ಕೆಲವು ದೂರಿದ್ದಾರೆ.

ದೀಪಾವಳಿ ವೇಳೆ ಶೇ. 30 ಕಡಿಮೆ ಮಾಲಿನ್ಯ

ದೀಪಾವಳಿ ವೇಳೆ ಶೇ. 30 ಕಡಿಮೆ ಮಾಲಿನ್ಯ

ಈ ಬಗ್ಗೆ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಮಾತನಾಡಿ, ''ಕಳೆದ ವರ್ಷಕ್ಕೆ ಹೋಲಿಸಿದರೆ ದೆಹಲಿಯಲ್ಲಿ ಈ ದೀಪಾವಳಿ ವೇಳೆ ಶೇಕಡಾ 30ರಷ್ಟು ಕಡಿಮೆ ಮಾಲಿನ್ಯ ಉಂಟಾಗಿದೆ. ಕಳೆದ ವರ್ಷ 462 ರಷ್ಟಿದ್ದ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ದೀಪಾವಳಿಯಂದು ಮಂಗಳವಾರ 323ರಷ್ಟು ದಾಖಲಾಗಿದೆ. ಈ ಮೂಲಕ ಆಮ್‌ ಆದ್ಮಿ ಆಡಳಿತ ವಾಯಮಾಲಿನ್ಯ ತಡೆ ಪ್ರಯತ್ನಗಳು ಸಫಲವಾಗಿದೆ'' ಎಂದು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ ದೆಹಲಿಯಲ್ಲಿನ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI)ವು 349ರಷ್ಟು 'ಅತ್ಯಂತ ಕಳಪೆ' ಮಟಕ್ಕೆ ಬಂದು ನಿಂತಿದೆ. ಇದೇ ವೇಳೆ ನೋಯ್ಡಾದಲ್ಲಿ 360, ಗುರುಗ್ರಾಮ್ 319 ದಾಖಲಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ದೆಹಲಿ ಮಾಲಿನ್ಯ ಬಗ್ಗೆ ಕೇಜ್ರಿವಾಲ್ ಪ್ರತಿಕ್ರಿಯೆ

ದೆಹಲಿ ಮಾಲಿನ್ಯ ಬಗ್ಗೆ ಕೇಜ್ರಿವಾಲ್ ಪ್ರತಿಕ್ರಿಯೆ

ದೆಹಲಿ ವಾಯುಮಾಲಿನ್ಯ ಕುರಿತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಮರ್ಥನೆ ನೀಡಿದ್ದಾರೆ. ನಗರದಲ್ಲಿ ಮಾಲಿನ್ಯ ತಡೆಗಟ್ಟಲು ದೆಹಲಿ ನಿವಾಸಿಗಳು ನೀಡಿದ ಸಹಕಾರ, ಮಾಡಿದ ಪ್ರಯತ್ನಗಳ ಫಲವಾಗಿ ನಗರದಲ್ಲಿ ಕನಿಷ್ಠ ವಾಯುಮಾಲಿನ್ಯದ ದೀಪಾವಳಿ ಆಚರಿಸಿದ್ದೇವೆ. ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ನಾವು ಇದೇ ರೀತಿ ಸಾಗಬೇಕು ಎಂದು ತಿಳಿಸಿದ್ದಾರೆ.

ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಗಾಳಿ ದಾಖಲಾಗಿದೆ. ಆದರೂ ಸಹ ಹವಾಮಾನದಲ್ಲಿನ ಬದಲಾವಣೆಗಳಿಂದಾಗಿ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷದ ದೆಹಲಿ ವಾಯು ಸ್ಥಿತಿ ಉತ್ತಮವಾಗಿದೆ. ಈ ಬಾರಿ ನಿಯಮ ಉಲ್ಲಂಘಿಸಿ ಪಟಾಕಿ ಹೊಡೆದದ್ದು ಹಾಗೂ ಕೋಲು ಸುಡುವಿಕೆ ಪ್ರಭಾವದಿಂದ ಕಳಪೆ ಗುಣಮಟ್ಟದ ಗಾಳಿ ಕಂಡು ಬಂದಿದೆ ಎಂದು ಅವರು ಎಎಪಿ ಸರ್ಕಾರದ ಆಡಳಿತದ ಪ್ರಯತ್ನಗಳನ್ನು ಸಮರ್ಥಿಸಿಕೊಂಡರು.

ದೆಹಲಿಯ 6ವರ್ಷದ ಗುಣಮಟ್ಟ ಮಾಹಿತಿ

ದೆಹಲಿಯ 6ವರ್ಷದ ಗುಣಮಟ್ಟ ಮಾಹಿತಿ

ದೆಹಲಿಯಲ್ಲಿ 2021ರಲ್ಲಿ ಇದೇ ದೀಪಾವಳಿ ವೇಳೆ AQI- 382, ​​2020 ರಲ್ಲಿ 414, 2019 ರಲ್ಲಿ 337, 2018 ರಲ್ಲಿ 281, 2017 ರಲ್ಲಿ 319 ಮತ್ತು 2016 ರಲ್ಲಿ 431 AQI ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿ ಅಂಶಗಳು ತಿಳಿಸಿವೆ. 0-50 ರ ನಡುವಿನ AQI ಅನ್ನು ಉತ್ತಮ, 51 ಮತ್ತು 100 'ತೃಪ್ತಿದಾಯಕ', 101 ಮತ್ತು 200 'ಮಧ್ಯಮ', 201 ಮತ್ತು 300 'ಕಳಪೆ', 301 ಮತ್ತು 400 'ಅತ್ಯಂತ ಕಳಪೆ' ಮತ್ತು 401 ಮತ್ತು 500 'ತೀವ್ರ' ಕಳಪೆ ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತದೆ ಎಂದು ಮಂಡಳಿ ತಿಳಿಸಿದೆ.

ಚಂಡಮಾರುತದಿಂದ ವಾಯುಮಾಲಿನ್ಯ ಕಡಿಮೆ

ಚಂಡಮಾರುತದಿಂದ ವಾಯುಮಾಲಿನ್ಯ ಕಡಿಮೆ

ಇತ್ತೀಚೆಗೆ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಸಿತ್ರಾಂಗ್ ಚಂಡಮಾರುತವು ದೆಹಲಿ ಎನ್‌ಸಿಆರ್ ಮತ್ತು ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ ದೀಪಾವಳಿಯ ಮಾಲಿನ್ಯ ತಗ್ಗಿಸಿದೆ. ಹೀಗಾಗಿಯೇ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ದೀಪಾವಳಿಯ ನಂತರದ ಬೆಳಿಗ್ಗೆ ಸ್ಪಷ್ಟವಾದ ಸ್ವಚ್ಛ ಆಕಾಶ, ಕನಿಷ್ಠ ಮಾಲಿನ್ಯ ಕಂಡು ಬಂದಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
Poor AQI recorded in New Delhi. New Delhi celebrates Deepavali festival with Minimum pollution this year, CM Arvind Kejriwal said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X