Watch Video: ಬಸ್ ನಿಲ್ಲಿಸಲಿಲ್ಲ ಅಂತ ಸಿಟ್ಟಿಗೆದ್ದ ಮಹಿಳೆ; ಚಾಲಕನ ಸ್ಟೇರಿಂಗ್‌ಗೆ ಕೈ ಹಾಕಿದ್ರು.. ಮುಂದೇನಾಯ್ತು?

ಬಸ್ ಚಾಲನೆ ಮಾಡುವಾಗ ಚಾಲಕ ಮತ್ತು ಮಹಿಳಾ ಪ್ರಯಾಣಿಕರ ಮಧ್ಯ ನಡೆದ ವಾಗ್ವಾದ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇಬ್ಬರ ಮಧ್ಯದ ಸಂಭಾಷಣೆ, ಮಹಿಳೆಸ್ಟೇರಿಂಗ್‌ಗೆ ಕೈ ಹಾಕಿ ಮಹಿಳೆ ತಡೆದ ಸಂಗತಿ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆ ದೆಹಲಿಯಲ್ಲಿ ನಡದಿದೆ ಎಂದು ವರದಿ ಆಗಿದೆ.

ಬಸ್ ಸಂಚಾರ ಮಾಡುವಾಗಲೇ ಮಹಿಳಾ ಪ್ರಯಾಣಿಕಳು ಮತ್ತು ಬಸ್ ಚಾಲಕನ ನಡುವೆ ತೀವ್ರ ವಾಗ್ವಾದ ನಡೆದಿತ್ತು. ರಸ್ತೆಯ ಮಧ್ಯದಲ್ಲಿ ಆಕೆ ಹೇಳಿದ ಸ್ಥಳದಲ್ಲಿ ಬಸ್ ನಿಲ್ಲಿಸಲು ಸೂಚಿಸಿದಾಗ ಚಾಲಕ ನಿರಾಕರಿಸಿದ್ದಾರೆ. ನೀವು ತಿಳಿಸಿದ ಸ್ಥಳದಲ್ಲಿ ಬಸ್ ನಿಲ್ದಾಣವಿಲ್ಲ, ಹಾಗಾಗಿ ಬಸ್ ನಿಲ್ಲಿಸುವುದು ಅಸಾಧ್ಯ. ಮುಂದೆ ನಿಲ್ದಾಣದಲ್ಲಿ ನಿಲ್ಲಿಸಲಾಗುವುದು ಎಂದು ಚಾಲಕ ಹೇಳುತ್ತಾನೆ.

Delhi Bus Viral Video

ಚಾಲಕನ ಕಾಲರ್ ಹಿಡಿದು ಮಹಿಳೆ ಬೆದರಿಕೆ

ಈ ಇಬ್ಬರ ಸಂಭಾಷಣೆಯ ತೀವ್ರ ವಾಗ್ದಾದಕ್ಕೆ ತಲುಪಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಸಿಟ್ಟಿಗೆದ್ದ ಮಹಿಳೆ ನೋಡ ನೋಡುತ್ತಿದ್ದಂತೆ ಸ್ಟೇರಿಂಗ್ ವೀಲ್ ಕಡೆಗೆ ಕೈ ಚಾಚಿ ನಿಲ್ಲಿಸುವಂತೆ ಆಗ್ರಹಿಸುತ್ತಾರೆ. ಚಾಲಕನ ಕಾಲರ್ ಹಿಡಿದಿದ್ದಲ್ಲದೇ ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕುತ್ತಿರುವುದು ಕೇಳಿಸುತ್ತದೆ. ಈ ಘಟನೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ರೀತಿಯ ವಿಭಿನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಚಾಲಕನಿಗೆ ತೊಂದರೆ ಒಡ್ಡುವುದರಿಂದ ಅಪಾಯ ಸಾಧ್ಯತೆ: ನೆಟ್ಟಿಗರು

ಈ ರೀತಿ ಬಸ್ ಚಾಲಕನಿಗೆ ಸ್ಟೇರಿಂಗ್ ಹಿಡಿದು ಅಡ್ಡಿಪಡಿಸುವುದರಿಂದ ಚಾಲಕ ನಿಯಂತ್ರಣ ಕಳೆದುಕೊಂಡರೆ ದೊಡ್ಡ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿದ್ದರೆ ಮುಂದೇನಾಗುತ್ತಿತ್ತು? ಎಂದು ಅನೇಕ ಬಳಕೆದಾರರು ಪ್ರಶ್ನಿಸಿದ್ದಾರೆ. ಅಲ್ಲದೇ ಕಾಲರ್‍‌ಗೆ ಕೈ ಹಾಕಿದಾಗ ಚಾಲಕನು ಕೋಪಗೊಂಡು ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿದ್ದರೆ ಮಹಿಳೆ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ಹೇಳಿದ್ದಾರೆ.

ಬಸ್ ಚಲಾಯಿಸುವಾಗ ಚಾಲಕನ ಕೆಲಸದಲ್ಲಿ ಹಸ್ತಕ್ಷೇಪ ಮಾಡಲು ಸ್ಪಷ್ಟವಾಗಿ ಕಾಣಿಸುತ್ತದೆ. ಚಾಲಕನನ್ನು ದೈಹಿಕ ಹಿಂಸಿಸುವುದು, ಬಸ್ ಒಳಗಿನವರಿಗೆ ಮಾತ್ರವಲ್ಲದೇ ಮುಂದೆ ಬರುವ ವಾಹನ ಸವಾರರ ಜೀವಕ್ಕೆ ಅಪಾಯ ಒಡ್ಡಿದಂತಾಗುತ್ತದೆ. ಈ ರೀತಿ ಮಾಡಬಾರದೆಂಬ ಸಾಮಾನ್ಯ ಜ್ಞಾನ ಇಲ್ಲವೇ ಎಂದು ಮತ್ತೊಬ್ಬರು ಕೇಳಿದ್ದಾರೆ.

ಪ್ರಯಾಣಿಕರೊಬ್ಬರು ನಿಗದಿತ ನಿಲ್ದಾಣಕ್ಕೂ ಮೊದಲೇ ನಿಲುಗಡೆ ಬಯಸಿದರೆ ಚಾಲಕ ಬಸ್ ನಿಲ್ಲಿಸುವುದು ಬಹುತೇಕ ಕಡಿಮೆ. ಪ್ರಯಾಣಿಕರು ಗೊತ್ತುಪಡಿಸಿದ ಬಸ್ ನಿಲ್ದಾಣವನ್ನು ಬಳಸಬೇಕೆಂದು ಒತ್ತಾಯಿಸುವುದು ಸರಿ ಇದೆ ಎಂದಿದ್ದಾರೆ. ಇನ್ನೊಬ್ಬರು ಒಂದು ವೇಳೆ ತುರ್ತು ಪರಿಸ್ಥಿತಿ ಎದುರಾದಾಗ ಮಾತ್ರವೇ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಸ್ಪಷ್ಟವಾಗಿ ತಿಳಿಸಿ ವಿನಂತಿಸಿಕೊಂಡರೆ ಕ್ಷಣ ಕಾಲ ನಿಲ್ಲಿಸುತ್ತಾರೆ. ಆದರೆ ತಮ್ಮ ಪರಿಸ್ಥಿತಿಯನ್ನು ವಿವರಿಸಬೇಕು. ದಿಢೀರನೇ ಚಾಲಕನ ಮೇಲೆ ಜೋರು ಮಾಡುವುದು ಸರಿಯಲ್ಲ ಎಂದಿದ್ದಾರೆ.

ಐದನೇಯ ಬಳಕೆದಾರರು, ಮಹಿಳೆ ಅಪಾಯಕಾರಿ ವರ್ತನೆ ಕಾಣುತ್ತದೆ. ಸಹ ಪ್ರಯಾಣಿಕರನ್ನು ಅಪಾಯಕ್ಕೆ ಸಿಲುಕಿಸಿರುವ ಆರೋಪದ ಮೇಲೆ ಗಲಾಟೆ ಮಾಡಿದ ಈ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಆಕೆಯನ್ನು ಬಂಧಿಸಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಶಿಸ್ತು, ಸಭ್ಯ ನಡವಳಿಕೆಯಿಂದ ವರ್ತಿಸಬೇಕು ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+