Live

Delhi Election 2025 Live: ದೆಹಲಿ ಗದ್ದುಗೆ ಏರುವವರು ಯಾರು? ಮತ್ತೆ ಕಮಲ್‌ ಮಾಡ್ತಾರಾ ಕೇಜ್ರಿವಾಲ್‌

ದೇಶದ ರಾಜಧಾನಿ ದೆಹಲಿಯಲ್ಲಿಇಂದು (ಫೆಬ್ರವರಿ 5,ಬುಧವಾರ) ಮತದಾನ ನಡೆಯಲಿದೆ. ಹಿಂದೆಂದೂ ಕಾಣದ ಜಿದ್ದಾ ಜಿದ್ದಿನ ಕುರುಕ್ಷೇತ್ರವಾಗಿರುವ ರಾಷ್ಟ್ರ ರಾಜಧಾನಿ ನವದೆಹಲಿಯ 70 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು ಎಎಪಿ, ಬಿಜೆಪಿ ಹಾಗೂ ಕಾಂಗ್ರೆಸ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ.

ದೆಹಲಿಯ 70 ಕ್ಷೇತ್ರಗಳಿಗೆ ಒಂದೇ ಹಂತದ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು (ಫೆಬ್ರವರಿ 5) ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ.ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ಒಟ್ಟು 1.56 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.ಕಣದಲ್ಲಿ 699 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ದೆಹಲಿಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ರಾಜ್ಯದ ಆಡಳಿತ ಪಕ್ಷ ಎಎಪಿ. ಈ ಬಾರಿ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್ ಮತ್ತು ಬಿಜೆಪಿ ತ್ರಿಕೋಣ ಸ್ಪರ್ಧೆ ಇದೆ.

Delhi assembly election Voting 2025 live updates kannada aap bjp congress

ಇನ್ನೂ ಚುನಾವಣಾ ಆಯೋಗ ಚುನಾವಣೆಯನ್ನು ನ್ಯಾಯಸಮತವಾಗಿ ನಡೆಸಲು ಸಕಲ ರೀತಿಯಲ್ಲಿ ತಯಾರಿ ನಡೆಸಿದೆ. 3 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಎಲ್ಲವೂ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಆದ್ದರಿಂದ ಚುನಾವಣಾ ಭದ್ರತೆಗೆ ಹೆಚ್ಚಿನ ಗಮನ ನೀಡಲಾಗಿದೆ. 150 ಪ್ಯಾರಾ ಮಿಲಿಟರಿ ಪಡೆಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಅಲ್ಲದೇ ದೆಹಲಿಯ ತುಂಬಾ 30,000 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. 5 ಗಂಟೆಯ ಒಳಗೆ ಮತಗಟ್ಟೆಗೆ ಬಂದವರಿಗೆ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ.

Feb 05, 2025, 5:59 pm IST

ದೆಹಲಿ ವಿಧಾನಸಭೆ ಚುನಾವಣೆ 2025. ಸಂಜೆ 5 ಗಂಟೆಯ ತನಕ ಶೇ 57ರಷ್ಟು ಮತದಾನವಾಗಿದೆ. 70 ಕ್ಷೇತ್ರಗಳಿಗೆ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಫೆಬ್ರವರಿ 8ರಂದು ಮತ ಎಣಿಕೆ ನಡೆಯಲಿದೆ.
Feb 05, 2025, 4:58 pm IST

ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿ ಜನತೆ ಮತಚಲಾಯಿಸಿ: ಸಂದೀಪ್‌ ಪಾಠಕ್‌
Feb 05, 2025, 3:39 pm IST

ಮತ ಚಲಾಯಿಸಿದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ

ಮತ ಚಲಾಯಿಸಿದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ
ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ತಮ್ಮ ಕುಟುಂಬದೊಂದಿಗೆ ಬಂದು ಮತ ಚಲಾಯಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಇದು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಪ್ರತಿಯೊಬ್ಬ ಮತದಾರರೂ ತಮ್ಮ ಮತ ಚಲಾಯಿಸುವಂತೆ ನಾನು ಮನವಿ ಮಾಡಲು ಬಯಸುತ್ತೇನೆ. ಇದು ನಮ್ಮ ಸಾಂವಿಧಾನಿಕ ಹಕ್ಕು ಮತ್ತು ನೈತಿಕ ಜವಾಬ್ದಾರಿಯಾಗಿದೆ. ಮತದಾನದ ಮೂಲಕ ನಾವು ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಬಹುದು. ನಮ್ಮ ಆಯ್ಕೆಯ ಸರ್ಕಾರವನ್ನು ರಚಿಸಬಹುದು. ಆದ್ದರಿಂದ ಪ್ರತಿಯೊಬ್ಬ ಮತದಾರರೂ ಮತ ಚಲಾಯಿಸುವಂತೆ ನಾನು ಒತ್ತಾಯಿಸುತ್ತೇನೆ' ಎಂದು ತಿಳಿಸಿದರು.
Feb 05, 2025, 3:22 pm IST

ಸೀಲಾಂಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್ ಗೌರ್ ಹೇಳಿದ್ದಿಷ್ಟು
Feb 05, 2025, 2:52 pm IST

ಈ ಬಾರಿಯ ದೆಹಲಿ ಚುನಾವಣೆ ಕುತೂಹಲಕಾರಿಯಾಗಿದ್ದು, ಸ್ವತಃ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೇ ಜೈಲಿಗೆ ಹೋಗಿದ್ದು, ನಂತರ ರಾಜೀನಾಮೆ ನೀಡಿರುವುದು, ಎಲ್ಲವೂ ಮತದಾರರ ಮುಂದಿದೆ. ಇದೆಲ್ಲವೂ ರಾಜಕೀಯ ಪಿತೂರಿ ಎನ್ನುತ್ತಿದ್ದರೂ ಮತದಾರರು ಇದನ್ನು ಹೇಗೆ ನೋಡಲಿದ್ದಾರೆ ಎನ್ನುವುದು ಬಹುಮುಖ್ಯವಾಗಲಿದೆ. ಎಎಪಿ ದೆಹಲಿಯಲ್ಲಿ ಅದೇ ಜನಪ್ರಿಯತೆ ಉಳಿಸಿಕೊಂಡು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾ? ಎಂಬ ಕುತೂಹಲ ದೇಶವನ್ನೇ ಕಾಡುತ್ತಿದೆ.
Feb 05, 2025, 2:33 pm IST

ದೆಹಲಿ ವಿಧಾನಸಭೆ ಚುನಾವಣೆ 2025. ಮಧ್ಯಾಹ್ನ 1 ಗಂಟೆಯ ತನಕ ದೆಹಲಿಯಲ್ಲಿ ಶೇ 33.31ರಷ್ಟು ಮತದಾನವಾಗಿದೆ. ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.
Feb 05, 2025, 2:05 pm IST

ದೆಹಲಿ ಚುನಾವಣೆಯ ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಗೆ ಶೂರುವಾಗಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಶೇಕಡಾ 33.31 ರಷ್ಟು ಮತದಾನ ಆಗಿದೆ ಎಂದು ಕೇಂದ್ರ ಚುನಾವಣೆ ಆಯೋಗ ಮಾಹಿತಿ ನೀಡಿದೆ. ಮಧ್ಯಾಹ್ನ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತಿತರ ಗಣ್ಯರು ಮತದಾನ ಮಾಡಿದ್ದಾರೆ.
Feb 05, 2025, 1:39 pm IST

ಮತಚಲಾಯಿಸಿದ ಕೇಜ್ರಿವಾಲ್‌ ಪತ್ನಿ ಸುನೀತಾ

ಮತಚಲಾಯಿಸಿದ ಕೇಜ್ರಿವಾಲ್‌ ಪತ್ನಿ ಸುನೀತಾ
ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಮತ ಚಲಾಯಿಸಿದರು. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ದೆಹಲಿಯ ಮತದಾರರು ಬುದ್ಧಿವಂತರಿದ್ದಾರೆ. ಅವರನ್ನು ನಾವು ನಂಬುತ್ತೇವೆ. ಅವರಿಗೆ ನಮ್ಮ ಮೇಲೆ ಭರವಸೆ ಇದೆ. ಇಲ್ಲಿನ ಜನರು ಗೂಂಡಾಗಿರಿಯನ್ನು ಎಂದಿಗೂ ಸಹಿಸುವುದಿಲ್ಲ ಸಹಿಸುವುದಿಲ್ಲ. ಆದ್ದರಿಂದ ದೆಹಲಿಯ ಜನರು ಸರಿಯಾದ ಆಯ್ಕೆ ಮಾಡುತ್ತಾರೆ ಎಂದು ನಾವು ದೃಢವಾಗಿ ನಂಬುದ್ದೇವೆ' ಎಂದು ಹೇಳಿದರು.
Feb 05, 2025, 1:24 pm IST

ಸುಪ್ರೀಂ ಕೋರ್ಟ್‌ ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡರಿಂದ ಮತದಾನ

ಸುಪ್ರೀಂ ಕೋರ್ಟ್‌ ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡರಿಂದ ಮತದಾನ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ ಚಲಾಯಿಸಿ ಮಾತನಾಡಿದ ಸುಪ್ರೀಂ ಕೋರ್ಟ್‌ ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, 'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಚುನಾವಣೆಯೂ ನಿರ್ಣಾಯಕವಾಗಿದೆ. ಚುನಾವಣೆಗೆ ಸಂಬಂಧಿಸಿದ ಪ್ರತಿಯೊಬ್ಬರಿಗೂ ಇದು ಮುಖ್ಯವಾಗುತ್ತದೆ. ಇದು ದೆಹಲಿಯಾಗಿರಲಿ, ದೇಶದಲ್ಲಿ ನಡೆಯುವ ಯಾವುದೇ ಚುನಾವಣೆಯಾಗಿರಲಿ, ಪ್ರತಿಯೊಂದು ಚುನಾವಣೆಯೂ ನಿರ್ಣಾಯಕವೆಂದೇ ನಾನು ಪರಿಗಣಿಸುತ್ತೇನೆ. ನಾವು ನಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ಆ ಮೂಲಕ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಜವಾಬ್ದಾರಿಯುತವಾಗಿ ಭಾಗವಹಿಸಬೇಕು. ಎಲ್ಲರೂ ಮನೆಯಿಂದ ಹೊರಬಂದು ಮತ ಚಲಾಯಿಸಬೇಕು' ಎಂದು ಹೇಳಿದರು.
Feb 05, 2025, 1:12 pm IST

ದೆಹಲಿ ವಿಧಾನಸಭೆ ಚುನಾವಣೆ 2025ರ ಮತದಾನದ ಬಳಿಕ ಮಾತನಾಡಿದ ಬಿಜೆಪಿ ನಾಯಕ ಮನೋಜ್ ತಿವಾರಿ, 'ಎಎಪಿ ದೆಹಲಿಯನ್ನು ರೋಗಗ್ರಸ್ತವಾಗಿಸಿದೆ. ಅವರು ದೆಹಲಿಯನ್ನು ಲೂಟಿ ಮಾಡಿದ್ದಾರೆ. ನಾವು ಈಗ ಕೆಲಸ ಮಾಡುತ್ತೇವೆ. ಈಗ ದೆಹಲಿಯ ಜನರು ನಮಗೆ ಅವಕಾಶ ನೀಡುತ್ತಾರೆ. ನಾವು ಹಣ, ಮದ್ಯ ಹಂಚಿಲ್ಲ. ದೆಹಲಿ ಜನರು ಮನೆಯಿಂದ ಹೊರಬಂದು ಮತದಾನ ಮಾಡಬೇಕು' ಎಂದು ಕರೆ ನೀಡಿದರು.
Feb 05, 2025, 1:00 pm IST

ದೆಹಲಿಯಲ್ಲಿ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಅವರ ಪತಿ ರಾಬರ್ಟ್ ವಾದ್ರಾ ಹಾಗೂ ಅವರ ಪುತ್ರ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್‌ ಸಂಸದೆ ಸೋನಿಯಾ ಗಾಂಧಿ ಅವರು ಸಹ ಮತ ಚಲಾಯಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ನನ್ನ ಪ್ರೀತಿಯ ದೆಹಲಿ ಜನರೇ ಎಂದು ಸಂದೇಶ ಹಂಚಿಕೊಂಡಿದ್ದಾರೆ.
Feb 05, 2025, 12:47 pm IST

ಎಎಪಿ ಪಕ್ಷವು ದೆಹಲಿಯನ್ನು ರೋಗಗ್ರಸ್ತಗೊಳಿಸಿದರು. ದೆಹಲಿಯನ್ನು ಲೂಟಿ ಮಾಡಿದರು. ಈಗ ನಾವು ಕೆಲಸ ಮಾಡುತ್ತೇವೆ. ಈಗ ದೆಹಲಿ ನಮಗೆ ಅವಕಾಶ ನೀಡಲಿದೆ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಹೇಳಿದರು.
Feb 05, 2025, 12:37 pm IST

ದೆಹಲಿಯ ಮತದಾರರಿಗೆ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಸಂದೇಶ

ದೆಹಲಿಯ ಮತದಾರರಿಗೆ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಸಂದೇಶ
ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ ಚಲಾಯಿಸಿದರು. ಇದೇ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನನ್ನ ಸಂದೇಶ ತುಂಬಾ ಸರಳವಾಗಿದೆ. ದೆಹಲಿಯ ಪ್ರತಿಯೊಬ್ಬ ಮತದಾರನೂ ಮನೆಯಿಂದ ಹೊರಗೆ ಬಂದು ಮತ ಚಲಾಯಿಸಬೇಕು. ಒಂದು ವೇಳೆ ನೀವು ಮತ ಚಲಾಯಿಸದೇ ಹೋದರೆ, ಮುಂದಿನ ದಿನಗಳಲ್ಲಿ ಯಾರನ್ನೂ ದೂಷಿಸುವ ಹಕ್ಕು ನಿಮಗಿಲ್ಲ' ಎಂದು ಹೇಳಿದರು.
Feb 05, 2025, 12:14 pm IST

ದೆಹಲಿ ಚುನಾವಣೆ: ಸೋಲೊಪ್ಪಿಕೊಂಡ ಸಚಿವ ಸಂತೋಷ್‌ ಲಾಡ್‌

ದೆಹಲಿ ಚುನಾವಣೆ: ಸೋಲೊಪ್ಪಿಕೊಂಡ ಸಚಿವ ಸಂತೋಷ್‌ ಲಾಡ್‌
ದೆಹಲಿ ಚುನಾವಣೆ ವಿಚಾರದಲ್ಲಿ ಸತ್ಯ ಹೇಳಬೇಕಾಗುತ್ತೆ, ಸರ್ವೇ ಪ್ರಕಾರ ನಮ್ಮ ಪಕ್ಷ 5-10 ಗೆಲ್ಲುತ್ತದೆ. ಆಪ್ ಪಕ್ಷ ಮೊದಲು, ಬಿಜೆಪಿ ಎರಡನೇ ಸ್ಥಾನದಲ್ಲಿ ಇದೆ. ರಾಹುಲ್ ಗಾಂಧಿ ಅವರನ್ನು ಇನ್ನು ದೇಶದ ಜನ ಅರ್ಥ ಮಾಡ್ಕೊಂಡಿಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು
Feb 05, 2025, 12:05 pm IST

ದೆಹಲಿಯಲ್ಲಿ ಭಾರತದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹಾಗೂ ಅವರ ಕುಟುಂಬದ ಸದಸ್ಯರು ಮತಚಲಾಯಿಸಿದ್ದಾರೆ.
Feb 05, 2025, 11:46 am IST

ದೆಹಲಿ ಚುನಾವಣೆ: ಮತಗಟ್ಟೆಗೆ ಆಗಮಿಸಿದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕುಟುಂಬ
Feb 05, 2025, 11:35 am IST

ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ದೆಹಲಿ ವಿಧಾನಸಭೆ ಚುನಾವಣೆ-2025 ಹಿನ್ನೆಲೆ ನಿರ್ಮಾಣ್ ಭವನದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
Feb 05, 2025, 11:07 am IST

ಮಹಾ ಕುಂಭಮೇಳದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ದೆಹಲಿ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಭಾರೀ ಸದ್ದು ಮಾಡಿತ್ತು. ಮತ್ತು ಅದನ್ನು ಬಿಜೆಪಿ ನಾಯಕರು ತುಂಬಾ ಚೆನ್ನಾಗಿ ರಾಜಕೀಯಕ್ಕೆ ಬಳಸಿಕೊಂಡಿದ್ದರು. ಇದು ಅಮಿತ್ ಶಾ ವಿರುದ್ಧ ಹೇಳಿಕೆಯಾಗಿ ಬಿಂಬಿತವಾಗದೆ ಹಿಂದೂ ಧರ್ಮದ ವಿರೋಧಿ ಹೇಳಿಕೆಯಾಗಿ ದೇಶದಾದ್ಯಂತ ಸದ್ದು ಮಾಡಿತ್ತು ಹೀಗಿರುವಾಗ ಇದು ದೆಹಲಿ ವಿಧಾನಸಭಾ ಚುನಾವಣೆ ಪರಿಣಾಮ ಬೀರುವ ಸಾಧ್ಯತೆ ಇದೆ
Feb 05, 2025, 10:57 am IST

ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಎಎಪಿ ಸಂಸದ ರಾಘವ್ ಚಡ್ಡಾ ಅವರು ಇಂದು ಮತದಾನ ಮಾಡಿದರು. ಜನರು ಮನೆಯಿಂದ ಹೊರಗೆ ಬಂದು ಮತದಾನ ಮಾಡಿ. ಪ್ರಜಾಪ್ರಭುತ್ವದ ಈ ಮಹಾನ್ ಹಬ್ಬದಲ್ಲಿ ಭಾಗವಹಿಸುವಂತೆ ನಾನು ಮನವಿ ಮಾಡಿದರು. ಆಮ್ ಆದ್ಮಿ ಪಕ್ಷವು ಸಾಕಷ್ಟು ಕಠಿಣ ಪರಿಶ್ರಮದಿಂದ, ಸತ್ಯ ಮತ್ತು ಪ್ರಾಮಾಣಿಕತೆಯಿಂದ ಚುನಾವಣೆಯನ್ನು ಎದುರಿಸಿದೆ. ಚುನಾವಣೆಯಲ್ಲಿ ಆಪ್‌ ಪಕ್ಷ ಮೇಲುಗೈ ಸಾಧಿಸುವುದನ್ನು ನಾನು ನೋಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Feb 05, 2025, 10:31 am IST

ದೆಹಲಿ ವಿಧಾನಸಭೆ ಚುನಾವಣೆ-2025. ರಾಷ್ಟ್ರಪತಿ ದ್ರೌಪದಿ ಮುರ್ಮು ದೆಹಲಿ ಚುನಾವಣೆಗೆ ರಾಷ್ಟ್ರಪತಿ ಭವನದ ಆವರಣದಲ್ಲಿನ ಡಾ. ರಾಜೇಂದ್ರ ಪ್ರಸಾದ್ ಕೇಂದ್ರಿಯ ವಿದ್ಯಾಲಯದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದರು.
Feb 05, 2025, 10:18 am IST

ದೆಹಲಿ ವಿಧಾನಸಭೆ ಚುನಾವಣೆ-2025ರ ಮತದಾನ ಬುಧವಾರ ನಡೆಯುತ್ತಿದೆ. ದೆಹಲಿ ಮುಖ್ಯಮಂತ್ರಿ, ಕಲ್ಕಾಜಿ ಕ್ಷೇತ್ರದ ಎಎಪಿ ಅಭ್ಯರ್ಥಿ ಅತಿಶಿ ಮತದಾನ ಮಾಡಿದರು.
Feb 05, 2025, 10:14 am IST

ದೆಹಲಿ ವಿಧಾನಸಭೆ ಚುನಾವಣೆ ಮತದಾನ ಬಿರುಸು ಪಡೆದುಕೊಂಡಿದೆ. 70 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 9 ಗಂಟೆಗೆ ಶೇ. 8.1 ರಷ್ಟು ಮತದಾನವಾಗಿದೆ. ಈಶಾನ್ಯ ದೆಹಲಿಯಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಇಲ್ಲಿ ಶೇ. 10.70% ರಷ್ಟು ಮತದಾನವಾಗಿದೆ. ಇನ್ನು ಮಧ್ಯ ದೆಹಲಿಯಲ್ಲಿ ಅತಿ ಕಡಿಮೆ ಮತದಾನವಾಗಿದೆ. ಇಲ್ಲಿ ಶೇ. 6.67% ರಷ್ಟು ಮತದಾನವಾಗಿದೆ.
Feb 05, 2025, 10:09 am IST

ದೆಹಲಿ ವಿಧಾನಸಭಾ ಚುನಾವಣೆ 2025 ಹಿನ್ನೆಯಲ್ಲಿ ಇಂದು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು ಚಾಂದನಿ ಚೌಕ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಇವರು ಸೇರಿದಂತೆ ಅನೇಕ ರಾಜಕೀಯ ನಾಯಕರು ತಮ ಚಲಾಯಿಸಿದ್ದಲ್ಲೆ, ಎಲ್ಲರೂ ಮತದಾನ ಮಾಡುವಂತೆ ಕರೆ ನೀಡಿದರು. ದೆಹಲಿ ಮತಗಟ್ಟೆಯಲ್ಲಿ ಹಿರಿಯ ನಾಯಕರು ಬಂದು ಆರಾಮದಾಯಕ ಮತದಾನ ಮಾಡಲು ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಹಲವರು ವ್ಹೀಲ್ ಚೇರ್‌ನಲ್ಲಿ ಬಂದು ಮತದಾನ ಹಕ್ಕು ಚಲಾಯಿಸಿದರು.
Feb 05, 2025, 9:58 am IST

ದೆಹಲಿ ವಿಧಾನಸಭೆ ಚುನಾವಣೆ-2025ರ ಮತದಾನ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯ ತನಕ ಶೇ 8ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. 70 ಸದಸ್ಯ ಬಲದ ವಿಧಾನಸಭೆಗೆ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.
Feb 05, 2025, 9:42 am IST

ದೆಹಲಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ಮನವಿ ಮಾಡಿದ್ದೇನೆ. ದೆಹಲಿಯ ಜನರು ಮತದಾನದಲ್ಲಿ ದಾಖಲೆಯನ್ನು ಸೃಷ್ಟಿಸಬೇಕೆಂದು ನಾನು ಬಯಸುತ್ತೇನೆ ಎಂದು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಹೇಳಿದರು.
Feb 05, 2025, 9:37 am IST

ದೆಹಲಿ ವಿಧಾನಸಭೆ ಚುನಾವಣೆ ಮತದಾನ ಪ್ರಕ್ರಿಯೆ ಜೋರಾಗಿದೆ. ಘಟಾನುಘಟಿ ನಾಯಕರು ಮತಚಲಾಯಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸಚಿವರಾದ ಎಸ್ ಜೈಶಂಕರ್ ಹಾಗೂ ಹರ್ದೀಪ್ ಸಿಂಗ್ ಪುರಿ ಅವರು ಮತ ಚಲಾಯಿಸಿದ್ದಾರೆ.
Feb 05, 2025, 8:57 am IST

ದೆಹಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಇಂಡಿಯಾ ಮೈತ್ರಿಕೂಟದಲ್ಲಿ ಒಂದಾಗಿರುವ ಎಎಪಿ, ಬಿಎಸ್‌ಪಿ, ಕಾಂಗ್ರೆಸ್‌ ಇಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ. ಅಧಿಕಾರಕ್ಕಾಗಿ ಹವಣಿಸುತ್ತಿರುವ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯ ತ್ರಿಕೋನ ಸ್ಪರ್ಧೆ ಉಂಟಾಗಿದೆ. ಇಂದು ಚುನಾವಣೆ ನಡೆಯುತ್ತಿದ್ದು, ಫಲಿತಾಂಶದಲ್ಲಿ ಸಿಗುವ ಮತಗಳ ಲೆಕ್ಕಾಚಾರದ ಮೆಲೆ ಟಫ್ ಫೈಟ್ ಬಗ್ಗೆ ಸ್ಪಷ್ಟತೆ ಸಿಗಲಿದೆ.
Feb 05, 2025, 8:42 am IST

ದೆಹಲಿ ವಿಧಾನಸಭೆ ಚುನಾವಣೆ-2025ರ ಮತದಾನ ನಡೆಯುತ್ತಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಿರ್ವಾಣ್ ಗಂಜ್ ಪ್ರದೇಶದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದರು. ಫೆಬ್ರವರಿ 5ರ ಬುಧವಾರ 70 ಸದಸ್ಯ ಬಲದ ವಿಧಾನಸಭೆಗೆ ಮತದಾನ ನಡೆಯುತ್ತಿದೆ. ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶ ನೀಡಲಾಗಿದೆ.
Feb 05, 2025, 8:16 am IST

ದೆಹಲಿ ವಿಧಾನಸಭೆ ಚುನಾವಣೆ ಮತಗಟ್ಟೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆ ಹೆಚ್ಚಳ. 3,000 ಸಾವಿರ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಕೆಲವು ಸ್ಥಳಗಳಲ್ಲಿ ಡ್ರೋನ್ ಕಣ್ಗಾವಲು ಸೇರಿದಂತೆ ವಿಶೇಷ ಭದ್ರತಾ ಕಲ್ಪಿಸಲಾಗಿದೆ. ದೆಹಲಿ ಪೊಲೀಸರು ಇಲ್ಲಿನ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜನೆ ಮಾಡಿದ್ದಾರೆ.
Feb 05, 2025, 8:08 am IST

ದೆಹಲಿ ವಿಧಾನಸಭೆ ಚುನಾವಣೆ 2025ರ ಮತದಾನ ಆರಂಭವಾಗಿದೆ. ಎಎಪಿ ಶಾಸಕ ದಿನೇಶ್ ಮೋಹನಿಯಾ ವಿರುದ್ಧ ಮಹಿಳೆಯೊಬ್ಬರು ಫ್ಲೈಯಿಂಗ್ ಕಿಸ್ ನೀಡಿದ ಆರೋಪವನ್ನು ಮಾಡಿ ದೂರು ನೀಡಿದ್ದಾರೆ. ಈ ಕುರಿತು ದೆಹಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ದೆಹಲಿಯ 70 ಸದಸ್ಯ ಬಲದ ವಿಧಾನಸಭೆಗೆ ಬುಧವಾರ ಮತದಾನ ನಡೆಯುತ್ತಿದೆ.
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+