ಭಾರತದ ನೌಕಾಸೇನೆಗೆ ಇನ್ನಷ್ಟು ಬಲ, 6 ಹೊಸ ಸಬ್ ಮೆರಿನ್ ನಿರ್ಮಾಣ
ನವದೆಹಲಿ, ಫೆಬ್ರವರಿ 01: ಭಾರತೀಯ ನೌಕಾಸೇನೆಯನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ 6 ಅತ್ಯಾಧುನಿಕ ಸಬ್ಮೆರಿನ್ ನಿರ್ಮಾಣ ಹಾಗೂ ಫ್ರಾನ್ಸ್ ನಿಂದ 2ಟಿ ನಿರ್ದೇಶಿತ ಕ್ಷಿಪಣಿಗಳನ್ನು ಖರೀದಿಸಲು ರಕ್ಷಣಾ ಇಲಾಖೆ ಮುಂದಾಗಿದೆ. ಸ್ವದೇಶಿ ಸಬ್ ಮೆರಿನ್ ನಿರ್ಮಾಣಕ್ಕಾಗಿ Defece Acquisition Council (DAC) 40000 ಕೋಟಿ ರೂ. ಅನುದಾನ ನೀಡಲು ಮುಂದಾಗಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ 111 ನೌಕಾ ಹೆಲಿಕಾಪ್ಟರ್ ನಿರ್ಮಾಣಕ್ಕೆ 21,738 ಕೋಟಿ ನೀಡಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ಒಪ್ಪಿಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಫ್ರೆಂಚ್ನಿರ್ಮಿತ ಚೇತಕ್ ಹೆಲಿಕಾಪ್ಟರ್ಬದಲಿಗೆ ಹೊಸ ಹೆಲಿಕಾಪ್ಟರ್ ಗಳನ್ನು ಖರೀದಿಸಲಾಗುತ್ತಿದೆ.
ಪ್ರಾಜೆಕ್ಟ್-751 ಹೆಸರಿನಲ್ಲಿ ಆರು ಅತ್ಯಾಧುನಿಕ ಸಬ್ಮೆರಿನ್ ನಿರ್ಮಾಣವಾಗಲಿದೆ. ನೂತನ ಸಬ್ಮೆರಿನ್ ನೌಕಾಸೇನೆಗೆ ಸಾಕಷ್ಟು ಉತ್ತೇಜನ ನೀಡಲಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ಹೇಳಿದ್ದಾರೆ.

ನೌಕಾಸೇನೆಗೆ ಉಪಯುಕ್ತವಾಗುವ ಹೆಲಿಕಾಪ್ಟರ್ ಯೋಜನೆಗೆ 21,738 ಕೋಟಿ ರು ವೆಚ್ಚವಾಗಲಿದೆ. ಇನ್ನು ಸಬ್ ಮೆರಿನ್ ನಿರ್ಮಾಣಕ್ಕೆ ನೆರವು ನೀಡಲು ರಷ್ಯಾ, ಫ್ರಾನ್ಸ್, ಜರ್ಮನಿ, ಸ್ವೀಡನ್ ನ ಹಡಗು ನಿರ್ಮಾಣ ಸಂಸ್ಥೆಗಳು ಮುಂದೆ ಬಂದಿವೆ.












Click it and Unblock the Notifications